• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಕ್ ಡೌನ್ ಮುಗಿದ ಬಳಿಕ ಭಾರತಕ್ಕೆ ಕಾದಿದೆ ಡೇಂಜರ್: WHO ಅಲರ್ಟ್

|

ಭಾರತದಲ್ಲಿ ಎರಡು ಹಂತಗಳ ಲಾಕ್ ಡೌನ್ ಕಠಿಣವಾಗಿದ್ದು, ಮೂರನೇ ಹಂತದ ಲಾಕ್ ಡೌನ್ ಇಂದಿನಿಂದ ಆರಂಭಗೊಂಡಿದೆ. ಲಾಕ್ ಡೌನ್ 3.0 ನಲ್ಲಿ ಹಲವು ನಿರ್ಬಂಧಗಳಿಗೆ ವಿನಾಯಿತಿ ನೀಡಿರುವ ಕಾರಣ, ಇವತ್ತಿನಿಂದ ಹಲವು ಚಟುವಟಿಕೆಗಳು ಚಾಲೂ ಆಗಿವೆ.

   250 ದಿನಗೂಲಿ ಕಾರ್ಮಿಕರಿಗೆ ಆಹಾರ ನೀಡ್ತಿದ್ದಾರೆ ಪ್ರಕಾಶ್ ರಾಜ್ | Prakash Raj | Oneindia Kannada

   ಇಷ್ಟು ದಿನ ಬಂದ್ ಆಗಿದ್ದ ಮದ್ಯದಂಗಡಿಗಳು ಇಂದು ತೆರೆದಿವೆ. ಇತರೆ ಅಂಗಡಿಗಳು ಕೂಡ ಓಪನ್ ಆಗಿದ್ದು, ವ್ಯಾಪಾರ-ವಹಿವಾಟು ಶುರುವಾಗಿದೆ. ಲಾಕ್ ಡೌನ್ ಸಡಿಲಗೊಂಡಿರುವುದರಿಂದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆಯೂ ಇದೆ.

   ಶುಭ ಸುದ್ದಿ ನೀಡಿದ ಅಧ್ಯಯನ: ಮೇ 21 ಕ್ಕೆ ಭಾರತದಲ್ಲಿ ಕೊರೊನಾ ಮಾಯ!

   ಹೀಗಿರುವಾಗಲೇ, ''ಲಾಕ್ ಡೌನ್ ನಂತರ ಸೋಂಕಿತರ ಸಂಖ್ಯೆ ಜಾಸ್ತಿಯಾಗಲಿದೆ. ಇದಕ್ಕೆ ಭಾರತ ಸಿದ್ಧತೆ ನಡೆಸಬೇಕಿದೆ'' ಎಂಬ ಮಾತು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರ ವಿಶೇಷ ರಾಯಭಾರಿ ಡೇವಿಡ್ ನಬರೋ ಬಾಯಿಂದಲೇ ಬಂದಿದೆ.

   ಭಾರತ ಸಿದ್ಧವಾಗಬೇಕಿದೆ

   ಭಾರತ ಸಿದ್ಧವಾಗಬೇಕಿದೆ

   ಕೃಷ್ಣ ಥವರ್ ಮತ್ತು ದಿವ್ಯಾ ರಾಜಗೋಪಾಲ್ ಅವರಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ, ''ಭಾರತ ಇಲ್ಲಿಯವರೆಗೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಆದರೆ ಲಾಕ್ ಡೌನ್ ಮುಗಿದ ಬಳಿಕ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಲಿದೆ. ಇದಕ್ಕೆ ಭಾರತ ಸಂಪೂರ್ಣವಾಗಿ ಸಿದ್ಧವಾಗಬೇಕಿದೆ'' ಎಂದು ಕೋವಿಡ್-19 ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರ ವಿಶೇಷ ರಾಯಭಾರಿ ಡೇವಿಡ್ ನಬರೋ ಹೇಳಿದ್ದಾರೆ.

   ಕೊರೊನಾ ಮಾನವ ನಿರ್ಮಿತವೇ? US ಗುಪ್ತಚರ ಸಂಸ್ಥೆ ನೀಡಿದ ಮಹತ್ವದ ವರದಿ ಬಯಲು!

