India Weather: ದೇಶದ ಈ ಭಾಗಗಳಲ್ಲಿ ಮುಂದಿನ ಒಂದು ವಾರ ಭಾರೀ ಮಳೆ ಮುನ್ಸೂಚನೆ, ಎಲ್ಲೆಲ್ಲಿ-ಮಾಹಿತಿ?
India Weather: ದೇಶದ ಬಹುತೇಕ ರಾಜ್ಯಗಳಲ್ಲಿ ಇದೀಗ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದು, ಕೆಲವೇ ಕೆಲವು ರಾಜ್ಯಗಳಲ್ಲಿ ಮಾತ್ರ ಆಗಾಗ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಮಂಜಿನಂತಹ ಮಳೆ ಸುರಿಯುತ್ತಿದೆ. ಇನ್ನು ಉತ್ತರವ ಭಾರತದ ಹಲವು ರಾಜ್ಯಗಳಲ್ಲಿ ಮಂಜಿನ ವಾತಾವರಣ ನಿರ್ಮಾಣ ಆಗುದ್ದು, ಜಿನುಗು ಮಳೆಯಾಗುತ್ತಲೇ ಇದೆ. ಇದೀಗ ಹಲವೆಡೆ ಇನ್ನು ಮುಂದಿನ 7 ದಿನಗಳ ಕಾಲ ಅಂದರೆ ಒಂದು ವಾರ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾರ್ಚ್ 22ರವರೆಗೂ ದೇಶದ ಈ ಭಾಗಗಳಲ್ಲಿ ಗುಡುಗು, ಮಿಂಚು, ಆಲಿಕಲ್ಲು ಸಹಿತ ಲಘುವಾಗಿ ಸಾಧಾರಣ ಮಳೆಯಾಗಲಿದೆ ಎಂದು ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ವಾರದಲ್ಲಿ ಈಶಾನ್ಯ ರಾಜ್ಯಗಳ ಕೆಲವೆಡೆ ಮಾತ್ರ ಮಳೆಯಾಗಿತ್ತು. ಇದನ್ನು ಬಿಟ್ಟರೇ ಮಾರ್ಚ್‌ನಲ್ಲಿ ಇಲ್ಲಿಯವರೆಗೂ ಉಳಿದೆಡೆ ತೀವ್ರ ಮಳೆಯ ಕೊರತೆ ಎದುರಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಸೈಕ್ಲೋನ್ ಹಿನ್ನೆಲೆ ಇನ್ನು ಮುಂದಿನ ವಾರ ಜಾರ್ಖಂಡ್, ಅಸ್ಸಾಂನಲ್ಲಿ ಸಾಧಾರಣ ಮಳೆಯಾಗಲಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಹಿಮಾಲಯ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಹಲವು ಭಾಗಗಳಲ್ಲಿ ಬುಧವಾರ (ಮಾರ್ಚ್ 20)ದಿಂದ ಮುಂದಿನ ಮಂಗಳವಾರದವರೆಗೆವರೆಗೆ ಮಿಂಚು, ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಈ ಋತುವಿನ ಮೊದಲ ಭಾರಿ ಮಳೆ (64.5 ಮಿಮೀ-115.5 ಮಿಮೀ) ಅರುಣಾಚಲ ಪ್ರದೇಶದ, ಸಿಕ್ಕಿಂನಲ್ಲಿ ಬುಧವಾರ ಮತ್ತು ಶನಿವಾರ (ಮಾರ್ಚ್ 20, 23) ಸುರಿಯಲಿದೆ. ಅಸ್ಸಾಂ ಮತ್ತು ಮೇಘಾಲಯದ ಕೆಲವು ಭಾಗಗಳಲ್ಲಿ ಶನಿವಾರ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ. (TWC ಮೆಟ್ ತಂಡ)
ಈ ಹೊಸ ಮಳೆಯೇನಾದರೂ ಬಂದರೆ ತಿಂಗಳು ಮುಗಿಯುವ ಮೊದಲು ಹಲವೆಡೆ ಮಳೆಯ ಕೊರತೆ ನೀಗಿದಂತಾಗುತ್ತದೆ. ಈಗಾಗಲೇ ಮಾರ್ಚ್ 1 ಮತ್ತು 19ರ ನಡುವೆ ಅರುಣಾಚಲ ಪ್ರದೇಶದಲ್ಲಿ 39 ಮಿಲಿ ಮೀಟರ್ ಮಳೆಯನ್ ದಾಖಲಿಸಿದೆ. ಅಸ್ಸಾಂ ಮತ್ತು ಮೇಘಾಲಯವು ಒಟ್ಟಾಗಿ ಕೇವಲ 4.7 ಮಿಲಿ ಮೀಟರ್, ಇನ್ನುಳಿದ ಕೆಲವು ರಾಜ್ಯಗಳು ಅತ್ಯಲ್ಪ 1.2 ಮಿಲಿ ಮೀಟರ್ ಕಡಿಮೆ ಮಳೆಯನ್ನು ಪಡೆದಿವೆ ಎಂದು ತಿಳಿದುಬಂದಿದೆ.












Click it and Unblock the Notifications