ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‌ಮಾಲ್ಡೀವ್ಸ್ ಗೆ 10 ಸಾವಿರ ಕೋಟಿ ನೆರವು, ಡ್ರ್ಯಾಗನ್ ಪಾರಮ್ಯಕ್ಕೆ ಭಾರತದ ತಡೆ

|
Google Oneindia Kannada News

ನವದೆಹಲಿ, ಡಿಸೆಂಬರ್ 17: ಭಾರತವು ಮಾಲ್ಡೀವ್ಸ್ ದೇಶಕ್ಕೆ 140 ಕೋಟಿ ಅಮೆರಿಕನ್ ಡಾಲರ್ ಹಣಕಾಸಿನ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರದಂದು ಘೋಷಣೆ ಮಾಡಿದ್ದಾರೆ. ಒಂದು ಅಮೆರಿಕನ್ ಡಾಲರ್ ಅಂದರೆ 71 ರುಪಾಯಿ ಅಂತ ಲೆಕ್ಕ ಮಾಡಿಕೊಳ್ಳಿ. 140 ಕೋಟಿಯನ್ನು 71ರಿಂದ ಗುಣಿಸಿದರೆ ಎಷ್ಟು ಮೊತ್ತ ಬರುತ್ತದೋ ಭಾರತೀಯ ರುಪಾಯಿಗಳಲ್ಲಿ ಅಷ್ಟು ಮೊತ್ತ ಆಗುತ್ತದೆ.

ಮೇಲ್ನೋಟಕ್ಕೆ ಗೊತ್ತಾಗುವಂತೆ ಹತ್ತು ಸಾವಿರ ಕೋಟಿ ರುಪಾಯಿ ಲೆಕ್ಕ ಸಿಗುತ್ತದೆ. ಚೀನಾದ ಹಿಡಿತದಲ್ಲಿ ಸಾಲಗಾರ ದೇಶವಾಗಿರುವ ಮಾಲ್ಡೀವ್ಸ್ ಗೆ ದೊಡ್ಡ ಮೊತ್ತದ ಆರ್ಥಿಕ ನೆರವನ್ನು ಭಾರತ ನೀಡುತ್ತಿದೆ. ಮಾಲ್ಡೀವ್ಸ್ ನ ಹೊಸ ಅಧ್ಯಕ್ಷ ಮೊಹ್ಮದ್ ಇಬ್ರಾಹಿಂ ಸೊಲಿಹ್ ಜತೆ ಮಾತುಕತೆ ನಡೆಸಿದ ಮೋದಿ, ಆ ನಂತರ ಈ ಘೋಷಣೆ ಮಾಡಿದ್ದಾರೆ.

ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆ, ಇಬ್ರಾಹಿಂಗೆ ಗೆಲುವು, ಭಾರತಕ್ಕೆ ಖುಷಿಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆ, ಇಬ್ರಾಹಿಂಗೆ ಗೆಲುವು, ಭಾರತಕ್ಕೆ ಖುಷಿ

ಇದಕ್ಕೂ ಮುನ್ನ ಇದ್ದ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಚೀನಾ ಪರ ಧೋರಣೆ ಇದ್ದವರು. ಕಳೆದ ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋಲನುಭವಿಸಿದರು. ಇದೀಗ ಮಾಲ್ಡೀವ್ಸ್ ದೇಶ ಭಾರತದತ್ತ ಸ್ನೇಹಕ್ಕೆ ಕೈ ಚಾಚಿದೆ. ಕಳೆದ ಐದು ವರ್ಷದಲ್ಲಿ ಮಾಲ್ಡೀವ್ಸ್ ನಲ್ಲಿ ಚೀನಾ ಭಾರೀ ಪ್ರಮಾಣದ ನಿರ್ಮಾಣ ಕಾರ್ಯಗಳನ್ನು ಕೈಗೊಂಡಿದೆ.

Indias $1.4 billion aid to Maldives, announced by PM Modi

ರಾಜಧಾನಿ ಮಾಲೆಯನ್ನು ಮುಖ್ಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಸಮುದ್ರ ಸೇತುವೆ, ಮನೆಗಳ ನಿರ್ಮಾಣ ಸೇರಿದಂತೆ ಹಲವು ನಿರ್ಮಾಣ ಕೈಗೊಂಡಿದೆ. ಈ ವೇಗದ ನಿರ್ಮಾಣ ಕಾರ್ಯ ಮಾಲ್ಡೀವ್ಸ್ ಅನ್ನು ಸಾಲದ ಸುಳಿಗೆ ಸಿಲುಕಿಸಿದ್ದು, ಆ ಮೊತ್ತವು 1.5ರಿಂದ 3 ಬಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ.

ನಾಲ್ಕು ಲಕ್ಷ ಜನಸಂಖ್ಯೆ ಇರುವ ಮಾಲ್ಡೀವ್ಸ್ ದೇಶವು ಚೀನಾಗೆ ಎಷ್ಟು ಸಾಲ ವಾಪಸ್ ಮಾಡಬೇಕಾಗುತ್ತದೆ ಎಂದು ಲೆಕ್ಕ ಹಾಕಿ ತಿಳಿಯುವುದಾಗಿ ಹೊಸ ಅಧ್ಯಕ್ಷ ಸೊಲಿಹ್ ಆಡಳಿತವು ಹೇಳಿತ್ತು. ಮಿತ್ರ ದೇಶವಾಗಿ ಮಾಲ್ಡೀವ್ಸ್ ಗೆ ನೆರವು ನೀಡಲು ಭಾರತ ಸಿದ್ಧವಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಮಾಲ್ಡೀವ್ಸ್ ನಲ್ಲಿ ತನ್ನ ನೆಲೆಯೂರಲು ಯತ್ನಿಸುತ್ತಿರುವ ಚೀನಾಗೆ ಭಾರತದಿಂದ 'ಚೆಕ್' ಇಟ್ಟಂತೆ ಆಗಿದೆ. ಈಗ ಮಾಲ್ಡೀವ್ಸ್ ಜತೆಗೆ ಭಾರತವು ವ್ಯಾಪಾರ, ಆರೋಗ್ಯ ಹಾಗೂ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡಿದೆ. ಹಿಂದೂ ಮಹಾಸಾಗರದ ರಾಷ್ಟಗಳಾದ ಶ್ರೀಲಂಕಾದಂಥ ಕಡೆ ಚೀನಾವು ತನ್ನ ಸ್ನೇಹ ವೃದ್ಧಿಸಿಕೊಂಡು, ಸವಾಲು ಒಡ್ಡುವ ಸಾಧ್ಯತೆಗಳನ್ನು ಭಾರತ ಚಾಕಚಾಕ್ಯತೆಯಿಂದ ನಿಭಾಯಿಸುತ್ತಿದೆ.

English summary
India will give financial assistance of $1.4 billion to the Maldives, Prime Minister Narendra Modi said today, the biggest aid yet to the Indian Ocean island nation that is grappling with debt from a Chinese building spree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X