ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆಗೆ ಮಹೂರ್ತ ಫೀಕ್ಸ್, ಅಪ್ಡೇಟ್ಸ್: ಅಶ್ವಿನಿ ವೈಷ್ಣವ್
Vande Bharat Express Sleeper Train: ಭಾರತೀಯ ರೈಲು ಸಾರಿಗೆಯಲ್ಲಿ ಐಶಾರಾಮಿ ಸೇವೆ ನೀಡುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಕ್ರಾಂತಿ ಉಂಟು ಮಾಡಿದೆ. ದೇಶಾದ್ಯಂತ ವಿವಿಧ ಮಾರ್ಗಗಳಲ್ಲಿ 150 ರೈಲುಗಳು ಸೇವೆ ನೀಡುತ್ತಿವೆ. ಇದೀಗ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ರೈಲು ಕಾರ್ಯಾಚರಣೆ ನಡೆಸಲು ಮುಂದಾಗಿದೆ.
ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ 2025 ವರ್ಷದ ಆರಂಭದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆ ಮಾಡುತ್ತದೆ ಎಂದೆಲ್ಲ ಹೇಳಲಾಗಿತ್ತು. ಆದರೆ ಆಗಲಿಲ್ಲ. ಇದೀಗ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಕಳೆದ ತಿಂಗಳು ಈ ಸ್ಲೀಪರ್ ರೈಲು ಆರಂಭಿಸುವುದಾಗಿ ಘೋಷಿಸಿದೆ. ಸೆಪ್ಟಂಬರ್ ತಿಂಗಳಲ್ಲೇ ಹೊಸ ತಂತ್ರಜ್ಞಾನ, ಅಗತ್ಯ ಸಕಲ ಸೌಕರ್ಯ ಹೊಂದಿರುವ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅಣಿಯಾಗಲಿದೆ. ದೀರ್ಘ ಮತ್ತು ಮಧ್ಯಮ ದೂರದ ಪ್ರಯಾಣವನ್ನು ಮತ್ತಷ್ಟು ಸುಂದರಗೊಳಿಸಲಿದೆ ಎಂದು ಹೇಳಲಾಗುತ್ತಿದೆ.

ವಂದೇ ಭಾರತ್ ಸ್ಲೀಪರ್ ಯಾವಾಗ ಸಂಚಾರ
ಗುಜರಾತ್‌ನ ಭಾವನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ವಂದೇ ಭಾರತ್ ಸ್ಲೀಪರ್ ರೈಲು ಶೀಘ್ರವೇ ಸೇವೆಗೆ ಟ್ರ್ಯಾಕ್‌ಗೆ ಇಳಿಯಲಿದೆ ಎಂದಿದ್ದರು. ಆದರೆ ಇಂತದ್ದೆ ದಿನ ಕಾರ್ಯಾಚರಣೆ ಆರಂಭಿಸಲಿದೆ ಎಂದು ದಿನಾಂಕ ತಿಳಿಸಿರಲಿಲ್ಲ. ಇದೀಗ ರೈಲ್ವೆ ಇಲಾಖೆ ಮಾಹಿತಿ ಪ್ರಕಾರ, ಸೆಪ್ಟಂಬರ್ ತಿಂಗಳಲ್ಲಿ ಸೇವೆ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ.
