• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಿಂದ ಆರು ದೇಶಗಳಿಗೆ ಕೋವಿಡ್ ಲಸಿಕೆ ಪೂರೈಕೆ

|

ನವದೆಹಲಿ, ಜನವರಿ 19: ಜಗತ್ತಿನ ಮುಂಚೂಣಿ ಔಷಧ ಉತ್ಪಾದಕ ದೇಶಗಳಲ್ಲಿ ಒಂದಾಗಿರುವ ಭಾರತ, ಬುಧವಾರದಿಂದ ಆರು ದೇಶಗಳಿಗೆ ಕೊರೊನಾ ವೈರಸ್ ಲಸಿಕೆಗಳ ನೆರವು ನೀಡಲಿದೆ. ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ನೇಪಾಳ, ಮಯನ್ಮಾರ್ ಮತ್ತು ಸೆಯಾಚೆಲ್‌ಗಳಿಗೆ ಕೋವಿಡ್ ಲಸಿಕೆ ನೆರವು ಒದಗಿಸುವುದಾಗಿ ಭಾರತ ತಿಳಿಸಿದೆ.

ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಮಾರಿಷಸ್‌ಗಳು ಕೂಡ ಲಸಿಕೆ ಪಡೆದುಕೊಳ್ಳಲು ಕಾದಿದ್ದು, ಅಗತ್ಯ ನಿಯಂತ್ರಣ ಅನುಮತಿಗಾಗಿ ಕಾದಿವೆ.

ಇತರೆ ಲಸಿಕೆಗಳಿಗೆ ಹೋಲಿಸಿದರೆ ನಮ್ಮ ಲಸಿಕೆಗಳ ಅಡ್ಡಪರಿಣಾಮ ನಗಣ್ಯ: ಸರ್ಕಾರಇತರೆ ಲಸಿಕೆಗಳಿಗೆ ಹೋಲಿಸಿದರೆ ನಮ್ಮ ಲಸಿಕೆಗಳ ಅಡ್ಡಪರಿಣಾಮ ನಗಣ್ಯ: ಸರ್ಕಾರ

ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಸಮುದಾಯದ ಆರೋಗ್ಯ ಕಾಳಜಿ ಕ್ಷೇತ್ರದ ಅಗತ್ಯಗಳನ್ನು ತಲುಪಿಸುವಲ್ಲಿ ಭಾರತ ಸುದೀರ್ಘಕಾಲದ ನಂಬಿಗಸ್ಥ ಪಾಲುದಾರನಾಗುವ ಮಹಾನ್ ಗೌರವ ಪಡೆದುಕೊಂಡಿದೆ. ವಿವಿಧ ದೇಶಗಳಿಗೆ ಬುಧವಾರದಿಂದ ಲಸಿಕೆಗಳ ಪೂರೈಕೆ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಲಿದೆ ಎಂದು ತಿಳಿಸಿದ್ದಾರೆ.

ಮುಂಬರುವ ವಾರಗಳಲ್ಲಿ ತನ್ನ ಪಾಲುದಾರ ದೇಶಗಳಿಗೆ ಭಾರತ ಕೋವಿಡ್-19 ಲಸಿಕೆಗಳನ್ನು ಪೂರೈಕೆ ಮಾಡಲಿದೆ. ದೇಶದೊಳಗಿನ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಜಾಗತಿಕ ಬೇಡಿಕೆಗೆ ಸ್ಪಂದಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ನಮಗೆ ಮಾತ್ರ ಏಕೆ ಕೋವ್ಯಾಕ್ಸಿನ್ ಲಸಿಕೆ?: ಸರ್ಕಾರಕ್ಕೆ ನಿವಾಸಿ ವೈದ್ಯರ ಪ್ರಶ್ನೆನಮಗೆ ಮಾತ್ರ ಏಕೆ ಕೋವ್ಯಾಕ್ಸಿನ್ ಲಸಿಕೆ?: ಸರ್ಕಾರಕ್ಕೆ ನಿವಾಸಿ ವೈದ್ಯರ ಪ್ರಶ್ನೆ

'ಮಾನವೀಯತೆಗೆ ಲಸಿಕೆಗಳನ್ನು ನೀಡುವ ಬದ್ಧತೆಯನ್ನು ಭಾರತ ಈಡೇರಿಸಲಿದೆ. ಜನವರಿ 20ರಿಂದ ನಮ್ಮ ನೆರೆಯ ದೇಶಗಳಿಗೆ ಪೂರೈಕೆ ಆರಂಭವಾಗಲಿದೆ. ಜಾಗತಿಕ ಔಷಧ ಕ್ಷೇತ್ರವು ಕೋವಿಡ್ ಸವಾಲನ್ನು ತಗ್ಗಿಸಲಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.

English summary
India will start supplying Covid-19 vaccines under grant assistance to six nations from Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X