ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

17 ರಾಷ್ಟ್ರಗಳಿಗೆ 56 ಲಕ್ಷ ಡೋಸ್ ಕೊರೊನಾ ಲಸಿಕೆ ಕಳುಹಿಸಿದ ಭಾರತ

|
Google Oneindia Kannada News

ನವದೆಹಲಿ, ಫೆಬ್ರವರಿ.05: ಭಾರತದಲ್ಲಿ ಉತ್ಪಾದನೆ ಆಗಿರುವ ಎರಡು ಮಾದರಿಯ ಕೊರೊನಾವೈರಸ್ ಲಸಿಕೆಯನ್ನು ನೆರೆರಾಷ್ಟ್ರಗಳು ಸೇರಿದಂತೆ ಈವರೆಗೂ 17 ದೇಶಗಳಿಗೆ ರಫ್ತು ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ರಾಷ್ಟ್ರಗಳಿಗೆ ಕೊವಿಡ್-19 ಲಸಿಕೆಯ 56 ಲಕ್ಷ ಡೋಸ್ ನ್ನು ಕಳುಹಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೂ 1 ಕೋಟಿ ಡೋಸ್ ಭಾರತದ ಕೊರೊನಾವೈರಸ್ ಲಸಿಕೆಗೆ ಬೇಡಿಕೆಯಿದೆ.

ಭಾರತದಲ್ಲಿ 45 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ ಭಾರತದಲ್ಲಿ 45 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯಲ್ಲಿ ಉತ್ಪಾದಿಸಲಾಗುತ್ತಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಈಗಾಗಲೇ ನೆರೆರಾಷ್ಟ್ರಗಳಿಗೆ ಭಾರತವು ಉಡುಗೊರೆಯಾಗಿ ನೀಡಿದೆ. ಯಾವ ರಾಷ್ಟ್ರಗಳಿಗೆ ಕೊವ್ಯಾಕ್ಸಿನ್ ಲಸಿಕೆ ಕಳುಹಿಸಲಾಗಿದೆ, ಮುಂದೆ ಯಾವ ರಾಷ್ಟ್ರಕ್ಕೆ ಲಸಿಕೆ ನೀಡಲಾಗುತ್ತದೆ. ಭಾರತದಲ್ಲಿ ಲಸಿಕೆ ವಿತರಣೆ ಹೇಗೆ ನಡೆಯುತ್ತಿದೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಭಾರತದಿಂದ ಈ ರಾಷ್ಟ್ರಗಳಿಗೆ ಕೊವಿಡ್-19 ಲಸಿಕೆ

ಭಾರತದಿಂದ ಈ ರಾಷ್ಟ್ರಗಳಿಗೆ ಕೊವಿಡ್-19 ಲಸಿಕೆ

ನೆರೆಯ ರಾಷ್ಟ್ರಗಳಿಗೆ ಭಾರತದಿಂದ ಮೊದಲು ಕೊರೊನಾವೈರಸ್ ಲಸಿಕೆಯನ್ನು ರವಾನೆ ಮಾಡಲಾಗಿದೆ. ಭೂತಾನ್, ಮಾಲ್ಡೀವ್ಸ್, ಬಾಂಗ್ಲಾದೇಶ, ನೇಪಾಳ, ಮಯನ್ಮಾರ್, ಮಾರಿಷಸ್, ಶ್ರೀಲಂಕಾ, ಯುನೈಟೆಡ್ ಅರಬ್ ಎಮರೈಟ್ಸ್, ಬ್ರೆಜಿಲ್, ಮೊರೊಕ್ಕೋ, ಬರ್ಹೈನ್, ಓಮನ್, ಈಜಿಪ್ಟ್, ಅಲ್ಗೇರಿಯಾ, ಕುವೈತ್ ಮತ್ತು ದಕ್ಷಿಣ ಆಫ್ರಿಕಾಗಳಿಗೆ ಕೊವಿಡ್-19 ಲಸಿಕೆ ರವಾನಿಸಲಾಗಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರದ ವಕ್ತಾರ ಅನುರಾಗ್ ಶ್ರೀವಾಸ್ತವ್ ಮಾಹಿತಿ ನೀಡಿದ್ದಾರೆ.

ಭಾರತ ಹಾಕಿಕೊಂಡಿರುವ ಮುಂದಿನ ಯೋಜನೆ

ಭಾರತ ಹಾಕಿಕೊಂಡಿರುವ ಮುಂದಿನ ಯೋಜನೆ

ಭಾರತವು ಮುಂಬರುವ ದಿನಗಳಲ್ಲಿ ಮತ್ತಷ್ಟು ರಾಷ್ಟ್ರಗಳಿಗೆ ಕೊರೊನಾವೈರಸ್ ಲಸಿಕೆ ರಫ್ತು ಮಾಡುವ ಯೋಜನೆ ಹಾಕಿಕೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ಕೆರಿಬಿಯನ್ ಸಮುದಾಯದ "ಕ್ಯಾರಿಕೋಮ್" ರಾಷ್ಟ್ರಗಳಿಗೆ 5 ಲಕ್ಷ ಡೋಸ್ ಕೊವಿಡ್-19 ಲಸಿಕೆಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ನಿಕಾರ್ಗೋವಾ ಮತ್ತು ಫೆಸಿಫಿಕ್ ರಾಷ್ಟ್ರಗಳಿಗೆ 2 ಲಕ್ಷ ಕೊರೊನಾ ಲಸಿಕೆಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

