ಭಾರತ: 618 ಹೊಸ ಕೇಸ್ ದಾಖಲು, ಪಾಸಿಟಿವ್ ಬಂದ ವಿದೇಶಿಗರ ಮೇಲೆ ತೀವ್ರ ನಿಗಾ, ಜನರಲ್ಲಿ ಹೆಚ್ಚಾದ ಆತಂಕ

ದೇಶದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 618 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. ವಿದೇಶಿಗರ ಮೇಲೆ ನಿಗಾ ಇರಿಸಲಾಗಿದೆ.

ಬೆಂಗಳೂರು, ಮಾರ್ಚ್ 16: ಕೆಲವು ರಾಜ್ಯಗಳು ಸೇರಿದಂತೆ ದೇಶದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕ್ರಮೇಣ ಏರಿಕೆ ಆಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 618 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿವೆ. ಎಚ್‌3ಎನ್2 ಭೀತಿ ಮಧ್ಯೆ ಜನರು ಮತ್ತೆ ಕೊವಿಡ್ ಹೆಚ್ಚಳದಿಂದ ಆತಂಕ ಎದುರಿಸುವಂತಾಗಿದೆ. ಪಾಸಿಟಿವ್ ಬಂದ ವಿದೇಶಿಗರ ಮೇಲೆ ನಿಗಾ ಇರಿಸಲಾಗಿದೆ.

ಕೋವಿಡ್ ಪಾಸಿಟಿವ್ ಪಕ್ರರಣದ 618 ಹೊಸ ಕೇಸ್‌ನಿಂದ ದೇಶದಲ್ಲಿ ಒಟ್ಟು ಇದುವರೆಗೆ ಸಕ್ರಿಯ ಪ್ರಕರಣಗಳು 4,197 ಕ್ಕೆ ಏರಿಕೆಯಾಗಿದೆ. ಒಟ್ಟು ಐದು ಮಂದಿ ಕಳೆದ 24 ಗಂಟೆಯಲ್ಲಿ ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

India Recorded 618 New Covid Positive Case, 5 Death, Isolated For 4 Australian Tourists test positive

ಕೋವಿಡ್ 5 ಸಾವುಗಳ ಪೈಕಿ ಎರಡು ಕರ್ನಾಟಕದಲ್ಲಿ, ಎರಡು ಮಹಾರಾಷ್ಟ್ರ ರಾಜ್ಯದಲ್ಲಿ ಹಾಗೂ ಒಂದು ಸಾವು ಉತ್ತರಾಖಂಡನಲ್ಲಿ ಆಗಿದೆ ಎಂದು ವರದಿ ಹೇಳುತ್ತದೆ. ಈ ಮಧ್ಯೆ ಕೋವಿಡ್ ಪಾಸಿಟಿವ್ ಪರೀಕ್ಷೆಯಲ್ಲಿ ನಾಲ್ವರು ಆಸ್ಟ್ರೇಲಿಯಾದ ಪ್ರವಾಸಿಗರಿಗೆ ಪಾಸಿಟಿವ್ ಬಂದಿತ್ತು. ಅವರನ್ನು ಜೈಪುರದ ರಾಜಸ್ಥಾನ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ (RUHS) ಆಸ್ಪತ್ರೆಯಲ್ಲಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಅವರನ್ನು ಪ್ರತ್ಯೇಕಿಸಿ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಏರುಗತಿಯಲ್ಲಿ ಸಾಗುತ್ತಿರುವ ಕೋವಿಡ್ ಪಾಸಿಟಿವ್ ಸಂಖ್ಯೆ

ದೇಶದಲ್ಲಿ ಕೆಲವೇ ವಾರಗಳಲ್ಲಿ ಭಾರತವು ದೈನಂದಿನ ಪ್ರಕರಣಗಳಲ್ಲಿ ದಿಗ್ಭ್ರಮೆಗೊಳಿಸುವಷ್ಟು ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಅದರೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೊಸದಾಗಿ ಐದು ಸಾವು ಹಿಡಿದು ಒಟ್ಟು ದೇಶದಲ್ಲಿನ ಇದುವರೆಗಿನ ಸಾವಿನ ಸಂಖ್ಯೆ 5,30,789 ಕ್ಕೆ ಏರಿದೆ. ರಾಷ್ಟ್ರೀಯ ಕೋವಿಡ್-19 ಚೇತರಿಕೆ ದರವು 98.80 ಪ್ರತಿಶತದಷ್ಟು ದಾಖಲಾಗಿದೆ.

India Recorded 618 New Covid Positive Case, 5 Death, Isolated For 4 Australian Tourists test positive

ತಮಿಳುನಾಡು, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಹಾಗೂ ಜಮ್ಮು ಮತ್ತು ಕಾಶ್ಮೀರ ಸೇರಿ ಮುಂತಾದ ರಾಜ್ಯಗಳಲ್ಲಿ ಕೋವಿಡ್ ಹೆಚ್ಚಾಗಿದೆ. ದೇಶದ ಕೋವಿಡ್ ಪಾಸಿಟಿವಿಟಿ ದರ ಶೇಕಡಾ 5 ರಿಂದ 10ಕ್ಕೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯವಾರು ಅತ್ಯಧಿಕ ಪಾಸಿಟಿವ್ ಕೇಸ್ ನೋಡುವುದಾದರೆ, ಕಳೆದ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ 28 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಇನ್ನೂ ಗುಜರಾತ್ ನಲ್ಲಿ 90 ಪಾಸಿಟಿವ್ ಕೇಸ್ ಬೆಳಕಿಗೆ ಬಂದಿವೆ. ಆರೋಗ್ಯ ಸಚಿವಾಲಯ ಹೇಳುವಂತೆ, ಈ ಹಿಂದಿನ ವಾರದಲ್ಲಿ (ಮಾರ್ಚ್ 8ರಿಂದ 14) ದೇಶಾದ್ಯಂತ ಒಂಬತ್ತು ಜಿಲ್ಲೆಗಳು ಕೋವಿಡ್-ಪಾಸಿಟಿವಿಟಿ ದರ ಶೇಕಡಾ 10 ಕ್ಕಿಂತ ಹೆಚ್ಚಿದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+