ಸರ್ವೇ: ಈಗ ಲೋಕಸಭಾ ಚುನಾವಣೆ ನಡೆದರೆ ವಿಪಕ್ಷಗಳ ಕಥೆ, ವ್ಯಥೆ!

Written By:
Subscribe to Oneindia Kannada

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ನಿರ್ಣಾಯಕ ಚುನಾವಣೆಗೆ ಮುನ್ನ, ಇಂಡಿಯಾ ಟುಡೇ ನಡೆಸಿದ ' ಮೂಡ್ ಆಫ್ ದಿ ನೇಶನ್' ಸರ್ವೇಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವೇ ಅತ್ಯುತ್ತಮ ಆಯ್ಕೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ನೋಟು ನಿಷೇಧ ಮತ್ತು ಸರ್ಜಿಕಲ್ ದಾಳಿಯ ನಂತರ ಖುದ್ದು ಪ್ರಧಾನಿ ಮೋದಿಯವರ ಜನಪ್ರಿಯತೆ ಮತ್ತು ಮೈತ್ರಿಕೂಟದ ಪರ, ಜನರ ಒಲವು ಹೆಚ್ಚಾಗಿರುವುದು ಸರ್ವೇಯಲ್ಲಿನ ಗಮನಿಸಬೇಕಾದ ಅಂಶ. (ಸಮೀಕ್ಷೆ: ಉತ್ತರಾಖಂಡ ಬಿಜೆಪಿಗೆ, ಉಪ್ರ, ಪಂಜಾಬ್, ಗೋವಾ ಅತಂತ್ರ)

ಒಂದು ವೇಳೆ ಈಗ ಚುನಾವಣೆ ನಡೆದರೆ ನಿಮ್ಮ ಒಲವು ಯಾವ ಪಕ್ಷದತ್ತ ಎನ್ನುವ ಮೂಡ್ ಆಫ್ ದಿ ನೇಶನ್ ಸರ್ವೇಯನ್ನು, ಇಂಡಿಯಾ ಟುಡೇ ಮತ್ತು ಕಾರ್ವಿ ಇನ್ಸೈಟ್ ಲಿಮಿಟೆಡ್ ಜಂಟಿಯಾಗಿ ನಡೆಸಿತ್ತು.

ಗ್ರಾಮೀಣ ಪ್ರದೇಶದ ಶೇ. 53 ಮತ್ತು ನಗರ ಪ್ರದೇಶದ ಶೇ. 47 ಭಾಗಿಯಾಗಿರುವ, ಒಟ್ಟಾರೆ 97 ಲೋಕಸಭಾ, 194 ವಿಧಾನಸಭಾ ಕ್ಷೇತ್ರದಲ್ಲಿರುವ 12,143 ಮಂದಿಯನ್ನು ಸಂದರ್ಶನ ಮಾಡಿ ಈ ಸರ್ವೇ ನಡೆಸಲಾಗಿದೆ.

ಐನೂರು ಮತ್ತು ಸಾವಿರ ರೂಪಾಯಿ ನೋಟನ್ನು ನಿಷೇಧಗೊಳಿಸುವ ಕ್ರಾಂತಿಕಾರಿ ನಿರ್ಧಾರದ ನಂತರ ಮೋದಿಯವರ ಜನಪ್ರಿಯತೆ ಹೆಚ್ಚಾಗಿರುವುದು ಸಮೀಕ್ಷೆಯಲ್ಲಿನ ಹೈಲೆಟ್ಸ್ ಗಳಲ್ಲೊಂದು. ಈಗ ಚುನಾವಣೆ ನಡೆದರೆ ಯಾರಿಗೆ ಎಷ್ಟು ಸ್ಥಾನ, ಮುಂದೆ ಓದಿ..

