ಭಾರತ ಎಂದಿದ್ದರೂ ಅತುಲ್ಯ ಎಂದ ಅಮೀರ್ ಖಾನ್

Posted By:
Subscribe to Oneindia Kannada

ನವದೆಹಲಿ, ಜ. 07: ಭಾರತ ಎಂದಿದ್ದರೂ ಅತುಲ್ಯ(ಇನ್ ಕ್ರೆಡಿಬಲ್). ಭಾರತದ ಹೆಮ್ಮೆಯನ್ನು ಸಾರುವ ಅಭಿಯಾನದ ಭಾಗವಾಗಿ ನಾನು ಕಾರ್ಯ ನಿರ್ವಹಿಸಿದ್ದು ನನ್ನ ಪುಣ್ಯ ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದ್ದಾರೆ. ಇನ್ ಕ್ರೆಡಿಬಲ್ ಇಂಡಿಯಾದ ನೂತನ ರಾಯಭಾರಿಯಾಗಿ ಬಿಗ್ ಬಿ ಅಮಿತಾಬ್ ಬಚ್ಚನ್ ಹೆಸರು ಅಂತಿಮವಾಗಿದೆ. ಗುಜರಾತಿನ ಪ್ರವಾಸೋದ್ಯಮ

ಇನ್ ​ಕ್ರೆಡಿಬಲ್ ಇಂಡಿಯಾ ಅಭಿಯಾನದೊಂದಿಗಿನ ಆಮೀರ್ ಖಾನ್ ಅವರ ಒಪ್ಪಂದದ ಅವಧಿ ಮುಗಿದಿದ್ದರಿಂದ ಅವರನ್ನು ಕೈಬಿಟ್ಟು ಮತ್ತೊಬ್ಬರನ್ನು ನೇಮಿಸಲಾಗುತ್ತಿದೆ. ಅಭಿಯಾನದಿಂದ ಅಮೀರ್ ಅವರನ್ನು ತೆಗೆದು ಹಾಕಲಾಗಿದೆ ಎಂಬ ಸುದ್ದಿ ಸರಿಯಲ್ಲ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸ್ಪಷ್ಟಪಡಿಸಿದೆ.[ಅಸಹಿಷ್ಣುತೆ ಬಗ್ಗೆ ಸೊಲ್ಲೆತ್ತಿದ್ದ ಅಮೀರ್ ಗೆ ಬಹಿರಂಗ ಪತ್ರ]

India will always be Incredible whether I’m brand ambassador or not, says Aamir

ನಾನು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಹೆಮ್ಮೆಯಿದೆ. ನಾನು ಇದುವರೆವಿಗೂ ಸಾಮಾಜಿಕ ಸಂದೇಶ ಸಾರುವ ಅಥವಾ ದೇಶ ಭಕ್ತಿ ಸಾರುವ ಚಿತ್ರಗಳನ್ನು ಯಾವುದೇ ಸಂಭಾವನೆ ಪಡೆಯದೆ ನಟಿಸಿದ್ದೇನೆ.[ಖಾನ್ ನನ್ನು 'ಅಮೀರ'ನನ್ನಾಗಿಸಿದ ಬ್ರ್ಯಾಂಡ್ ಗಳು]

ಕಳೆದ 10 ವರ್ಷಗಳಿಂದ ‘ಇನ್​ಕ್ರೆಡಿಬಲ್ ಇಂಡಿಯಾ' ಅಭಿಯಾನದ ರಾಯಭಾರಿಯಾಗಿ ನಾನು ಪ್ರಚಾರ ಮಾಡಿದ್ದೇನೆ. ಅದಕ್ಕಾಗಿ ನಾನು ಸರ್ಕಾರದಿಂದ ಹಣ ಪಡೆದಿಲ್ಲ. ಉಚಿತವಾಗಿ ಅಭಿಯಾನಕ್ಕೆ ಬೆಂಬಲ ನೀಡಿದ್ದೇನೆ. ನನ್ನನ್ನು ಅಭಿಯಾನದಿಂದ ಕೈ ಬಿಟ್ಟಿರುವುದಕ್ಕೆ ನನಗೆ ಬೇಸರವಿಲ್ಲ ಎಂದಿದ್ದಾರೆ.[ಎಲ್ಲಿಯ ಶಾಶ್ವತಿ, ಎಲ್ಲಿಯ ಕಿರಣ್; ಎಲ್ಲಿಯ ಅಕ್ಷಯ್, ಎಲ್ಲಿಯ ಅಮೀರ್!]

ಬಿಗ್ ಬಿ ಬದಲಿಗೆ ಯಾರು 'ಅತಿಥಿ ದೇವೋ ಭವ' ಎನ್ನುತ್ತಾ ಅತುಲ್ಯ ಭಾರತದ ಅಭಿಯಾನದ ರಾಯಭಾರಿಯಾಗಬೇಕು ಎಂಬುದರ ಬಗ್ಗೆ ಗುರುವಾರದಿಂದ ಭಾರಿ ಚರ್ಚೆ ಶುರುವಾಗಿತ್ತು. ಮೊದಲಿಗೆ ಈ ಬಾರಿ ಮಹಿಳೆಯರಿಗೆ ಸ್ಥಾನ ನೀಡಲು ಸಚಿವಾಲಯ ಬಯಸಿತ್ತು ಎಂಬುದರ ಬಗ್ಗೆ ಕೂಡಾ ಸಿಎನ್ಎನ್ ಐಬಿಎನ್ ವರದಿ ಮಾಡಿತ್ತು.


ಅಕ್ಷಯ್ ಕುಮಾರ್ ಅವರು ರಾಯಭಾರಿಯಾಗಲು ಸೂಕ್ತ ವ್ಯಕ್ತಿ ಎಂದು ಟೈಮ್ಸ್ ನೌ ತನ್ನ ಅಭಿಮತ ಹೇಳಿತ್ತು. ಇನ್ನೊಂದೆಡೆ ಭಾರತದಲ್ಲಿ ಅಸಹಿಷ್ಣುತೆ ಪರಿಸ್ಥಿತಿ ಬಗ್ಗೆ ಅಮೀರ್ ಖಾನ್ ಮಾತನ್ನಾಡಿದ್ದರಿಂದ ಅವರನ್ನು ಈ ಅಭಿಯಾನದಿಂದ ಕೈ ಬಿಡಲಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಕೂಗೆತ್ತಿದ್ದವು. ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆ ಕೂಡಾ ನಡೆದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A day after Bollywood superstar Aamir Khan's contract as the brand ambassador for Incredible India expired, Amitabh Bachchan's name was finalised to replace him, CNN-IBN reported.
Please Wait while comments are loading...