ಭಾರತದ ದಿಟ್ಟ ಹೆಜ್ಜೆ: ಚಂದ್ರಯಾನ-2ಗೆ ಇಸ್ರೋ ಸಿದ್ಧತೆ
ಬೆಂಗಳೂರು/ಮಂಗಳೂರು, ಮಾರ್ಚ್, 01: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ಚಂದ್ರಯಾನ-2ಕ್ಕೆ ದೇಶ ಸಿದ್ಧವಾಗಿದೆ ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ತಿಳಿಸಿದರು.
ಮಂಗಳೂರಿನ ಕಾರ್ಯಕ್ರಮವೊಂದರರಲ್ಲಿ ಮಾತನಾಡಿದ ಕಿರಣ್ ಕುಮಾರ್ ಮಂಗಳಯಾನದ ಯಶಸ್ಸು ನಮ್ಮಲ್ಲಿ ಹೊಸ ಉತ್ಸಾಹ ತಂದಿದೆ. ಇದನ್ನು ಆಧಾರವಾಗಿಟ್ಟುಕೊಂಡು ಚಂದ್ರಯಾನ ಕೈಗೊಳ್ಳಲಾಗುವುದು ಎಂದು ಹೇಳಿದರು.[ಅಂತರ್ಜಲ ಪತ್ತೆಗೆ ಇಸ್ರೋ ಮೊರೆಹೋದ ಸರ್ಕಾರ]

ಬೆಂಗಳೂರಲ್ಲಿ 'ಉಪಗ್ರಹದ ಪರಿವೀಕ್ಷಣಾ ಸಾಮರ್ಥ್ಯ ಕೇಂದ್ರ'
ವಿದ್ಯಾರ್ಥಿ ಹಾಗೂ ಸಂಶೋಧಕರಿಗೆ ಅನುಕೂಲವಾಗುವ ರೀತಿಯಲ್ಲಿ ಮುಂದಿನ ವರ್ಷ 'ಉಪಗ್ರಹದ ಪರಿವೀಕ್ಷಣಾ ಸಾಮರ್ಥ್ಯ ಕೇಂದ್ರ' ಆರಂಭಿಸಲಾಗುವುದು. ಈ ಬೆಗ್ಗೆ ಬೆಂಗಳೂರಿನ ಕೇಂದ್ರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಿರಣ್ ಕುಮಾರ್ ತಿಳಿಸಿದ್ದಾರೆ. ಇದು ದೇಶೀಯ ಸಂಶೋಧಕರು ನಕ್ಷತ್ರ ಸಮೂಹಗಳ ಕುರಿತು ಮಾಡುವ ಸಂಶೋಧನೆಗೆ ನೆರವಾಗಲಿದೆ ಎಂದು ತಿಳಿಸಿದರು.[ಉಪಗ್ರಹ ಉಡಾವಣೆ: ದೊಡ್ಡೋರೆಲ್ಲ ಇಸ್ರೋ ಬಳಿ ಬರೋದು ಯಾಕೆ?]
ಇಸ್ರೋ ಈವರೆಗೆ 51 ರಾಕೆಟ್ಗಳನ್ನು ಉಡಾವಣೆ ಮಾಡಿದೆ. ಉಪಗ್ರಹ ಉಡಾವಣೆಗೆ ಬೇಕಿರುವ ಉಪಕರಣಗಳನ್ನು ದೇಶೀಯ ಸಂಸ್ಥೆಗಳಲ್ಲಿಯೇ ಉತ್ಪಾದನೆ ಮಾಡಿಕೊಳ್ಳಲಾಗುತ್ತಿದೆ. ವಿಜ್ಞಾನ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಟಾಟಾ ಸಂಸ್ಥೆ, ಐಐಎಸ್ಸಿ, ರಾಮನ್ ಇನ್ಸ್ಟಿಟ್ಯೂಟ್ ತಯಾರಿಸಿದ ಉಪಕರಣಗಳನ್ನೇ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.












Click it and Unblock the Notifications