25 ನಿಮಿಷ, 9 ಉಗ್ರರ ಶಿಬಿರ, 70 ಹತ್ಯೆ, 60 ಮಂದಿಗೆ ಗಂಭೀರ ಗಾಯ: ಭಾರತ ಸುರಿದ ಬೆಂಕಿಗೆ ಪಾಕಿಸ್ತಾನ ತತ್ತರ, ಮಾಹಿತಿ ಇಲ್ಲಿದೆ!
Indian Army attack on Pakistan: ಬುಧವಾರ ಬೆಳಗಿನ ಜಾವ ಭಾರತವು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿದೆ. ಉಗ್ರರ ಶಿಬಿರಗಳನ್ನು ಗುರಿಯಾಗಿಸಿ ನಡೆಸಲಾದ ಈ ದಾಳಿಗೆ 'ಆಪರೇಷನ್ ಸಿಂಧೂರ' ಎಂದು ಹೆಸರಿಡಲಾಗಿದೆ. ಕಳೆದ ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮೂವರು ಉಗ್ರರು 25 ಭಾರತೀಯರ ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆಯು ಆಪರೇಷನ್ ಸಿಂಧೂರವನ್ನು ಕೈಗೊಂಡಿದೆ.
ಮುಜಾಫರಾಬಾದ್, ಬವಾಲ್‌ಪುರ, ಮುರಿದ್ಕೆ ಮತ್ತು ಅಹ್ಮದ್ಪುರ ಸೇರಿದಂತೆ ಪಟ್ಟು ಒಂಬತ್ತು ಸ್ಥಳಗಳಲ್ಲಿ ಆಪರೇಷನ್ ಸಿಂಧೂರವನ್ನು ಕೈಗೊಳ್ಳಲಾಗಿದೆ. ಈ ಜಾಗಗಳಲ್ಲಿ ಉಗ್ರ ಸಂಘಟನೆಗಳು ಬೀಡು ಬಿಟ್ಟಿದ್ದವು ಎಂದು ತಿಳಿದುಬಂದಿದೆ. ಆಪರೇಷನ್ ಸಿಂಧೂರವನ್ನು ಕೈಗೊಳ್ಳುವ ಮೂಲಕ ಭಾರತೀಯ ಸೇನೆಯು ಲಷ್ಕರ್-ಎ-ತೊಯ್ಬಾ, ಜೈಷ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು ನಡೆಸುತ್ತಿದ್ದ ಶಿಬಿರಗಳನ್ನು ಎಂಬ ಮಾಹಿತಿ ಲಭ್ಯವಾಗಿದೆ.

ದಾಳಿ ಕುರಿತು ಮಾತನಾಡಿರುವ ಭಾರತ ಸೇನೆಯು, ಯಾವುದೇ ನಾಗರಿಕರು ಹಾಗೂ ಪಾಕಿಸ್ತಾನದ ಮಿಲಿಟಿರಿಯನ್ನು ಗುರಿಯಾಗಿಸಿ ದಾಳಿ ಮಾಡಲಾಗಿಲ್ಲ. ಉಗ್ರರ ಶಿಬಿರಗಳನ್ನು ಗುರಿಯಾಗಿಸಿ ನಿಖರವಾಗಿ ದಾಳಿ ನಡೆಸಲಾಗಿದೆ ಎಂದು ಹೇಳಿಕೆ ನೀಡಿದೆ. ಭಾರತದ ದಾಳಿಯನ್ನು ಖಂಡಿಸಿರುವ ಪಾಕಿಸ್ತಾನ ಇದೊಂದು ಯುದ್ಧ ಕೃತ್ಯವಾಗಿದೆ ಎಂದು ಹೇಳಿದೆ. ಪ್ರತೀಕಾರದ ಬೆದರಿಕೆಯನ್ನೂ ಪಾಕ್ ಒಡ್ಡಿದೆ.
ಬುಧುವಾರ ರಾತ್ರಿ ನಡೆದ ದಾಳಿಯು ಭಾರತ ಹಾಗೂ ಪಾಕಿಸ್ತಾನದ ಗಡಿ ಭಾಗಗಳಲ್ಲಿ ಉದ್ವಿಗ್ನ ವಾತಾವರಣವನ್ನು ನಿರ್ಮಿಸಿದೆ. ಗಡಿಯಲ್ಲಿ ಪಾಕಿಸ್ತಾನವು ನಿಯಮಗಳನ್ನು ಉಲ್ಲಂಘಿಸಿ ಶೇಲ್ ದಾಳಿಯನ್ನು ನಡೆಸುತ್ತಿದೆ ಎಂದು ಭಾರತ ಸೇನೆ ಆರೋಪಿಸಿದೆ.
ಭಾರತವು 9 ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದ್ದು ಇದಕ್ಕಾಗಿ 24 ಕ್ಷಿಪಣಿಗಳನ್ನು ಬಳಸಿದೆ ಎಂಬ ಮಾಹಿತಿಯನ್ನು ಭಾರತೀಯ ಸೇನೆ ನೀಡಿದೆ. ಈ ದಾಳಿಯು 25 ನಿಮಿಷಗಳಲ್ಲಿ ಕೊನೆಗೊಂಡಿದ್ದು ಒಟ್ಟು 9 ಉಗ್ರ ಶಿಬಿರಗಳನ್ನು ನಾಶಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 70 ಉಗ್ರರನ್ನು ಹತ್ಯೆ ಮಾಡಲಾಗಿದೆ.
ದಾಳಿ ನಡೆದ ಸ್ಥಳಗಳು: ಮುಜಫರಾಬಾದ್, ಕೋಟ್ಲಿ, ಬವಾಲ್ಪುರ, ರಾವಲಕೋಟ್, ಚಕ್ಸ್ವ ರಿ, ಭಿಂಬರ್, ನೀಲಂ ಕಣಿವೆ, ಝೇಲಂ ಮತ್ತು ಚಕ್ವಾಲ್ನಲ್ಲಿ ನೆಲೆ ಕಂಡುಕೊಂಡಿದ್ದ ಉಗ್ರರ ಶಿಬಿರಗಳಲ್ಲಿ ಗುರಿಯಾಗಿಸಿ ಭಾರತವು ಕ್ಷಿಪಣಿ ದಾಳಿ ನಡೆಸಿದೆ. ದಾಳಿ ನಡೆದ ಎಲ್ಲಾ ಪ್ರದೇಶಗಳಲ್ಲಿ ಭಯೋತ್ಪಾದಕರು ಆಶ್ರಯ ಕಂಡುಕೊಂಡಿದ್ದರು ಎಂದು ಗುಪ್ತಚರ ಸಂಸ್ಥೆಗಳು ದೀರ್ಘಕಾಲದಿಂದ ಶಂಕಿಸುತ್ತಲೇ ಬಂದಿವೆ. ಈ ಸ್ಥಳಗಳಲ್ಲಿ ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಗಳು ಬೀಡು ಬಿಟ್ಟಿವೆ ಎಂದು ತಿಳಿದುಬಂದಿದೆ.












Click it and Unblock the Notifications