ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಆರ್ ಡಿಒ ಅಭಿವೃದ್ಧಿಪಡಿಸಿದ ದೇಶಿ ಕ್ಷಿಪಣಿ ಪರೀಕ್ಷೆ ಯಶಸ್ವಿ

|
Google Oneindia Kannada News

ಬಾಲಸೋರ್. ಜುಲೈ 03: ಭೂಮಿಯಿಂದ ಆಗಸಕ್ಕೆ ಜಿಗಿಯುವ ಕ್ಷಿಪ್ರ ಪ್ರತಿಕ್ರಿಯೆ ನೀಡುವ ದೇಶಿ ನಿರ್ಮಿತ ಕ್ಷಿಪಣಿ ಪರೀಕ್ಷೆ ಸೋಮವಾರ (ಜು.03) ಯಶಸ್ವಿಗೊಂಡಿದೆ.

ಒಡಿಶಾ ಕರಾವಳಿ ಭಾಗದ ಚಾಂಡಿಪುರದ ಸಮಗ್ರ ಪರೀಕ್ಷಾ ವಲಯದಲ್ಲಿರುವ (ಐಟಿಆರ್) ಉಡಾವಣಾ ಸಂಕೀರ್ಣ 3ರಿಂದ ಬೆಳಿಗ್ಗೆ ಪರೀಕ್ಷಾರ್ಥ ಕ್ಷಿಪಣಿ ಉಡಾವಣೆ ಮಾಡಲಾಯಿತು.

India successfully test-fires short range missile along Odisha coast

ನೆಲದಿಂದ ಆಕಾಶ ಮಾರ್ಗದ 25-30 ಕಿ.ಮೀ. ವ್ಯಾಪ್ತಿಯಲ್ಲಿ ನಿಗದಿ ಪಡಿಸಿದ ಹಲವು ಗುರಿಗಳನ್ನು ತಲುಪುವ ಸಾಮರ್ಥ್ಯವಿರುವ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಅಭಿವೃದ್ಧಿಪಡಿಸಿದೆ.

ಎಲ್ಲ ವಾತಾವರಣದಲ್ಲಿಯೂ ಕ್ಷಿಪ್ರ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ಈ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಉಡಾವಣೆ ಜೂನ್‌ 4ರಂದು ನಡೆಸಲಾಗಿತ್ತು.

ಡಿಆರ್ ಡಿಒ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

English summary
India on Monday successfully test-fired its indigenously developed quick reaction surface-to-air short range missile from a test range along the Odisha coast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X