ಸಮೀಕ್ಷೆ : ಕಾಂಗ್ರೆಸ್ ಹಾಕಿದ ಬಲೆಗೆ ಬಿದ್ದ ಹಾರ್ದಿಕ್ ಪಟೇಲ್

Posted By:
Subscribe to Oneindia Kannada

ಅಹ್ಮದಾಬಾದ್, ಡಿಸೆಂಬರ್ 06 : ಪಾಟಿದಾರ್ ಜಾತಿಯ ಜನರಿಗೆ ಮೀಸಲಾತಿ ನೀಡಬೇಕೆಂದು ರಾಜ್ಯಾದ್ಯಂತ ಚಳವಳಿ ಆರಂಭಿಸಿರುವ ಯುವ ನಾಯಕ ಹಾರ್ದಿಕ್ ಪಟೇಲ್ ಹೋರಾಟ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಠುಸ್ ಆಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.

ಇಂಡಿಯಾ ಟಿವಿ ವಿಎಂ ಆರ್ ಸಮೀಕ್ಷೆ: ಉತ್ತರ ಗುಜರಾತಿನಲ್ಲಿ ಬಿಜೆಪಿಗೆ ಮುನ್ನಡೆ

ಇಂಡಿಯಾ ಟಿವಿ - ವಿಎಂಆರ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯ ವಿವರಗಳು ಹೊರಬರುತ್ತಿದ್ದು, ಕಾಂಗ್ರೆಸ್ ಪಕ್ಷದ ಜೊತೆ ಹಾರ್ದಿಕ್ ಪಟೇಲ್ ಮಾಡಿಕೊಂಡಿರುವ ಹೊಂದಾಣಿಯ ಒಪ್ಪಂದ, ಒಂದರ ಹಿಂದೊಂದರಂತೆ ಬಿಡುಗಡೆಯಾಗುತ್ತಿರುವ ಅವರ ವಿಡಿಯೋಗಳು ಜನರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

India TV survey : Patidars angry with Hardik Patel

ಬದಲಾಗಿ, ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ಬೀಸಿರುವ ಬಲೆಯಲ್ಲಿ ಬಿದ್ದಿದ್ದಾರೆ ಎಂದು ಶೇಕಡಾ 26ರಷ್ಟು ಜನರು ಅಭಿಪ್ರಾಯ ಪಟ್ಟಿದ್ದಾರೆ. ಹಾರ್ದಿಕ್ ಅವರು ಕಾಂಗ್ರೆಸ್ ಜೊತೆ ಶಾಮೀಲಾಗಿದ್ದಾರೆ ಎಂದು ಶೇ.22ರಷ್ಟು ಜನರು ಹೇಳಿದ್ದರೆ, ಹಾರ್ದಿಕ್ ಅವರು ಡಬಲ್ ಗೇಮ್ ಆಡಿದ್ದಾರೆ ಎಂದು ಶೇ.13ರಷ್ಟು ಗುಜರಾತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೈಮ್ಸ್ ನೌ- ವಿಎಂಆರ್ ಸಮೀಕ್ಷೆಯಲ್ಲೂ ಗುಜರಾತ್ ನಲ್ಲಿ ಬಿಜೆಪಿಗೆ ಬಹುಮತ

ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿರುವ ಪಾಟಿದಾರ್ ಸಮುದಾಯದವರು ಹಾರ್ದಿಕ್ ಪಟೇಲ್ ವಿರುದ್ಧ ಕ್ರೋಧಿತರಾಗಿದ್ದಾರೆ ಎನ್ನುತ್ತದೆ ಸಮೀಕ್ಷೆ. ಶೇ.24ರಷ್ಟು ಜನರು ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ಜೊತೆ ಕೈಜೋಡಿಸಿ ಚಳವಳಿಯ ದಾರಿ ತಪ್ಪಿಸಿದ್ದಾರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ: ಗುಜರಾತ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ

ಆದರೆ, ಬಿಜೆಪಿ ವಿರುದ್ಧ ದಂಗೆಯೆದ್ದಿರುವ ಪಾಟಿದಾರ್, ದಲಿತ ಮತ್ತು ಇತರ ಹಿಂದುಳಿದ ವರ್ಗದವರು ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತಾರಾ ಎಂಬ ಪ್ರಶ್ನೆಗೆ, ಶೇ.47ರಷ್ಟು ಜನರು ಬೆಂಬಲ ನೀಡುತ್ತೇವೆ ಎಂದಿದ್ದಾರೆ. ಶೇ.34 ಜನರು ಬಿಜೆಪಿ ಇನ್ನೂ ಬಲಿಷ್ಠವಾಗಿದ್ದು, ಜಾತಿ ರಾಜಕಾರಣ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಮೂರು ಜಾತಿಯವರು ಒಗ್ಗಟ್ಟಾಗಿ ಚುನಾವಣೆಯಲ್ಲಿ ಮತ ಹಾಕುವುದಿಲ್ಲ ಎಂದು ಶೇ.9ರಷ್ಟು ಜನ ಅಭಿಪ್ರಾಯ ಮಂಡಿಸಿದ್ದಾರೆ.

ಎಬಿಪಿ ನ್ಯೂಸ್ ಸಮೀಕ್ಷೆ : ಗುಜರಾತ್ ನಲ್ಲಿ ಬಿಜೆಪಿಗೆ ಸುಲಭವಲ್ಲ ಜಯ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pre-poll survey conducted by India TV and VMR indicates that popularity of Hardik Patel, who has spearheaded the fight against BJP and joined hands with Congress, has come down drastically. Gujarati people feel that he was trapped by Congress.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