ಕೋವಿಡ್19: ಭಾರತದ ಸಕ್ರಿಯ ಪ್ರಕರಣ 252 ದಿನಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆ
ನವದೆಹಲಿ, ನವೆಂಬರ್ 03: ದೇಶದಲ್ಲಿ ಬುಧವಾರ ಒಟ್ಟು 11,903 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ. ಈ ನಡುವೆ ಸಕ್ರಿಯ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯು ಇಳಿಕೆ ಕಂಡಿದೆ. ಸುಮಾರು 252 ದಿನಗಳ ಬಳಿಕ ಭಾರತದ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬುಧವಾರ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಬುಧವಾರ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಭಾರತದ ಕೊರೊನಾ ವೈರಸ್ ಸೋಂಕು ಪ್ರಕರಣಗಳು 252 ದಿನಗಳ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಅಂದರೆ 151209 ಕ್ಕೆ ಇಳಿದಿದೆ. ಪ್ರಸ್ತುತ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಕ್ರಿಯ ಪ್ರಕರಣವು ಶೇಕಡ 1 ಕ್ಕಿಂತ ಕಡಿಮೆ ಆಗಿದೆ ಎಂದು ವರದಿಯು ಹೇಳಿದೆ.
247 ದಿನದ ಬಳಿಕ ಮೊದಲ ಬಾರಿಗೆ ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣ ಇಳಿಕೆ
ದೇಶದಲ್ಲಿ ಪ್ರಸ್ತುತ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಶೇಕಡ 0.44 ಆಗಿದ್ದು, ಇದು ಮಾರ್ಚ್ 2020 ರ ಬಳಿಕ ಮೊದಲ ಬಾರಿಗೆ ಇಷ್ಟು ಇಳಿಕೆ ಕಂಡಿದೆ. ಹಾಗೆಯೇ ಈ ಸಂದರ್ಭದಲ್ಲಿ ದೇಶದಲ್ಲಿ ದೈನಂದಿನ ಕೊರೊನಾ ವೈರಸ್ ಪ್ರಕರಣಗಳ ಪಾಸಿಟಿವಿಟಿ ದರವು ಎರಡು ಶೇಕಡಕ್ಕಿಂತ ಕಡಿಮೆ ಆಗಿದೆ. ಸುಮಾರು ಮೂವತ್ತು ದಿನಗಳ ಬಳಿಕ ದೇಶದಲ್ಲಿ ಪಾಸಿಟಿವಿಟಿ ದರವು ಕಡಿಮೆ ಆಗಿದೆ ಎಂದು ವರದಿಯು ಹೇಳಿದೆ. ಪ್ರಸ್ತುತ ಪಾಸಿಟಿವಿಟಿ ದರವು ಶೇಕಡ 1.18 ಆಗಿದೆ.
ಇನ್ನು ಇದೇ ಸಂದರ್ಭದಲ್ಲಿ ವಾರದ ಕೊರೊನಾ ವೈರಸ್ ಪ್ರಕರಣಗಳ ಪಾಸಿಟಿವಿಟಿ ದರವು ಎರಡು ಶೇಕಡಕ್ಕಿಂತ ಕಡಿಮೆ ಆಗಿದೆ. ಸುಮಾರು 40 ದಿನಗಳ ಬಳಿಕ ಈ ರೀತಿಯಾಗಿ ಇಳಿಕೆ ಕಂಡು ಬಂದಿದೆ. ಪ್ರಸ್ತುತ ಕೊರೊನಾ ವೈರಸ್ ಸೋಂಕು ಪ್ರಕರಣಗಳ ವಾರದ ಪಾಸಿಟಿವಿಟಿ ದರವು ಶೇಕಡ 1.18 ಆಗಿದೆ.
24 ಗಂಟೆಗಳಲ್ಲಿ 14,159 ಮಂದಿ ಚೇತರಿಕೆ
ಕಳೆದ 24 ಗಂಟೆಗಳಲ್ಲಿ ಒಟ್ಟು 14,159 ಮಂದಿ ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿನಿಂದಾಗಿ ಈವರೆಗೆ ಚೇತರಿಕೆ ಕಂಡವರ ಸಂಖ್ಯೆಯು 33697740 ಗೆ ಏರಿಕೆ ಕಂಡಿದೆ. ಚೇತರಿಕೆ ಪ್ರಮಾಣವೂ ಕೂಡಾ ಕಳೆದ 2020 ರ ಮಾರ್ಚ್‌ಗಿಂತ ಅಧಿಕವಾಗಿದೆ. ಪ್ರಸ್ತುತ ಒಟ್ಟು ಚೇತರಿಕೆ ಪ್ರಮಾಣವು ಶೇಕಡ 98.22 ಆಗಿದೆ. ಇನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ದೇಶದಲ್ಲಿ ಕೊರೊನಾ ವೈರಸ್ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಾಗಿನಿಂದ ಈವರೆಗೆ ಒಟ್ಟು 61.12 ಕೋಟಿ ಮಂದಿಯನ್ನು ಕೋವಿಡ್ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿದೆ.
ಕೋವಿಡ್ನಿಂದ ದೂರ ಮಾಡಲು ಮಾಸ್ಕ್ ಸಹಾಯಕ: ಆಕ್ಸ್ಫರ್ಡ್ ಅಧ್ಯಯನ
ಈ ನಡುವೆ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನವು ಶೀಘ್ರವಾಗಿ ನಡೆಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 41,16,230 ಕೋವಿಡ್ ಲಸಿಕೆಯ ಡೋಸ್‌ಗಳನ್ನು ನೀಡಲಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಲಸಿಕೆ ನೀಡಿದ ಡೋಸ್ ಪ್ರಮಾಣವು 107.29 ಕೋಟಿಗೆ ಏರಿಕೆ ಕಂಡಿದೆ. ಇನ್ನು ಈ ನಡುವೆ ಕೇಂದ್ರ ಆರೋಗ್ಯ ಸಚಿವಾಲಯವು, "14.68 ಕೋಟಿಗೂ ಹೆಚ್ಚು ಬಾಕಿ ಮತ್ತು ಬಳಕೆಯಾಗದ ಕೋವಿಡ್ ಲಸಿಕೆ ಡೋಸ್‌ಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ ಲಭ್ಯವಿವೆ," ಎಂದು ತಿಳಿಸಿದೆ.
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಧ್ಯಾಹ್ನ ಕಡಿಮೆ ಸಂಖ್ಯೆಯಲ್ಲಿ ಲಸಿಕೆಯನ್ನು ನೀಡಲಾಗಿರುವ ಜಿಲ್ಲೆಗಳ ಅಧಿಕಾರಿಗಳೊಂದಿಗೆ ವರ್ಚುವಲ್ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ. ಈ ಸಭೆಯು ಕೋವಿಡ್-19 ಲಸಿಕೆಯ ಮೊದಲ ಡೋಸ್‌ನ 50 ಪ್ರತಿಶತಕ್ಕಿಂತ ಕಡಿಮೆ ವ್ಯಾಪ್ತಿಯನ್ನು ಹೊಂದಿರುವ ಹಾಗೂ ಎರಡನೇ ಡೋಸ್‌ನ ಕಡಿಮೆ ವ್ಯಾಪ್ತಿಯ ಜಿಲ್ಲೆಗಳು ಒಳಗೊಂಡಿರುತ್ತದೆ.
(ಒನ್‌ಇಂಡಿಯಾ ಸುದ್ದಿ)