India Heavy Rain: ದೇಶದ ವಿವಿಧ ಭಾಗಗಳಲ್ಲಿ ಒಂದು ವಾರ ಭಾರೀ ಮಳೆ ಎಚ್ಚರಿಕೆ, ಎಲ್ಲೆಲ್ಲಿ?

India Weather Update: ದೇಶದಲ್ಲಿ ಕೆಲವು ದಿನಗಳಿಂದ ಮತ್ತ ಮಳೆ ಅಬ್ಬರಿಸಿ, ಬೊಬ್ಬಿರಿಯುತ್ತಿದೆ. ಮುಂಗಾರು ಮಳೆ ಸುರಿಸುವ ಮಾರುತಗಳು ಈಶಾನ್ಯ ಹಾಗೂ ಪೂರ್ವ ಭಾರತದಲ್ಲಿ ಹೆಚ್ಚು ಸಕ್ರಿಯವಾಗಿದೆ. ಈ ಕಾರಣದಿಂದ ಮುಂದಿನ 07 ದಿನಗಳ ಕಾಲ ದೇಶದ ಈ ವಿವಿಧ ಭಾಗಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ವ್ಯಾಪಕವಾಗಿ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಐಎಂಡಿ ನೀಡಿರುವ ಮುನ್ಸೂಚನೆ ನೋಡುವುದಾದರೆ, ದೇಶದ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ ಅತ್ಯಧಿಕ ಮಳೆ ಆಗುವ ನಿರೀಕ್ಷೆಗಳು ದಟ್ಟವಾಗಿದೆ. ಕರ್ನಾಟಕ ರಾಜ್ಯ ಸೇರಿದಂತೆ ನೆರೆಯ ಕೇರಳ, ತಮಿಳುನಾಡು, ಉತ್ತರಾಖಂಡ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಹಾಗೂ ಕಾಶ್ಮೀರ ಒಳಗೊಂಡಂತೆ ಅನೇಕ ಭಾಗಗಳಲ್ಲಿ6 ದಿನ ಭಾರೀ ಮಳೆಯ ಸಂಭವವಿದೆ.

India Rain Forecast Heavy Rain Expection in These State Next 1 Week

ಸೋಮವಾರ ಆಗಸ್ಟ್ 12ರಂದು ಪಶ್ಚಿಮ ಹಿಮಾಲಯದ ಹಲವೆಡೆ, ದೇಶದ ವಾಯುವ್ಯ ಭಾಗದ ಬಯಲು ಪ್ರದೇಶಗಳ ವ್ಯಾಪ್ತಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಬಹುದು. ನಾಳೆಯಿಂದ ಇದೇ ಭಾಗದಲ್ಲಿ ಮಳೆ ಕ್ಷೀಣಿಸಲಿದೆ. ಇನ್ನು ಒಂದು ವಾರ ದೇಶದ ಈಶಾನ್ಯ ಭಾಗದ ರಾಜ್ಯಗಳು ಹಾಗೂ ಪೂರ್ವ ಭಾಗದ ರಾಜ್ಯಗಳು ವಿಪರೀತ ಮಳೆ ಕಾಣಲಿವೆ. ಇಲ್ಲೆಲ್ಲ ದಿನವಿಡಿ ಮಳೆರಾಯ ಜೋರು ಅಬ್ಬರ ಕಂಡು ಬರಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಭಾರೀ ಮಳೆಯ ರಾಜ್ಯಗಳನ್ನು ನೋಡುವುದಾದರೆ, ಪೂರ್ವ ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜ್ಯದಲ್ಲಿ ಮುಂದಿನ ಐದು ದಿನ (ಆಗಸ್ಟ್ 17) ಭಾರೀ ಮಳೆ ಆಗಲಿದೆ. ಈಗಾಗಲೇ ಈ ಭಾಗದಲ್ಲಿ ವ್ಯಾಪಕ ಮಳೆಯ ವಾತಾವರಣ ಸೃಷ್ಟಿಯಾಗಿದೆ.

India Rain Forecast Heavy Rain Expection in These State Next 1 Week

ಇನ್ನು ಮುಂದಿನ 48 ಗಂಟೆಗಳಲ್ಲಿ ಲದಾಕ್, ಜಮ್ಮು-ಕಾಶ್ಮೀರ, ಬಾಲ್ಟಿಸ್ತಾನ್-ಮುಜಫರಾಬಾದ್‌ಗಳಲ್ಲಿ ವ್ಯಾಪಕ ಮಳೆ ನಿರೀಕ್ಷೆ ಇದೆ. ಆಗಸ್ಟ್ 15 ರವರೆಗೂ ಹರಿಯಾಣ, ಚಂಡೀಗಢ ಅತ್ಯಧಿಕ ಮಳೆ ಆಗಲಿದೆ. ಉಳಿದಂತೆ ದೇಶದ ಪಶ್ಚಿಮ ಭಾಗದ ರಾಜ್ಯಗಳು ಗುಜರಾತ್, ಮಹಾರಾಷ್ಟ್ರದಲ್ಲಿ ಆಗಾಗ ಸಾಧಾರಣದಿಂದ ಹಗುರ ಮಳೆ ನಿರೀಕ್ಷಿಸಬಹುದಾಗಿದೆ ಎಂಬ ಮುನ್ಸೂಚನೆ ಇದೆ.

ಆಗಸ್ಟ್ 17ರವರೆಗೆ ದೇಶದ ಮೇಘಾಲಯ ರಾಜ್ಯ, ಬಿಹಾರ, ಅರುಣಾಚಲ ಪ್ರದೇಶ, ಅಸ್ಸಾಂ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗುವ ಲಕ್ಷಣಗಳು ಇವೆ. ಈ ಭಾಗದಲ್ಲಿ ಕೆಲವು ದಿನಗಳಲ್ಲಿ ಸುರಿಯುತ್ತಿರುವ ಮಳೆ ಮತ್ತೆ ಮುಂದುವರಿಯಲಿದೆ. ಕಣಿವೆ ಪ್ರದೇಶದ ಜನರ ಜೀವನ ಮಳೆಗೆ ಅಸ್ತವ್ಯಸ್ಥವಾಗಿದೆ. ದಕ್ಷಿಣ ಭಾಗದ ರಾಜ್ಯಗಳಲ್ಲಿ ಮಳೆ ಅಷ್ಟಾಗಿ ಇಲ್ಲ ಎಂದು ತಿಳಿದು ಬಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ ಮಳೆ ಆರ್ಭಟ ಜೋರಾಗಿತ್ತು. ಇಂದು ಸೋಮವಾರ ಸಹ ಗುಡುಗು ಸಹಿತ ಮಳೆ ಅಬ್ಬರಿಸಿದೆ. ಪರಿಣಾಮ ರಸ್ತೆಗಳು ಜಲಾವೃತಗೊಂಡಿವೆ. ಕಳೆದ ಎರಡು ದಿನದಿಂದ ಮೋಡ ಕವಿದ ವಾತಾವರಣ ಕಂಡು ಬಂದಿದೆ. ನಾಳೆ ಮಂಗಳವಾರ ಮತ್ತು ಬುಧವಾರ ಇನ್ನಷ್ಟು ಮಳೆ ಸಾಧ್ಯತೆ ಇದೆ. ಇಲ್ಲಿ ಮುಂದಿನ ಆಗಸ್ಟ್ 18ರವರೆಗೆ ಜೋರು ಮಳೆ ಅಬ್ಬರಿಸಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+