• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ-ಅಮೆರಿಕ ಮಾತುಕತೆ: ಮಹತ್ವದ ಒಪ್ಪಂದಕ್ಕೆ ಸಹಿ

|

ನವದೆಹಲಿ, ಅಕ್ಟೋಬರ್ 27: ಭಾರತ ಮತ್ತು ಅಮೆರಿಕಗಳು 2+2 ಸಚಿವಾಲಯ ಮಟ್ಟದ ಮೂರನೇ ಹಂತದ ಮಾತುಕತೆಯನ್ನು ನಡೆಸಿದ್ದು, ದ್ವಿಪಕ್ಷೀಯ ರಕ್ಷಣಾ ಹಾಗೂ ಭದ್ರತಾ ಸಂಬಂಧವನ್ನು ವೃದ್ಧಿಸುವ ಬಗ್ಗೆ ಚರ್ಚೆ ಕೇಂದ್ರೀಕರಿಸಲಾಗಿತ್ತು. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈ ಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು.

ಅಮೆರಿಕ ಚುನಾವಣೆ ಒಂದು ವಾರ ಬಾಕಿ ಇರುವಾಗಲೇ ಉಭಯ ದೇಶಗಳ ನಡುವೆ ನಡೆಯುತ್ತಿರುವ ಪ್ರಮುಖ ಮಾತುಕತೆ ಮಹತ್ವ ಪಡೆದಿದೆ. ಹಾಗೆಯೇ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಈ ಮಾತುಕತೆ ಮಹತ್ವದ್ದಾಗಿದೆ.

ಭಾರತ ಅಮೆರಿಕಾ ನಡುವೆ 2+2 ಚರ್ಚೆ: ವಿಶೇಷವೇನು?

ಮಾತುಕತೆ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕ ಬಿಇಸಿಎ (ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ) ಒಪ್ಪಂದಕ್ಕೆ ಸಹಿ ಹಾಕಿದವು. ಇದು ಅತ್ಯುನ್ನತ ಸೇನಾ ತಂತ್ರಜ್ಞಾನ, ಭೂಸ್ಥಾಯಿ ನಕಾಶೆ ಮತ್ತು ವರ್ಗೀಯ ಉಪಗ್ರಹ ದತ್ತಾಂಶಗಳ ಹಂಚಿಕೆಗೆ ಈ ಒಪ್ಪಂದ ನೆರವಾಗಲಿದೆ. ಚೀನಾದ ಭದ್ರತೆ ಹಾಗೂ ಸ್ವಾತಂತ್ರ್ಯದ ಬೆದರಿಕೆಗಳ ಬಗ್ಗೆ ಸಹ ಚರ್ಚೆ ನಡೆಸಲಾಯಿತು.

ಬಿಇಸಿಎ ಒಪ್ಪಂದ ಪೂರ್ಣಗೊಳಿಸಿದ್ದರ ಬಗ್ಗೆ ನಮಗೆ ಸಂತೋಷವಾಗುತ್ತಿದೆ. ಇದು ಮಾಹಿತಿ ವಿನಿಯಮಕ್ಕೆ ಹೊಸ ಮಾರ್ಗವನ್ನು ತೆರೆಯಲಿದೆ. ಅಮೆರಿಕದೊಂದಿಗೆ ಇನ್ನೂ ಅನೇಕ ಸಂಗತಿಗಳ ಕುರಿತು ಚರ್ಚಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಮಾತುಕತೆ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ಇಂದು ಎರಡು ಮಹಾನ್ ಪ್ರಜಾಪ್ರಭುತ್ವ ದೇಶಗಳಿಗೆ ಪರಸ್ಪರ ಹತ್ತಿರವಾಗಿ ಬೆಳೆಯಲು ದೊಡ್ಡ ಅವಕಾಶ ಸಿಕ್ಕಿದೆ. ಕೋವಿಡ್ ಸೋಂಕಿನ ಪಿಡುಗಿನ ನಡುವೆ ಸಹಕಾರ ವೃದ್ಧಿಯ ವಿಚಾರವಾಗಿ ಸಾಕಷ್ಟು ಚರ್ಚಿಸಿದ್ದೇವೆ. ಜತೆಗೆ ಚೀನಾದ ಕಮ್ಯುನಿಸ್ಟ್ ಪಕ್ಷವು ಈ ಪ್ರದೇಶದಲ್ಲಿ ಒಡ್ಡುತ್ತಿರುವ ಭದ್ರತೆ ಮತ್ತು ಸ್ವಾತಂತ್ರ್ಯದ ಮೇಲಿನ ಬೆದರಿಕೆ ಹಾಗೂ ಶಾಂತಿ ಮತ್ತು ಸ್ಥಿರತೆ ವಿಚಾರವಾಗಿ ಮಾತುಕತೆ ನಡೆಸಿದೆವು ಎಂದು ಮೈಕಲ್ ಪೊಂಪಿಯೊ ತಿಳಿಸಿದ್ದಾರೆ.

English summary
India and US hols 2+2 dialogue on Tuesday, signed geo-spatial pact BECA and discussed on Chinise threats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X