Get Updates
Get notified of breaking news, exclusive insights, and must-see stories!

ಭಾರತದಲ್ಲಿ ವೇಗ ಹೆಚ್ಚಿಸಿದ ಕೊರೊನಾ: ಒಂದೇ ದಿನ 24,248 ಕೇಸ್

ದೆಹಲಿ, ಜುಲೈ 6: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದೆ. ಸೋಮವಾರ ಬೆಳಿಗ್ಗಿನ ವರದಿಯಂತೆ ಒಂದೇ ದಿನದಲ್ಲಿ 24,248 ಕೇಸ್ ಪತ್ತೆಯಾಗಿದೆ. ಈವರೆಗೂ ದಿನವೊಂದರಲ್ಲಿ ವರದಿಯಾದ ಅತಿ ಹೆಚ್ಚು ಸಂಖ್ಯೆಯ ಸೋಂಕು ಇದಾಗಿದೆ.

ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 24,248 ಜನರಿಗೆ ಕೊವಿಡ್ ತಗುಲಿದ್ದರೆ, 425 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,97,413 ತಲುಪಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಜರಣಗಳು ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಏರಿದೆ. ರಷ್ಯಾವನ್ನು (681,251) ಹಿಂದಿಕ್ಕಿರುವ ಭಾರತ ಬ್ರೆಜಿಲ್ ನಂತರದ ಸ್ಥಾನ ಪಡೆದುಕೊಂಡಿದೆ.

ಅತಿ ಹೆಚ್ಚು ಕೇಸ್ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ (2,982,928) ಮೊದಲ ಸ್ಥಾನದಲ್ಲಿದೆ. ಬ್ರೆಜಿಲ್ (1,604,585) ಎರಡನೇ ಸ್ಥಾನದಲ್ಲಿದೆ.

India Reports A Spike Of 24,248 New Covid19 Cases On Monday

ಕಳೆದ 24 ಗಂಟೆಯ ವರದಿ ನೋಡಿದರೆ ಮಹಾರಾಷ್ಟ್ರದಲ್ಲಿ 6555 ಕೇಸ್, ತಮಿಳುನಾಡಿನಲ್ಲಿ 4150 ಪ್ರಕರಣ, ದೆಹಲಿಯಲ್ಲಿ 2244 ಕೇಸ್, ಉತ್ತರ ಪ್ರದೇಶದಲ್ಲಿ 1153 ಕೇಸ್, ತೆಲಂಗಾಣದಲ್ಲಿ 1590 ಕೇಸ್, ಕರ್ನಾಟಕದಲ್ಲಿ 1925 ಪ್ರಕರಣ ವರದಿಯಾಗಿದೆ.

ಇನ್ನುಳಿದಂತೆ ದೇಶದಲ್ಲಿ ಈವರೆಗೂ 4,24,433 ಜನರು ಗುಣಮುಖರಾಗಿದ್ದಾರೆ. 2,53,287 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+