ಚೀನಾ ಯೋಜನೆಗೆ ಅಮೆರಿಕ-ಭಾರತ ಪ್ರತಿತಂತ್ರ: ಬ್ಲೂ ಡಾಟ್ ಯೋಜನೆ ಬಗ್ಗೆ ಮಾತುಕತೆ
ನವದೆಹಲಿ, ಫೆಬ್ರವರಿ 24: ಮೂಲ ಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಚೀನಾದ ಚಟುವಟಿಕೆಗಳಿಗೆ ಪ್ರತಿತಂತ್ರ ರೂಪಿಸಲು ಭಾರತ ಮತ್ತು ಅಮೆರಿಕ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಹಾಗೂ ಅಮೆರಿಕ ನಡುವೆ ಈ ಕುರಿತು ಹೊಸ ಪ್ರಸ್ತಾವಗಳು ಚರ್ಚೆಗೆ ಬರಲಿದೆ ಎಂದು ಹೇಳಲಾಗಿದೆ.
ಬೆಲ್ಟ್ ಆಂಡ್ ರೋಡ್ ಇನಿಷಿಯೇಟಿವ್ (ಬಿಆರ್‌ಐ) ಮೂಲಕ ಚೀನಾ ತನ್ನ ಹೆಜ್ಜೆಗುರುತುಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಏಷ್ಯಾ ಪೆಸಿಫಿಕ್ ಪ್ರದೇಶ ಹಾಗೂ ಇತರೆ ದೇಶಗಳಲ್ಲಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ಒಳಗೊಳ್ಳುವ ಬ್ಲೂ ಡಾಟ್ ನೆಟ್‌ವರ್ಕ್ ಎಂಬ ಹೊಸ ಪ್ರಸ್ತಾವದ ಬಗ್ಗೆ ಅಮೆರಿಕ ಮತ್ತು ಭಾರತ ಮಾತುಕತೆ ನಡೆಸಲಿವೆ.
ಟ್ರಂಪ್ ಭೇಟಿಯ ವೇಳೆ ಈ ಯೋಜನೆಯ ಒಪ್ಪಂದದ ಕುರಿತಾದ ಮಾತುಕತೆಗೆ ತಯಾರಿ ನಡೆಸಲು ಕಳೆದ ಕೆಲವು ವಾರಗಳಿಂದಲೇ ಭಾರತ ಹಾಗೂ ಅಮೆರಿಕದ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದು, ಈಗ ರಾಷ್ಟ್ರ ನಾಯಕರ ಮಟ್ಟದ ಮಾತುಕತೆ ನಡೆಯಲಿದೆ.

ಜಪಾನ್-ಆಸ್ಟ್ರೇಲಿಯಾ ಭಾಗಿ
ಬ್ಲೂ ಡಾಟ್ ನೆಟ್‌ವರ್ಕ್ ಒಂದು ಬಹು-ಮಧ್ಯಸ್ಥಗಾರರ ಪ್ರಯತ್ನವಾಗಿದ್ದು, ಸರ್ಕಾರಗಳು, ಖಾಸಗಿ ವಲಯ ಮತ್ತು ನಾಗರಿಕ ಸಮಾಜವನ್ನು ಒಂದೆಡೆಗೆ ತಂದು ಅತ್ಯುನ್ನತ ಗುಣಮಟ್ಟದ, ವಿಶ್ವಾಸಾರ್ಹ ದರ್ಜೆಯ ಜಾಗತಿಕ ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಈ ಪ್ರಸ್ತಾವದಲ್ಲಿ ಅಮೆರಿಕ ಮುಂಚೂಣಿಯಲ್ಲಿದ್ದು, ಈಗಾಗಲೇ ಜಪಾನ್ ಮತ್ತು ಆಸ್ಟ್ರೇಲಿಯಾಗಳು ಈ ಯೋಜನೆಯಲ್ಲಿ ಪಾಲದಾರಿಕೆ ಹೊಂದಿವೆ.

ಚೀನಾದ ಯೋಜನೆಗೆ ಕೌಂಟರ್
ಅಮೆರಿಕದ ಭಾರತ-ಪೆಸಿಫಿಕ್ ಕಾರ್ಯಯೋಜನೆಯಲ್ಲಿ ಈ ಪ್ರಸ್ತಾಪವೂ ಒಂದು ಭಾಗವಾಗಿದೆ. ಇದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷಿ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಪ್ರತಿಯಾಗಿ ರೂಪಿಸುತ್ತಿರುವ ಯೋಜನೆಯಾಗಿದೆ. ಈ ಬಗ್ಗೆ ಭಾರತದ ಪಾಲುದಾರಿಕೆ ಕುರಿತು ಡೊನಾಲ್ಡ್ ಟ್ರಂಪ್ ಹಾಗೂ ನರೇಂದ್ರ ಮೋದಿ ನಡುವೆ ಮಾತುಕತೆ ನಡೆಯುವ ನಿರೀಕ್ಷೆಯಿದೆ.

ಮೂಲಸೌಕರ್ಯಗಳಿಗೆ ಸ್ಟಾರ್ ರೇಟಿಂಗ್
ಜಗತ್ತಿನ ರೆಸ್ಟೋರೆಂಟ್‌ಗಳ ಗುಣಮಟ್ಟ ಮತ್ತು ದಕ್ಷತೆಗೆ ಸ್ಟಾರ್‌ಗಳನ್ನು ನೀಡುವ ಮೂಲಕ ರೇಟಿಂಗ್ ನೀಡುವ 'ಮಿಚೆಲೆನ್ ಗೈಡ್'ನಂತೆಯೇ ಮೂಲಸೌಕರ್ಯ ಯೋಜನೆಗಳಿಗೆ ಬ್ಲೂ ಡಾಟ್ ನೆಟ್‌ವರ್ಕ್ ಸ್ಟಾರ್‌ಗಳನ್ನು ನೀಡುವ ಮೂಲಕ ಗುರುತಿಸಲಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಲೂ ಡಾಟ್ ಸಿಕ್ಕರೆ ಖಾಸಗಿ ಹೂಡಿಕೆ
ಸಾರ್ವಜನಿಕ ಅಭಿಪ್ರಾಯಗಳ ಮಟ್ಟ, ಅನುದಾನದಲ್ಲಿನ ಪಾರದರ್ಶಕತೆ, ಮೂಲಭೂತ ಪರಿಸರ ನಿಯಮಾವಳಿ ಸೇರಿದಂತೆ ವಿವಿಧ ಮಾನದಂಡಗಳ ಅಡಿಯಲ್ಲಿ ಈ ಯೋಜನೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಎಲ್ಲ ನಿಯಮಗಳಲ್ಲಿಯೂ ಉತ್ತೀರ್ಣವಾಗುವ ಯೋಜನೆಗಳಿಗೆ 'ಬ್ಲೂ ಡಾಟ್' (ನೀಲಿ ಚುಕ್ಕೆ) ಸಿಗಲಿದೆ. ಈ ಗುರುತು ದೊರೆತರೆ ಯೋಜನೆಯು ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಅನುವು ಸಿಗಲಿದ್ದು, ಅದಕ್ಕೆ ಸರ್ಕಾರ ಹೂಡಿಕೆಯೊಂದನ್ನೇ ಅವಲಂಬಿಸುವ ಅಗತ್ಯವಿರುವುದಿಲ್ಲ.
-
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ












Click it and Unblock the Notifications