India Corona Report: ಹೊಸದಾಗಿ 12,591 ಕೊರೊನಾ ಕೇಸ್ ದಾಖಲು, 8 ರಾಜ್ಯಗಳಲ್ಲಿ ಸೋಂಕು ಏರಿಕೆ, ವಿವರ
ನವದೆಹಲಿ, ಏಪ್ರಿಲ್ 20: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಕೋವಿಡ್-19 ಸೋಂಕಿನ ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 12,591 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ಒಟ್ಟು 8 ರಾಜ್ಯಗಳಲ್ಲಿ ಕೊರೊನಾ ಏರಿಕೆ ಆಗಿದೆ. ಈ ಸಂಬಂಧ ಪ್ರಧಾನಮಂತ್ರಿ ಕಾರ್ಯಾಲಯವು ಸಭೆ ನಡೆಸಿ ಕೈಗೊಂಡ ಕ್ರಮಗಳ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ.
ಏಪ್ರಿಲ್ 19ರಂದು ಬುಧವಾರ 10,542 ಪ್ರಕರಣ ದಾಖಲಾಗಿದ್ದು, ಮರುದಿನವೇ ಕೋವಿಡ್ ಪ್ರಕರಣಗಳು ಗಮನಾರ್ಹವಾಗಿ ಏರಿಕೆ ಕಂಡಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

ದೇಶದಲ್ಲಿ ಐದು ದಿನಗಳ ಹಿಂದೆ ಅಂದರೆ ಏಪ್ರಿಲ್ 15 ರಿಂದ ಏಪ್ರಿಲ್ 18 ರವರೆಗೆ ಕ್ರಮವಾಗಿ 11,109 ಮತ್ತು 7,633 ಪ್ರಕರಣಗಳು ವರದಿಯಾದವು. ಇದನ್ನು ನೋಡಿ ಸೋಂಕಿನ ಆರ್ಭಟ ಕಡಿಮೆ ಆಯಿತೆಂದು ಭಾವಿಸಲಾಯಿತು. ಆದರೆ ಏಪ್ರಿಲ್ 18 ರಂದು 7,633, ಏಪ್ರಿಲ್ 17 ರಂದು 9,111, ಏಪ್ರಿಲ್ 16 ರಂದು 10,093 ಮತ್ತು ಏಪ್ರಿಲ್ 15 ರಂದು 10,753 ದಾಖಲಾಗಿ ಮತ್ತೆ ಕೊರೊನಾ ಹೆಚ್ಚಳದ ಮುನ್ಸೂಚನೆ ದೊರೆಯಿತು.
ಸಕ್ರಿಯ ಕೇಸ್ ಸಂಖ್ಯೆ 65,286 ಕ್ಕೆ ಏರಿಕೆ
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಬುಧವಾರ 63,562 ರಷ್ಟಿದ್ದ ದೇಶದ ಸಕ್ರಿಯ ಪ್ರಕರಣಗಳು ಗುರುವಾರಕ್ಕೆ 65,286 ಕ್ಕೆ ಏರಿದೆ ಆಗಿದೆ. ಸದ್ಯ ದೇಶದಲ್ಲಿ ಪ್ರಸ್ತುತ ಚೇತರಿಕೆ ಪ್ರಮಾಣ ಶೇಕಡಾ 98.67 ಪ್ರತಿಶತದಷ್ಟಿದೆ. ನಿತ್ಯದ ಕೋವಿಡ್ ಪಾಸಿಟಿವಿಟಿ ದರ ಶೇಕಡಾ 5.46 ಶೇಕಡಾ ಇದೆ. ವಾರದ ಪಾಸಿಟಿವಿಟಿ ದರ ಶೇಕಡಾ 5.32ರಷ್ಟು ಇದೆ ಎಂದು ತಿಳಿದು ಬಂದಿದೆ.

ಕಳೆದ 24 ಗಂಟೆಗಳಲ್ಲಿ 10,827 ಮಂದಿ ಗುಣಮುಖರಾಗಿದ್ಆರೆ. ಅದರಿಂದ ಸೋಂಕಿನಿಂದ ಇದುವರೆಗಿನ ಗುಣಮುಖರಾದವರ ಸಂಖ್ಯೆ 4,42,61,476ಕ್ಕೆ ಹೆಚ್ಚಳವಾಗಿದೆ.
ರಾಷ್ಟ್ರವ್ಯಾಪಿ ಕೊರೊನಾ ಲಸಿಕಾಕರಣ ಅಭಿಯಾನದ ಅಡಿಯಲ್ಲಿ, ಭಾರತವು ಇದುವರೆಗೆ 220,66,28,332 ಕೋಟಿ ಕೋವಿಡ್ ಲಸಿಕೆ ಡೋಸ್ ನೀಡಿದೆ. ಅದರಲ್ಲಿ 95.21 ಕೋಟಿ ಎರಡನೇ ಡೋಸ್ ಗಳು ಹಾಗೂ 22.87 ಕೋಟಿ ಜನರಿಗೆ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್‌ಗಳನ್ನು ನೀಡಿದೆ. ಕಳೆದ ಒಂದೇ ದಿನದಲ್ಲಿ 574 ಡೋಸ್‌ಗಳನ್ನು ಅರ್ಹರಿಗೆ ನೀಡಲಾಗಿದೆ. ದೇಶದಲ್ಲಿ ಒಂದೇ ಇದನ 2,30,419 ಕೊರೊನಾ ತಪಾಸಣೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