ವಾಣಿಜ್ಯ ಉದ್ದೇಶಕ್ಕಾಗಿ ಹಲವು ರಾಷ್ಟ್ರಗಳಿಗೆ ಕೊವಿಡ್ ಲಸಿಕೆ

ವಾಣಿಜ್ಯ ಉದ್ದೇಶಕ್ಕಾಗಿ ಹಲವು ರಾಷ್ಟ್ರಗಳಿಗೆ ಕೊವಿಡ್ ಲಸಿಕೆ

ಭಾರತವು ಈಗಾಗಲೇ ಹಲವು ರಾಷ್ಟ್ರಗಳಿಗೆ ಕೊರೊನಾವೈರಸ್ ಲಸಿಕೆಯನ್ನು ಉಡುಗೊರೆಯಾಗಿ ನೀಡಿದೆ. ಇನ್ನು ಮುಂಬರುವ ದಿನಗಳಲ್ಲಿ ವಾಣಿಜ್ಯ ಉಪಯೋಗಕ್ಕಾಗಿ ಹಲವು ರಾಷ್ಟ್ರಗಳಿಗೆ ಕೊವಿಡ್-19 ಲಸಿಕೆಯನ್ನು ರಫ್ತು ಮಾಡಲಾಗುತ್ತದೆ. ಸೌದಿ ಅರೇಬಿಯಾ, ಕೆನಡಾ, ಮಂಗೋಲಿಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಲಸಿಕೆ ರಫ್ತು ಆಗಲಿದೆ. ಗವಿ-ಕೊವ್ಯಾಕ್ಸಿದ ಭಾಗವಾಗಿರುವ ಭಾರತವು ಆಫ್ರಿಕಾಗೆ 1 ಕೋಟಿ ಡೋಸ್ ಕೊರೊನಾ ಲಸಿಕೆ ಮತ್ತು ವಿಶ್ವಸಂಸ್ಥೆಯ ಸಿಬ್ಬಂದಿಗಾಗಿ 10 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗುತ್ತಿದೆ. ಬ್ರೆಜಿಲ್, ಮೊರಾಕ್ಕೋ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಅಲ್ಗೇರಿಯಾ, ಕುವೈತ್ ಮತ್ತು ಯುನೈಟೆಡ್ ಅರಬ್ ಎಮರೈಟ್ಸ್ ರಾಷ್ಟ್ರಗಳಿಗೆ ವಾಣಿಜ್ಯ ಉದ್ದೇಶದಿಂದ ಲಸಿಕೆ ರಫ್ತು ಮಾಡಲಾಗುತ್ತಿದೆ.

ನೆರೆರಾಷ್ಟ್ರಗಳಿಗೆ ಕೊರೊನಾ ಲಸಿಕೆಯ ಉಡುಗೊರೆ

ನೆರೆರಾಷ್ಟ್ರಗಳಿಗೆ ಕೊರೊನಾ ಲಸಿಕೆಯ ಉಡುಗೊರೆ

ಕಳೆದ ಜನವರಿ.20 ರಿಂದ ಈವರೆಗೂ ಭಾರತದಿಂದ ನೆರೆರಾಷ್ಟ್ರಗಳಿಗೆ 56 ಲಕ್ಷ ಡೋಸ್ ಕೊರೊನಾವೈರಸ್ ಲಸಿಕೆಯನ್ನು ಉಡುಗೊರೆಯಾಗಿ ನೀಡಲಾಗಿದೆ. ಯಾವ ರಾಷ್ಟ್ರಕ್ಕೆ ಎಷ್ಟು ಪ್ರಮಾಣದ ಲಸಿಕೆ ನೀಡಲಾಗಿದೆ ಎನ್ನುವುದರ ಕುರಿತು ಒಂದು ಪಟ್ಟಿ ಇಲ್ಲಿದೆ ನೋಡಿ.

ರಾಷ್ಟ್ರ - ಕೊರೊನಾ ಲಸಿಕೆ ಪ್ರಮಾಣ

ಬಾಂಗ್ಲಾದೇಶ - 20 ಲಕ್ಷ ಡೋಸ್

ಮಯನ್ಮಾರ್ - 15 ಲಕ್ಷ ಡೋಸ್

ನೇಪಾಳ - 10 ಲಕ್ಷ ಡೋಸ್

ಶ್ರೀಲಂಕಾ - 5 ಲಕ್ಷ ಡೋಸ್

ಭೂತಾನ್ - 1.5 ಲಕ್ಷ ಡೋಸ್

ಮಾಲ್ಡೀವ್ಸ್ - 1 ಲಕ್ಷ ಡೋಸ್

ಮಾರಿಷಸ್ - 1 ಲಕ್ಷ ಡೋಸ್

ಬರ್ಹೈನ್ - 1 ಲಕ್ಷ ಡೋಸ್

ಓಮನ್ - 1 ಲಕ್ಷ ಡೋಸ್

English summary
India's Coronavirus Vaccine Reached 17 Nations, 56 Lakh Doses Already supplied.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X