ಭಾರತದಲ್ಲಿ ಒಟ್ಟು 20 ಲಕ್ಷ ಕೊವಿಡ್-19 ಸೋಂಕಿತರು ಗುಣಮುಖ!

ನವದೆಹಲಿ, ಆಗಸ್ಟ್.19: ಕೊರೊನಾವೈರಸ್ ಮಹಾಮಾರಿಯ ತೀವ್ರತೆ ಮೊದಲಿಗೆ ಹೋಲಿಸಿದ್ದಲ್ಲಿ ಇತ್ತೀಚಿನ ದಿನಗಳಲ್ಲಿ ಕೊಂಚ ತಗ್ಗಿದೆ. ಭಾರತದಲ್ಲಿ ಕೊರೊನಾವೈರಸ್ ಸೋಂಕಿತರಲ್ಲಿ ಬಹುಪಾಲು ಸೋಂಕಿತರು ಗುಣಮುಖರಾಗಿದ್ದಾರೆ.

Recommended Video

      Rahul Gandhi ಮಾತಿಗೆ ಸಮ್ಮತ ಸೂಚಿಸಿದ Priyanka Gandhi ವಾದ್ರಾ | Oneindia Kannada

      ದೇಶದ 100 ಮಂದಿ ಕೊವಿಡ್-19 ಸೋಂಕಿತರಲ್ಲಿ 73 ಕ್ಕಿಂತ ಹೆಚ್ಚು ಮಂದಿಗೆ ನೀಡಿರುವ ಚಿಕಿತ್ಸೆ ಯಶಸ್ವಿಯಾಗಿದೆ. ಕಳೆದ 24 ಗಂಟೆಗಳಲ್ಲೇ 60,091 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಇದುವರೆಗೂ 20,37,871 ಮಂದಿ ಕೊರೊನಾವೈರಸ್ ಗೆದ್ದಿದ್ದಾರೆ.

      ಭಾರತದಲ್ಲಿ ಒಟ್ಟು 27,67,274 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 20,37,871 ಮಂದಿ ಕೊರೊನಾವೈರಸ್ ನಿಂದ ಗುಣಮುಖರಾಗಿದ್ದಾರೆ. ಇದರಿಂದ ದೇಶದಲ್ಲಿ ಶೇ.73.64ರಷ್ಟು ಸೋಂಕಿತರು ಆರಾಮವಾಗಿರುವ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ತಿಳಿಸಿದೆ.

      India: Total Number Of Covid-19 Cured Cases Has Crossed 20 Lakh


      ಕಳೆದ 24 ಗಂಟೆಗಳಲ್ಲೇ 64531 ಮಂದಿಗೆ ಸೋಂಕು:

      ದೇಶದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಕೂಡಾ ಏರುಮುಖವಾಗಿ ಸಾಗುತ್ತಿದೆ. ಕಳೆದ 24 ಗಂಟೆಗಳಲಲೇ 64531 ಜನರಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ತಿಳಿದು ಬಂದಿದೆ. ಇನ್ನು, ಒಂದೇ ದಿನ ಮಹಾಮಾರಿಗೆ 1092 ಜನರು ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆಯು 52,889ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು 676514 ಸಕ್ರಿಯ ಪ್ರಕರಣಗಳಿರುವ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+