India weather forecast: ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಸುರಿಯಲಿದೆ ಮಳೆ- ಬೆಂಗಳೂರಲ್ಲೂ ಮಳೆ ಅಬ್ಬರ ಬಲು ಜೋರು
ಕರ್ನಾಟಕದ ದಕ್ಷಿಣ ಒಳನಾಡು ಸೇರಿದಂತೆ ತಮಿಳುನಾಡು, ಪುದುಚೇರಿ ಮತ್ತು ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಕವಾದ ಗುಡುಗು ಸಹಿತ ಮಳೆಯಾಗಲಿದೆ ಎಂದು ತಿಳಿದುಬಂದಿದೆ.
ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಬಿಹಾರ, ಆಂಧ್ರಪ್ರದೇಶ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ಚದುರಿದ ಮಳೆಯಾಗುವ ಸಾಧ್ಯತೆಯಿದೆ.
ಲಡಾಖ್, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಸಿಕ್ಕಿಂನಲ್ಲಿ ಚದುರಿದ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರ್ನಾಟಕದಲ್ಲಿ ಮಳೆ
ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಇಂದು ಮತ್ತು ನಾಳೆ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಧರ್ಮಸ್ಥಳ, ಚಾರ್ಮುಡಿ ಘಾಟ್, ಬೆಳ್ತಂಗಡಿ ಸುತ್ತಮುತ್ತ ಮೋಡ ಕವಿದ ವಾತಾವರಣವಿದ್ದು ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ.
ಕೋಲಾರ ಜಿಲ್ಲೆಯ ಚಿಕ್ಕ ತಿರುಪತಿ, ಮಾಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಬೀಳುವ ಮುನ್ಸೂಚನೆ ಇದೆ.

ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಮಳೆ ಸುರಿದಿದ್ದು, ಹೊಸುರು ರಸ್ತೆ, ಬಸವನಗುಡಿ, ಜಯನಗರ, ಜೆಪಿ ನಗರ ಸುತ್ತಮುತ್ತಲೂ ಟ್ರಾಪಿಕ್ ಸಮಸ್ಯೆ ಎದುರಾಗಿದೆ. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ರಾತ್ರಿ ಇನ್ನಷ್ಟು ಮಳೆ ಸುರಿಯುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಕೆಂಗೇರಿ, ಆರ್‌ಆರ್ ನಗರ, ಉತ್ತರಹಳ್ಳಿ, ನಾಗರಭಾವಿ, ಬೆಂಗಳೂರು ವಿಶ್ವವಿದ್ಯಾಲಯ, ಉಳ್ಳಾಲ, ನಾಯಂಡಹಳ್ಳಿ, ಕುಂಬಳಗೋಡು ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ.
ರಾಜ್ಯದಲ್ಲಿ ನಿನ್ನೆ ಸುರಿದ ಮಳೆ ಪ್ರಮಾಣ
*ಬೆಂಗಳೂರು ನಗರ: 99 ಮಿ.ಮೀ
*ಹಾಸನ: 96 ಮಿ.ಮೀ
*ಚಿಕ್ಕಮಗಳೂರು: 89.5 ಮಿ.ಮೀ
*ತುಮಕೂರು: 87.5 ಮಿ.ಮೀ
*ಬೆಂಗಳೂರು ಗ್ರಾಮಾಂತರ: 83.5 ಮಿ.ಮೀ
*ಮಂಡ್ಯ: 80 ಮಿ.ಮೀ
*ದಕ್ಷಿಣ ಕನ್ನಡ: 72.5 ಮಿ.ಮೀ
*ಕೊಡಗು: 71 ಮಿ.ಮೀ
*ಚಿಕ್ಕಬಳ್ಳಾಪುರ: 70.5 ಮಿ.ಮೀ
*ಕೋಲಾರ: 69.5 ಮಿ.ಮೀ
*ಮೈಸೂರು: 57.5ಮಿ.ಮೀ
*ಉಡುಪಿ: 49.5 ಮಿ.ಮೀ
*ರಾಮನಗರ: 48.5 ಮಿ.ಮೀ
*ಚಾಮರಾಜನಗರ: 44 ಮಿ.ಮೀ

ಹೆಚ್ಚು ಮಳೆ ಬಿದ್ದ ಸ್ಥಳಗಳು
*ಹೊರಮಾವು, ಬೆಂಗಳೂರು ನಗರ: 99 ಮಿ.ಮೀ
*ಕೆಂಬಾಳು, ಹಾಸನ: 96 ಮಿ.ಮೀ
*ಮಂಡೂರು, ಬಿಎಲ್ಆರ್ ನಗರ: 95 ಮಿ.ಮೀ
*ಕಲ್ಲುಬಾಳು, ಬೆಂಗಳೂರು ನಗರ: 92.5 ಮಿ.ಮೀ
*ಮಂಟಪ, ಬೆಂಗಳೂರು ನಗರ: 91 ಮಿ.ಮೀ
*ಸಿಂಧಿಗೆರೆ, ಚಿಕ್ಕಮಗಳೂರು: 89.5 ಮಿ.ಮೀ
*ನೆಲ್ಲಿಕಾರು, ದಕ್ಷಿನ ಕನ್ನಡ: 72.5 ಮಿ.ಮೀ
*ಉಂಡಿಗನಾಳು, ಹಾಸನ: 73 ಮಿ.ಮೀ
*ಹೆಬ್ಬಾಳು, ಹಾಸನ: 72 ಮಿ.ಮೀ
*ಬಾಗೆ, ಹಾಸನ: 71 ಮಿ.ಮೀ
*ಚೌಡ್ಲು, ಕೊಡಗು: 71 ಮಿ.ಮೀ
*ಅರಸಿನಮಕ್ಕಿ, ದಕ್ಷಿಣ ಕನ್ನಡ: 70 ಮಿ.ಮೀ
*ಕೊಂಬಾರು, ದಕ್ಷಿಣ ಕನ್ನಡ: 68 ಮಿ.ಮೀ
*ಸೋಮವಾರಪೇಟೆ, ಕೊಡಗು: 63 ಮಿ.ಮೀ
*ಮಡಾಮಕ್ಕಿ, ಉಡುಪಿ: 49.5 ಮಿ.ಮೀ
*ಕಡೂರು, ಉಡುಪಿ: 46 ಮಿ.ಮೀ












Click it and Unblock the Notifications