ಉನ್ನತ ಮಟ್ಟದ ಸಭೆಯ ಅಂಶಗಳು
ದೇಶಾದ್ಯಂತ ಕೋವಿಡ್ ಹೆಚ್ಚುತ್ತಿದ್ದರಿಂದ ಪರಿಸ್ಥಿತಿ ನಿರ್ವಹಣೆ ಕುರಿತು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರು ಬುಧವಾರ ಉನ್ನತ ಮಟ್ಟದ ಸಭೆ ನಡೆಸಿದರು. ಇದರಲ್ಲಿ ಆರೋಗ್ಯ ಮೂಲ ಸೌಲಭ್ಯಗಳು, ಔಷಧಿಗಳು, ಲಸಿಕೆ ಅಭಿಯಾನದ ಸನ್ನದ್ಧತೆ, ಕೋವಿಡ್ ಪ್ರಕರಣಗಳ ಇತ್ತೀಚಿನ ಏರಿಕೆ ಹಾಗೂ ಕೈಗೊಳ್ಳಬಹುದಾದ ಅಗತ್ಯ ಕ್ರಮ ಕುರಿತು ತಜ್ಞರ ಜೊತೆಗೆ ಅವರು ಚರ್ಚಿಸಿದರು.
ಬಳಿಕ ಪ್ರಧಾನ ಮಂತ್ರಿ ಕಾರ್ಯಾಲಯವು ಪ್ರಕಟಣೆ ಹೊರಡಿಸಿದೆ. ಅದರಲ್ಲಿ 'ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಷನ್ ಮತ್ತು ಅನುಸರಣೆ' ಈ ಐದು ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಮುಂದುವರೆಸಬೇಕು. ಜೊತೆಗೆ ಕೋವಿಡ್ ಹೆಚ್ಚಳದ ಕುರಿತು ಸ್ಥಳಿಯ ಆರೋಗ್ಯ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದೆ.
ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಕೊರೊನಾ ಏರಿಕೆ
ಭಾರತದ 8 ರಾಜ್ಯಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಈ ಬಾರಿಯು ಸಹ ದೇಶ ಕೋವಿಡ್-19 ಪಾಸಿಟಿವ್ ಪ್ರಕರಣಗಳ ತ್ವರಿತ ಏರಿಕೆಗೆ ಸಾಕ್ಷಿಯಾಗುತ್ತಿದೆ. ಕೇರಳ, ದೆಹಲಿ, ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಕೊರೊನಾ ಹೆಚ್ಚಾಗಿದೆ. ಇದರಿಂದ ಪಾಸಿಟಿವಿಟಿ ಸಹ ದಿನದಿಂದ ದಿನಕ್ಕೆಏರಿಕೆ ಆಗುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯವು, ಕೊರೊನಾ ಲಸಿಕೆ ತಯಾರಕರಿಂದ ನೇರವಾಗಿ ಅಗತ್ಯವಿರುವ ಕೋವಿಡ್ ಲಸಿಕೆ ಡೋಸ್‌ಗಳನ್ನು ಖರೀದಿಸಲು ಕ್ರಮ ಕೈಗೊಳ್ಳಬಹುದೆಂದು ರಾಜ್ಯಗಳಿಗೆ ಈಗಾಗಲೇ ಸಲಹೆ ನೀಡಿದೆ ಎಂದು ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಈ ಲಸಿಕೆಗಳನ್ನು ಒಮ್ಮೆ ಸಂಗ್ರಹಿಸಿದ ನಂತರ ಅಸ್ತಿತ್ವದಲ್ಲಿರುವ ಕೋವಿಡ್ ಲಸಿಕೆ ಮಾರ್ಗಸೂಚಿಗಳ ಪ್ರಕಾರ ಅವುಗಳನ್ನು ನಿರ್ವಹಣೆ ಮಾಡಬೇಕು ಎಂದು ತಿಳಿಸಲಾಗಿದೆ.












Click it and Unblock the Notifications