ಯೋಗದಂತೆ, ಇಡಿ ವಿಶ್ವಕ್ಕೆ ಭಾರತದ 'ಆರ್ಯುವೇದ ಪದ್ಧತಿ' ಪರಿಚಯಿಸಲಾಗುವುದು: ಯೋಗಿ ಆದಿತ್ಯನಾಥ್
ಲಖನೌ, ಮಾರ್ಚ್ 12: ವಿಶ್ವದ ಜನರ ಆರೋಗ್ಯ ದೃಷ್ಟಿಯಿಂದ 'ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾದ ಆಯುರ್ವೇದವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡಿ, ಸೂಕ್ತ ಸ್ಥಾನ ದೊರಕುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.
ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಚೇಲಾತ್ರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಲ್ಲಿ 'ಅಖಿಲ ಭಾರತ ಆಯುರ್ವೇದ ಸಮ್ಮೇಳನ'ದ ಉದ್ಘಾಟನಾ ಸಮಾರಂಭ ಪಾಲ್ಗೊಂಡು ಯೋಗಿ ಆದಿತ್ಯನಾಥ್ ಮಾತನಾಡಿದರು. ದೇಶದ ವಿಶಿಷ್ಟ ಕಲೆಯಾಗಿರುವ 'ಯೋಗ' ಅನ್ನು ವಿಶ್ವಕ್ಕೆ ಪರಿಚಯಿಸಿದ ರೀತಿಯಲ್ಲಿ ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾದ ಆಯುರ್ವೇದ ಅನ್ನು ವಿಶ್ವಮಟ್ಟದ ವೇದಿಕೆಗಳಿಗೆ ಕೊಂಡೊಯ್ಯಲಾಗುವುದು ಎಂದರು.

ಭಾರತ ಜನಾಂಗವು ವಿಶ್ವದಲ್ಲೇ ಮೊದಲ ಸುಸಂಸ್ಕೃತ ಜನಾಂಗ. ಪಾಶ್ಚಿಮಾತ್ಯ ದೇಶಗಳು ವರ್ಣಮಾಲೆಗಳನ್ನು ಕಲಿಯಲು ಪ್ರಾರಂಭಿಸಿದಾಗ, ನಮ್ಮ ಅನೇಕ ಭಾರತೀಯ ಭಾಷೆಗಳು ಉತ್ತಮ ಸಾಹಿತ್ಯವನ್ನು ನಿರ್ಮಿಸಿದ್ದವು. ಇದರೊಂದಿಗೆ ಹೆಮ್ಮೆಯ ವಿಚಾರವೆಂದರೆ ಭಾರತದಲ್ಲಿ ಸಾವಿರಾರು ವರ್ಷಗಳ ಪೂರ್ವಜರು ವಿವಿಧ ವಿಶಿಷ್ಟ ಔಷಧೀಯ ಪದ್ಧತಿಗಳನ್ನು ಸಂಶೋಧಿಸಿದರು. ಆ ವೈದ್ಯ ಪದ್ಧತಿಗಳ ಆಚರಣೆಯಿಂದಲೇ ದೇಶದಲ್ಲಿ ಆಗಾಗ ಉಲ್ಬಣಿಸಿದ್ದ ಭೀಕರ ಮಾರಕ ರೋಗಗಳಿಂದ ಚೇತರಿಸಿಕೊಳ್ಳಲು ಸಾಧ್ಯವಾಯಿತು.
ಯೋಗ, ಆಯುರ್ವೇದ, ಸಿದ್ಧ, ಯುನಾನಿ ಮತ್ತು ಪ್ರಕೃತಿ ಚಿಕಿತ್ಸೆಗಳಂತಹ ಅನೇಕ ಆರೋಗ್ಯ ಸುಧಾರಣೆ ವ್ಯವಸ್ಥೆ ಇಲ್ಲಿ ಲಭ್ಯವಿವೆ. ಭೀಕರ ಮಾರಣಾಂತಿಕ ಅಷ್ಟೇ ಅಲ್ಲದೇ ದೀರ್ಘಕಾಲದ ಕಾಯಿಲೆಗಳು ಕೂಡ ಈ ವೈದ್ಯಕೀಯ ವಿಧಾನಗಳಿಂದ ಅತ್ಯಂತ ಗುಣವಾಗುತ್ತವೆ. ಈ ಆರ್ಯುವೇಧ ವೈದ್ಯಕೀಯ ವಿಧಾನಗಳಿಂದ ನಮಗೆ ಮಾತ್ರವಲ್ಲದೆ, ವಿಶ್ವಕ್ಕೆ ಪ್ರಯೋಗ ಆಗಬೇಕು ಎಂಬ ಹೆಬ್ಬಯಕೆ ನಮ್ಮದಾಗಿದೆ. ಅದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಯೋಗ ಕಲೆಯನ್ನು ಇಡೀ ಜಗತ್ತಿಗೆ ಸಾರಿದರು ಎಂದು ಅವರು ವಿವರಿಸಿದರು.

ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರು ಯೋಗದಿಂದ ಆರೋಗ್ಯ ಸೇರಿದಂತೆ ಅನೇಕ ಪ್ರಯೋಜನ ಪಡೆಯುತ್ತಿದ್ದಾರೆ. ರೋಗಮುಕ್ತ ಜೀವನ ನಡೆಸುತ್ತಾರೆ. ಅದೇ ರೀತಿ ನಮ್ಮ ಆಯುರ್ವೇದ ಔಷಧ ಪದ್ಧತಿಯನ್ನು ಸಹ ಅಂತಾರಾಷ್ಟ್ರಮಟ್ಟಕ್ಕೆ ಪರಿಚಯಿಸಬೇಕಿದೆ. ಅದು ಎಲ್ಲ ಕರ್ತವ್ಯವು ಹೌದು. ಭವಿಷ್ಯದಲ್ಲಿ, ಉತ್ತರ ಪ್ರದೇಶ ಸರ್ಕಾರವು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಆಯುರ್ವೇದವನ್ನು ಪ್ರಪಂಚದಾದ್ಯಂತ ತೆಗೆದುಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.












Click it and Unblock the Notifications