ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Big Breaking: ಒಂದೇ ದಿನ 10952 ಕೇಸ್: ವಿಶ್ವದಲ್ಲಿ 4ನೇ ಸ್ಥಾನಕ್ಕೇರಿದ ಭಾರತ

|
Google Oneindia Kannada News

ದೆಹಲಿ, ಜೂನ್ 12: ಭಾರತದಲ್ಲಿ ಒಂದೇ ದಿನ 10,956 ಜನರಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,97,535ಕ್ಕೆ ಏರಿಕೆಯಾಗಿದೆ.

ಮೊದಲ ಬಾರಿಗೆ ಭಾರತದಲ್ಲಿ ದಿನವೊಂದರಲ್ಲಿ ಹತ್ತು ಸಾವಿರ ಸೋಂಕು ವರದಿ ಮಾಡಿದೆ. ಕಳೆದ 24 ಗಂಟೆಯಲ್ಲಿ 396 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, ಒಟ್ಟು ದೇಶದಲ್ಲಿ 8498 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಆಸ್ಪತ್ರೆ ಎಡವಟ್ಟು: ಕೊರೊನಾ ರೋಗಿಯ ಶವ ಅದಲು-ಬದಲು, ಆಮೇಲೆ ಏನಾಯ್ತು?ಆಸ್ಪತ್ರೆ ಎಡವಟ್ಟು: ಕೊರೊನಾ ರೋಗಿಯ ಶವ ಅದಲು-ಬದಲು, ಆಮೇಲೆ ಏನಾಯ್ತು?

2.9 ಲಕ್ಷ ಸೋಂಕಿನ ಪೈಕಿ 1,47,195 ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 1,41,842 ಪ್ರಕರಣಗಳು ಇನ್ನು ಸಕ್ರಿಯವಾಗಿದೆ. ಜೂನ್ 12ರ ವರದಿ ಬಳಿಕ ಅತಿ ಹೆಚ್ಚು ಸೋಂಕು ಹೊಂದಿರುವ ವಿಶ್ವದ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರಿದೆ. ಮುಂದೆ ಓದಿ....

ಯುಕೆ, ಸ್ಪೇನ್ ಹಿಂದಿಕ್ಕಿದ ಭಾರತ

ಯುಕೆ, ಸ್ಪೇನ್ ಹಿಂದಿಕ್ಕಿದ ಭಾರತ

ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ (2,97,535) ನಾಲ್ಕನೇ ಸ್ಥಾನಕ್ಕೇರಿದೆ. ಕೊರೊನಾ ಹಾಟ್‌ಸ್ಪಾಟ್‌ ದೇಶಗಳಾದ ಯುಕೆ (291,409), ಹಾಗು ಸ್ಪೇನ್ (289,787) ದೇಶಗಳನ್ನು ಹಿಂದಿಕ್ಕಿದ ಭಾರತ ರಷ್ಯಾ ನಂತರದ ಸ್ಥಾನ ಪಡೆದುಕೊಂಡಿದೆ. ಇದು ಸಹಜವಾಗಿ ಭಾರತಕ್ಕೆ ಆತಂಕದ ವಿಚಾರ.

ಹೊಸ ಕೇಸ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ

ಹೊಸ ಕೇಸ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ

ಪ್ರಸ್ತುತ ಹೊಸ ಕೇಸ್‌ಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆರಿಕ, ಬ್ರೆಜಿಲ್ ದೇಶಗಳ ನಂತರ ಭಾರತದಲ್ಲಿ ಪ್ರತಿದಿನ ಅತಿ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ಜೂನ್ 11 ರಂದು ಭಾರತದಲ್ಲಿ 10,956 ಕೇಸ್ ದಾಖಲಾಗಿದೆ. ಸದ್ಯ ಅತಿ ಹೆಚ್ಚು ಹೊಸ ಕೇಸ್ ಪಟ್ಟಿಯಲ್ಲಿ ಬ್ರೆಜಿಲ್ (30,465) ಮೊದಲ ಸ್ಥಾನದಲ್ಲಿದೆ. ಅಮೆರಿಕ (11,128) ಎರಡನೇ ಸ್ಥಾನದಲ್ಲಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ: ಜೂನ್ 11ರಂದು ದಾಖಲೆಯ ಕೇಸ್ ವರದಿಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ: ಜೂನ್ 11ರಂದು ದಾಖಲೆಯ ಕೇಸ್ ವರದಿ

ರಷ್ಯಾ ಹಿಂದಿಕ್ಕುವ ಸಾಧ್ಯತೆ

ರಷ್ಯಾ ಹಿಂದಿಕ್ಕುವ ಸಾಧ್ಯತೆ

ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣ ಹೊಂದಿರುವ ಪಟ್ಟಿಯಲ್ಲಿ ರಷ್ಯಾ ದೇಶವನ್ನು ಹಿಂದಿಕ್ಕುವತ್ತಾ ಭಾರತ ಹೆಜ್ಜೆ ಇಟ್ಟಿದೆ. ರಷ್ಯಾದಲ್ಲಿ ಈವರೆಗೂ 502,436 ಜನರಿಗೆ ಸೋಂಕು ತಗುಲಿದೆ. ಪ್ರಸ್ತುತ ರಷ್ಯಾದಲ್ಲಿ ಹೊಸ ಕೇಸ್‌ಗಳ ಸಂಖ್ಯೆಯೂ ಇಳಿಕೆಯಾಗಿದೆ. ಮತ್ತೊಂದೆಡೆ ಭಾರತದಲ್ಲಿ ಹೊಸ ಕೇಸ್ ಸಂಖ್ಯೆ ಏರಿಕೆಯಾಗುತ್ತಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ರಷ್ಯಾವನ್ನು ಭಾರತ ಹಿಂದಿಕ್ಕುವ ಸಾಧ್ಯತೆ ಹೆಚ್ಚು.

ಸಾವಿನ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ

ಸಾವಿನ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ

ಕೊರೊನಾ ವೈರಸ್‌ನಿಂದ ಪ್ರಾಣ ಕಳೆದುಕೊಂಡಿರುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಒಟ್ಟು 116,034 ಸಾವು ಸಂಭವಿಸಿದೆ. ಯುಕೆಯಲ್ಲಿ 41,058 ಸಾವು, ಬ್ರೆಜಿಲ್‌ನಲ್ಲಿ 41,279 ಸಾವು, ಇಟಲಿ 34,167, ಸ್ಪೇನ್ 27,136, ಫ್ರಾನ್ಸ್ 29,346 ಸಾವು ವರದಿಯಾಗಿದೆ. ಭಾರತದಲ್ಲಿ 8,501 ಜನರು ಸಾವನ್ನಪ್ಪಿದ್ದಾರೆ.

English summary
India reports the highest single-day spike of 10,956 new COVID19 cases & 396 deaths in the last 24 hours. Total number of cases in the country now at 297535.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X