Breaking: ದೇಶದಲ್ಲಿ 20 ಸಾವಿರದಿಂದ ಕೆಳಗಿಳಿದ ಕೊರೊನಾ ಪ್ರಕರಣಗಳು

ನವದೆಹಲಿ, ಜುಲೈ 25: ದೇಶದಲ್ಲಿ ಕೊರೊನಾ ಪ್ರಕರಣಗಳು 20 ಸಾವಿರದಿಂದ ಕೆಳಗಿಳಿದಿವೆ. ಕಳೆದೊಂದು ವಾರದಿಂದ 20 ಸಾವಿರದ ಮೇಲಿದ್ದ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 16,866 ಹೊಸ ಕೋವಿಡ್ ಪ್ರಕರಣಗಳು ಮತ್ತು 41 ಸಾವುಗಳು ವರದಿಯಾಗಿವೆ.

16,866 ಹೊಸ ಕೋವಿಡ್ ಪ್ರಕರಣಗಳಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,50,877ಕ್ಕೆ ಏರಿಕೆಯಾಗಿದೆ. 18,148 ಮಂದಿ ಚೇತರಿಸಿಕೊಂಡಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಶೇಕಡಾ 7.03 ರಷ್ಟಿದೆ.

ಕಳೆದ ಏಳು ದಿನಗಳಲ್ಲಿ (ಜುಲೈ 18 ರಿಂದ 24) ದೇಶದಲ್ಲಿ ಸುಮಾರು 1.37 ಲಕ್ಷ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ, ಇದು ಹಿಂದಿನ ವಾರಕ್ಕಿಂತ 6.5% ಹೆಚ್ಚಾಗಿದೆ. ಇದು ಈ ವರ್ಷದ ಫೆಬ್ರವರಿ ನಂತರ ಒಂದು ವಾರದಲ್ಲಿ ಇಷ್ಟು ಕೇಸ್‌ಗಳು ಪತ್ತೆಯಾಗಿರುವುದು ಇದೇ ಮೊದಲು.

India reports 16,866 fresh Covid cases and 41 deaths in the last 24 hours

ರಾಜ್ಯದಲ್ಲಿಯೂ ಕಳೆದ 24 ಗಂಟೆಗಳಲ್ಲಿ 1,151 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 910 ಪ್ರಕರಣಗಳು ವರದಿಯಾಗಿವೆ. ಒಟ್ಟು 837 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 9,162ಕ್ಕೆ ತಲುಪಿದೆ. ಇದರಲ್ಲಿ ಬೆಂಗಳೂರಿನಲ್ಲಿಯೇ 7,734 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ವರದಿ ಬಿಡುಗಡೆ ಮಾಡಿದೆ.

ತೆಲಂಗಾಣದಲ್ಲಿ ಭಾನುವಾರ 531 ಹೊಸ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಏರಿಕೆ 8,14,303 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ. ಕೊರೊನಾ ಸಂಬಂಧಿತ ಸೋಂಕಿನಿಂದ ಯಾವುದೇ ಹೊಸ ಸಾವು ಸಂಭವಿಸಿಲ್ಲ.

India reports 16,866 fresh Covid cases and 41 deaths in the last 24 hours

ಹೈದರಾಬಾದ್‌ನಲ್ಲಿ ಅತಿ ಹೆಚ್ಚು 281 ಪ್ರಕರಣಗಳಿವೆ. ನಂತರ ರಂಗಾ ರೆಡ್ಡಿ ಜಿಲ್ಲೆಯಲ್ಲಿ 42 ಮತ್ತು ಮೇಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯಲ್ಲಿ 34 ಪ್ರಕರಣಗಳು ದಾಖಲಾಗಿವೆ. ತೆಲಂಗಾಣದಲ್ಲಿ ಒಟ್ಟು 612 ಜನರು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 8,05,562 ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,630.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+