ತಿಂಗಳ ಹಿಂದೆ ಜುಲೈ 25 ವಂದೇ ಭಾರತ್ ಸ್ಲೀಪರ್ ರೈಲಿನ ಮೊದಲ ರೇಕ್ ಕಾರ್ಯಾರಂಭದ ಬಗ್ಗೆ ಸಂಸತ್‌ನಲ್ಲಿ ಚರ್ಚೆ ಆಗಿತ್ತು. ಆಗ ರೈಲ್ವೆ ಸಚಿವರು ರಾಜ್ಯಸಭೆಯಲ್ಲಿ ಲಿಖಿತವಾಗಿ ಉತ್ತಿರಿದ್ದರು. ವಂದೇ ಭಾರತ್ ಸ್ಲೀಪರ್ ರೈಲು ಸೆಟ್ ನ ಮೊದಲ ಮಾದರಿ ಸಿದ್ದವಾಗಿದೆ. ಈಗಾಗಲೇ ಕ್ಷೇತ್ರ ಪ್ರಯೋಗಗಳು, ಪ್ರಾಯೋಗಿಕ ಸಂಚಾರ ಪೂರ್ಣಗೊಳಿಸಿದೆ. ವಾಣಿಜ್ಯ ಕಾರ್ಯಾಚರಣೆಗೆ ಅನುಮತಿ ಮೇರೆಗೆ ರೈಲಿನ ಮೊದಲ ರೇಕ್ ಕಾರ್ಯಾರಂಭ ಮಾಡಲಿದೆ ಎಂದು ಸಚಿವರು ಮಾಹಿತಿ ನೀಡಿದ್ದರು.
ಯಾವ ಮಾರ್ಗದಲ್ಲಿ ಈ ಸ್ಲೀಪರ್ ರೈಲು ಸಂಚಾರ?
ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಯಾವ ನಗರದಿಂದ ಯಾವ ನಗರಕ್ಕೆ ಸಂಚರಿಸುತ್ತದೆ ಎಂಬುದರನ್ನು ರೈಲ್ವೆ ಇಲಾಖೆ, ಸಚಿವಾಲಯ ಇನ್ನು ನಿರ್ಧರಿಸಿದೆ. ಈ ಬಗ್ಗೆ ಶೀಘ್ರವೇ ರೈಲ್ವೆ ಮಂಡಳಿ ಅಂತಿಮ ನಿರ್ಧಾರ ಪ್ರಕಟಿಸಲಿದೆ. ವಂದೇ ಭಾರತ್ ಸ್ಲೀಪರ್ ರೈಲು ಪ್ರತಿ ಗಂಟೆಗೆ ಗರಿಷ್ಠ 180 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ತಂತ್ರಜ್ಞಾನ ಹೊಂದಿದೆ. ಆದರೆ ದೇಶದ ರೈಲ್ವೆ ಟ್ರ್ಯಾಕ್ ಮೂಲಸೌಕರ್ಯ ಆಧಾರದಲ್ಲಿ ಎಷ್ಟು ವೇಗದ ಮಿತಿಯಲ್ಲಿ ಓಡಿಸಲಾಗುತ್ತದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ವಿಬಿ ಸ್ಲೀಪರ್ ರೈಲಿನ ವಿಶೇಷತೆಗಳು?
ಈ ರೈಲು ಪ್ರಯಾಣಿಕರಿಗೆ ಐಶಾರಾಮಿ, ಸುಖಕರ ಪ್ರಯಾಣದ ಅನುಭವ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ಇದೆ. ಸೂಕ್ತ ಬೆಳಕು, ನಿಲ್ದಾಣಗಳ ಮಾಹಿತಿ ಧ್ವನಿ ವರ್ಧಕ, ದೃಶ್ಯ ಮಾಹಿತಿ ವ್ಯವಸ್ಥೆಗಳು, ಪ್ರದರ್ಶನ ಫಲಕಗಳು, ಪ್ರಯಾಣಿಕರ ಭದ್ರತೆಗೆ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಅಂಗವಿಕಲ ಪ್ರಯಾಣಿಕರಿಗೆ ವಿಶೇಷ ವ್ಯವಸ್ಥೆ, ಶೌಚಾಲಯಗಳು ಇವೆ. ಒಟ್ಟಾರೆ ವಿಶ್ವದರ್ಜೆಯ ವ್ಯವಸ್ಥೆಯನ್ನು ಈ ವಂದೇ ಭಾರತ್ ಸ್ಲೀಪರ್ ರೈಲು ಹೊಂದಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications