Rain Alert: ನವೆಂಬರ್ 18 ರ ವರೆಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆ- ವರದಿ, ವಿವರ ತಿಳಿಯಿರಿ
ನವದೆಹಲಿ, ನವೆಂಬರ್ 13: ನವೆಂಬರ್ 18 ರ ವರೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ. ತಮಿಳುನಾಡು ಸೇರಿದಂತೆ ಇತರ ನಾಲ್ಕು ರಾಜ್ಯಗಳಲ್ಲಿ ಗುಡುಗು ಸಹಿತ ಅಥವಾ ಸಾಧಾರಣ ಮಳೆ ಬೀಳಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ನವೆಂಬರ್ 12 ಮತ್ತು ನವೆಂಬರ್ 18 ರ ನಡುವೆ ತಮಿಳುನಾಡಿನಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ಇದೆ. ಹೆಚ್ಚುವರಿಯಾಗಿ, ನವೆಂಬರ್ 14 ಮತ್ತು 15 ರಂದು ರಾಜ್ಯದಲ್ಲಿ ಗುಡುಗು ಸಹಿತ ಮಳೆ ಸುರಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೇರಳ, ಕರಾವಳಿ ಆಂಧ್ರಪ್ರದೇಶ, ಮಾಹೆ, ಪುದುಚೇರಿ ಮತ್ತು ದಕ್ಷಿಣ ಕರ್ನಾಟಕ ಒಳನಾಡಿನಲ್ಲಿ ಇದೇ ರೀತಿಯ ಮುನ್ಸೂಚನೆಗಳನ್ನು ನೀಡಲಾಗಿದೆ.
ದಕ್ಷಿಣ ಪೆನಿನ್ಸುಲಾರ್ ಭಾರತದ ಮೇಲೆ ಬೀಸುತ್ತಿರುವ ಪೂರ್ವ/ಈಶಾನ್ಯ ದಿಕ್ಕಿನ ಮಾರುತಗಳಿಂದಾಗಿ ಮಳೆಯು ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬುಲೆಟಿನ್‌ನಲ್ಲಿ ತಿಳಿಸಿದೆ. ಮಳೆ ಶುರುವಾದ ಮೊದಲು ಮುಂದಿನ ಎರಡು ದಿನಗಳ ನಂತರ ದಕ್ಷಿಣ ಪೆನಿನ್ಸುಲಾದಲ್ಲಿ ಮಳೆಯು ಕಡಿಮೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಶನಿವಾರ ಕೇರಳದ ತಿರುವನಂತಪುರ ಮತ್ತು ತಮಿಳುನಾಡಿನ ರಾಮನಾಡಿನಲ್ಲಿ 3 ಸೆಂ ಮೀ ಮಳೆ ದಾಖಲಾಗಿದ್ದರೆ, ಕೇರಳದ ಕೊಟ್ಟಾಯಂನಂತಹ ಇತರ ಜಿಲ್ಲೆಗಳಲ್ಲಿ 2 ಸೆಂ.ಮೀ ಮಳೆಯಾಗಿದೆ.

ಹವಾಮಾನ ಇಲಾಖೆ ಪ್ರಕಾರ, ರಾಮನಾಥಪುರಂ ಜಿಲ್ಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಭಾರಿ ಮಳೆಯಾಗಲಿದೆ. ತಮಿಳುನಾಡಿನ ತಂಗಚಿಮಡಂನಲ್ಲಿ 15 ಸೆಂ.ಮೀ ಮಳೆಯಾಗಿದ್ದು, ಮಂಡಪಂನಲ್ಲಿ 14 ಸೆಂ.ಮೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಮೊನ್ನೆ ಬುಧವಾರ (ನವೆಂಬರ್ 9) ನೀಲಗಿರಿ ಜಿಲ್ಲೆಯ ಕೋಟಗಿರಿ-ಮೆಟ್ಟುಪಾಳ್ಯಂ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ. ಸಂಚಾರ ಅಸ್ತವ್ಯಸ್ತಗೊಂಡಿದ್ದು, ವಾಹನಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗಿದೆ. ಈ ವಾರದ ಆರಂಭದಲ್ಲಿ ಭಾರೀ ಮಳೆಯಿಂದಾಗಿ ನೀಲಗಿರಿ ಮೌಂಟೇನ್ ರೈಲ್ವೆ ವಿಭಾಗದಲ್ಲಿ ಎರಡು ರೈಲುಗಳನ್ನು ರದ್ದುಗೊಳಿಸಲಾಗಿದೆ.
ದೆಹಲಿ ಕತೆ ಏನು?
ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಿಗ್ಗೆ ಮಂಜಿನಿಂದ ಕೂಡಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಮತ್ತು 14 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ಭಾನುವಾರ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27.7 ಮತ್ತು 13.2 ಡಿಗ್ರಿ ಸೆಲ್ಸಿಯಸ್ ಆಗಿತ್ತು.

ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ
ಕೋಲ್ಕತ್ತಾದಲ್ಲಿ ಆಕಾಶವು ಸ್ವಚ್ಛವಾಗಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 22 ಡಿಗ್ರಿ ಸೆಲ್ಸಿಯಸ್ ಆಗಿರಲಿದೆ. ಒಣ ಹವಾಮಾನವು ಸಿಕ್ಕಿಂ ಮತ್ತು ಉಪ ಹಿಮಾಲಯ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.
ಜಮ್ಮು ಮತ್ತು ಕಾಶ್ಮೀರ
ರಾಜ್ಯದಲ್ಲಿ ಒಣ ಹವೆಯಂತಹ ವಾತಾವರಣ ಇರಲಿದೆ. ಪ್ರಾದೇಶಿಕ ಹವಾಮಾನ ಕಚೇರಿಯ ಪ್ರಕಾರ, ಶ್ರೀನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 18 ಮತ್ತು 1 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ. ನಂತರ ಜಮ್ಮು (ಗರಿಷ್ಠ 28 ಮತ್ತು ಕನಿಷ್ಠ 11), ಮುಜಫರಾಬಾದ್ (ಗರಿಷ್ಠ 26 ಮತ್ತು ಕನಿಷ್ಠ 10) ಮತ್ತು ಮೀರ್‌ಪುರ (ಗರಿಷ್ಠ 28 ಮತ್ತು ಕನಿಷ್ಠ 13) ಆಗಿರಲಿದೆ.
ಹಿಮಾಚಲ ಪ್ರದೇಶ
ರಾಜ್ಯದ ರಾಜಧಾನಿ ಶಿಮ್ಲಾದಲ್ಲಿ ಇಂದು ಬಿಸಿಲಿನ ವಾತಾವರಣವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 19 ಮತ್ತು 9 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ. ಕೆಳಗಿನ ಬೆಟ್ಟಗಳು, ಮಧ್ಯ ಬೆಟ್ಟಗಳು ಮತ್ತು ಮೇಲಿನ ಭಾಗಗಳಲ್ಲಿ ಹವಾಮಾನವು ಶುಷ್ಕವಾಗಿರುತ್ತದೆ. ಕಳೆದ 24 ಗಂಟೆಗಳಲ್ಲಿ, ಕೀಲಾಂಗ್‌ನಲ್ಲಿ -1.0 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಡಿಮೆ ತಾಪಮಾನ ದಾಖಲಾಗಿದೆ. ಧೌಲಾ ಕುವಾನ್‌ನಲ್ಲಿ ಗರಿಷ್ಠ ತಾಪಮಾನ 26.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.












Click it and Unblock the Notifications