ಪ್ರಧಾನಿಯಾಗಿ ನರೇಂದ್ರ ಮೋದಿ ಸಾಧನೆ

ಪ್ರಧಾನಿಯಾಗಿ ನರೇಂದ್ರ ಮೋದಿ ಸಾಧನೆ

ಅತ್ಯಂತ ಕಳಪೆ - ಶೇ. 3
ಕಳಪೆ - ಶೇ. 6
ಸಾಧಾರಣ - ಶೇ. 19
ಉತ್ತಮ - ಶೇ. 42
ಅತ್ಯುತ್ತಮ - ಶೇ. 27
ಗೊತ್ತಿಲ್ಲ - ಶೇ. 3

ಮೋದಿ ಅಥವಾ ರಾಹುಲ್

ಮೋದಿ ಅಥವಾ ರಾಹುಲ್

ಪ್ರಧಾನಿಯಾಗಿ ಯಾರು ಉತ್ತಮ ಎನ್ನುವ ಪ್ರಶ್ನೆಗೆ ಉತ್ತರ ಹೀಗಿದೆ

ನರೇಂದ್ರ ಮೋದಿ - ಶೇ. 65
ರಾಹುಲ್ ಗಾಂಧಿ - ಶೇ. 28
ಸೋನಿಯಾ ಗಾಂಧಿ - ಶೇ. 4

ಸರ್ವೇ ಪ್ರಕಾರ ಕಳೆದ ಆರು ತಿಂಗಳ ಹಿಂದೆ ನಡೆಸಿದ ಸಮೀಕ್ಷೆಗೆ ಹೋಲಿಸಿದರೆ, ಪ್ರಧಾನಿಯಾಗಿ ಮೋದಿ ಉತ್ತಮ ಎನ್ನುವವರ ಸಂಖ್ಯೆ ಶೇ. 16ರಷ್ಟು ಹೆಚ್ಚಿದೆ. ರಾಹುಲ್ ಗಾಂಧಿ ಜನಪ್ರಿಯತೆ ಇಳಿದಿದೆ.

ಸರ್ಜಿಕಲ್ ಸ್ಟ್ರೈಕ್

ಸರ್ಜಿಕಲ್ ಸ್ಟ್ರೈಕ್

ಸರ್ಜಿಕಲ್ ಸ್ಟ್ರೈಕ್ ಮೋದಿ ಸರಕಾರದ ಉತ್ತಮ ನಿರ್ಧಾರ ಎನ್ನುವವರು ಶೇಕಡಾವಾರು - 58 ಮತ್ತು ಪಾಕಿಸ್ತಾನದ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಮೋದಿ ಸರಕಾರ ಸರಿಯಾಗಿ ನಿಭಾಯಿಸಿದೆ ಎನ್ನುವವವರ ಸಂಖ್ಯೆ ಶೇ. 62.

2017ರ ಬಜೆಟ್

2017ರ ಬಜೆಟ್

ಆದಾಯ ತೆರಿಗೆ ಇಳಿಸಬೇಕು - ಶೇ. 68
ಚುನಾವಣಾ ವೆಚ್ಚ ನಿಯಂತ್ರಿಸಬೇಕು - ಶೇ. 61
ಅಪನಗದೀಕರಣದಿಂದ ಆರ್ಬಿಐ ವಿಶ್ವಾಸಕ್ಕೆ ಧಕ್ಕೆ - ಶೇ. 53

ಈಗ ಸಾರ್ವತ್ರಿಕ ಚುನಾವಣೆ ನಡೆದರೆ ಯಾರಿಗೆ ಎಷ್ಟು?

ಈಗ ಸಾರ್ವತ್ರಿಕ ಚುನಾವಣೆ ನಡೆದರೆ ಯಾರಿಗೆ ಎಷ್ಟು?

ಒಟ್ಟು 543 ಸ್ಥಾನಗಳಲ್ಲಿ NDA ಮೈತ್ರಿಕೂಟ 360, ಯುಪಿಎ ಮೈತ್ರಿಕೂಟ 60 ಮತ್ತು ಇತರರು 123 ಸೀಟುಗಳನ್ನ ಪಡೆಯುವ ಸಾಧ್ಯತೆಯಿದೆ. ಸರ್ವೇ ಪ್ರಕಾರ ಇದು ಬಿಜೆಪಿಗೆ ಮತಹಂಚಿಕೆ ಶೇ.3ರಷ್ಟು ಏರಿಕೆಯಾಗಲಿದ್ದು, ಕಾಂಗ್ರೆಸ್‍ಗೆ 1% ಮತ್ತು ಇತರರಿಗೆ 2% ರಷ್ಟು ಮತಹಂಚಿಕೆ ಕಡಿಮೆಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
If Parliament election held today: India Today and market research firm Karvy Insights Limited survey conducted across 19 states from the date of end of demonetisation deadline on December 30 until date.
Please Wait while comments are loading...