   ಭಾರತದ ಅಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ

   ಭಾರತದ ಅಧಿಕಾರಿಗಳ ಕೆಲಸಕ್ಕೆ ಮೆಚ್ಚುಗೆ

   ''ಕೊರೊನಾ ವೈರಸ್ ಸೋಂಕಿತರನ್ನು ಪತ್ತೆ ಹಚ್ಚುವಲ್ಲಿ, ಸೋಂಕಿತರನ್ನು ಪ್ರತ್ಯೇಕಿಸುವಲ್ಲಿ ಭಾರತದ ಅಧಿಕಾರಿಗಳು ಮಾಡುತ್ತಿರುವ ಕೆಲಸ ನನಗೆ ಖುಷಿ ನೀಡಿದೆ. ನಾವು ವೈರಸ್ ಗಿಂತ ಮುಂದೆ ಇರಲು ಏಕೈಕ ಮಾರ್ಗವೆಂದರೆ ಸೋಂಕಿತರ ಸಂಪರ್ಕಗಳನ್ನು ವೇಗವಾಗಿ ಪತ್ತೆ ಹಚ್ಚಿವುದು. ಈ ಹೋರಾಟದ ಅಗಾಧತೆ ಬಗ್ಗೆ ನನಗೆ ಅರಿವಿದೆ'' ಎಂದಿದ್ದಾರೆ ಡೇವಿಡ್ ನಬರೋ.

   ತುಂಬಾ ಮುಖ್ಯ

   ತುಂಬಾ ಮುಖ್ಯ

   ''ವೈರಸ್ ಅನ್ನು ಕಟ್ಟಿಹಾಕಲು ಜನರ ಚಲನೆಗಳಿಗೆ ನಿರ್ಬಂಧ ಹೇರುವುದು ತುಂಬಾ ಮುಖ್ಯ. ಇದು ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸಮಯವನ್ನು ನೀಡುತ್ತದೆ. ಲಾಕ್ ಡೌನ್ ಸಮಯದಲ್ಲಿ ವೈರಸ್ ಹೋಗುವುದಿಲ್ಲ. ಹೀಗಾಗಿ, ಭಾರತದಲ್ಲಿ ಲಾಕ್ ಡೌನ್ ಹಂತ ಹಂತವಾಗಿ ಸಡಿಲಿಕೆ ಮಾಡಬೇಕು. ಏಕಾಏಕಿ ಲಾಕ್ ಡೌನ್ ತೆರವುಗೊಳಿಸಿದರೆ, ವೈರಸ್ ಮತ್ತೆ ವ್ಯಾಪಕವಾಗಿ ಹರಡುತ್ತದೆ. ಆದ್ದರಿಂದ, ಆರ್ಥಿಕ ಚಟುವಟಿಕೆಗಳನ್ನು ನಿಗ್ರಹಿಸದೆ, ವೈರಸ್ ನಿಯಂತ್ರಿಸಲು ಕೆಲವು ಯೋಜನೆಗಳನ್ನು ಸರ್ಕಾರ ಮಾಡಬೇಕು'' ಅಂತ ಡೇವಿಡ್ ನಬರೋ ತಿಳಿಸಿದ್ದಾರೆ.

   ಸವಾಲಿನ ಕೆಲಸ

   ಸವಾಲಿನ ಕೆಲಸ

   ''ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡಿದಾಗ ಮಾತ್ರ ಹೆಚ್ಚು ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತವೆ. ಜನದಟ್ಟಣೆ ಇರುವ ಸ್ಥಳಗಳಲ್ಲಿ ಸೋಂಕನ್ನು ನಿರ್ವಹಿಸುವುದು ಸವಾಲಿನ ಕೆಲಸ. ಲ್ಯಾಟಿನ್ ಅಮೇರಿಕಾ ಮತ್ತು ಆಫ್ರಿಕಾ ಕೂಡ ಇದೇ ಸವಾಲನ್ನು ಎದುರಿಸುತ್ತಿವೆ'' - ಡೇವಿಡ್ ನಬರೋ

   ವೈರಸ್ ಹರಡದಂತೆ ನೋಡಿಕೊಳ್ಳಬೇಕು

   ವೈರಸ್ ಹರಡದಂತೆ ನೋಡಿಕೊಳ್ಳಬೇಕು

   ''ಲಾಕ್ ಡೌನ್ ಮುಗಿದ ಬಳಿಕ ಹೊಸ ಪ್ರದೇಶಗಳಿಗೆ ವೈರಸ್ ಹರಡದಂತೆ ನೋಡಿಕೊಳ್ಳಬೇಕು. ಇದಾದರೆ ಮಾತ್ರ ವೈರಸ್ ನಿಯಂತ್ರಣಕ್ಕೆ ಬರುತ್ತದೆ. ಇದರ ನಡುವೆಯೂ ಹೊಸ ಪ್ರಕರಣಗಳನ್ನು ಪತ್ತೆ ಮಾಡುವ ಕಾರ್ಯ ಚಾಲ್ತಿಯಲ್ಲಿ ಇರಬೇಕು'' - ಡೇವಿಡ್ ನಬರೋ

   English summary
   India should prepare for jump in cases after Coronavirus Lockdown: WHO.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X