Indian Railway: ರೈಲ್ವೆ ದರ ಇಳಿಕೆ-ಅಪಘಾತ ತಡೆಗೆ ಹಳೆ ವಿಧಾನ ಬಳಕೆಗೆ ಒತ್ತಾಯ
ಕೋಲ್ಕತ್ತಾ, ನವೆಂಬರ್ 19: ಕೆಲವು ತಿಂಗಳ ಹಿಂದೆ ಕೆಲವು ಬೃಹತ್ ರೈಲು ದುರಂತಗಳು ಜರುಗಿದ್ದು, ನೂರಾರು ಜೀವಗಳಿಗೆ ಹಾನಿ ಆಗಿವೆ. ಕೆಲವೆಡೆ ರೈಲುಗಳಲ್ಲ ಬೆಂಕಿ ಕಾಣಿಸಿಕೊಂಡ ಘಟನೆಗಳು ನಡೆದಿವೆ. ಇದರ ಬೆನ್ನಲ್ಲೆ ರೈಲ್ವೆ ಪ್ರಯಾಣಿಕರ ಸುರಕ್ಷತೆ ಮತ್ತು ಸುರಕ್ಷತೆಗೆ ರೈಲ್ವೆ ಹೆಚ್ಚಿನ ಗಮನ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಹೌದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ದಿದಿ) ಅವರು ರೈಲ್ವೆ ಪ್ರಯಾಣಿಕರ ಕುರಿತು ಧ್ವನಿ ಎತ್ತಿದ್ದಾರೆ. ಈ ಮೂಲಕ ರಕ್ಷಣೆ ನೀಡಬೇಕಾದ ಆದ್ಯತೆಯನ್ನು ರೈಲ್ವೆ ಸಚಿವಾಲಯದ ಗಮನಕ್ಕೆ ತಂದಿದ್ದಾರೆ. ರೈಲ್ವೆ ಪ್ರಯಾಣದ ದರ ಕೆಲವೊಮ್ಮೆ ವಿಮಾನ ಪ್ರಯಾಣ ದರ ಮೀರಿಸುವಂತಿರುತ್ತವೆ ಎಂದು ಅವರು ದೂರಿದ್ದಾರೆ.

ರೈಲ್ವೆ ಪ್ರಯಾಣಿಕರ ಸುರಕ್ಷತೆ ಮತ್ತು ಸುರಕ್ಷತೆಗೆ ರೈಲ್ವೆ ಹೆಚ್ಚಿನ ಗಮನವಹಿಸಬೇಕು. ರೈಲು ಟಿಕೆಟ್‌ಗಳ ಕ್ರಿಯಾತ್ಮಕ ಬೆಲೆಯನ್ನು ಹಿಂಪಡೆಯಬೇಕು ಕೆಲವೊಮ್ಮೆ ರೈಲ್ವೆ ಟಿಕೆಟ್ ದರ ಕೇಳಿದರೆ ಆತಂಕಗೊಳ್ಳುವಷ್ಟರ ಮಟ್ಟಿಗೆ ಏರಿಕೆ ಆಗಿರುತ್ತದೆ ಎಂದು ಅವರು ಆರೋಪಿಸಿದರು.
ವಿಮಾನ ದರಕ್ಕಿಂತಲೂ ರೈಲ್ವೆ ಟಿಕೆಟ್ ಬೆಲೆ ಏರಿಕೆ
ಇತ್ತೀಚಿನ ದಿನಗಳಲ್ಲಿ ರೈಲ್ವೆ ಪ್ರಯಾಣದ ದರಗಳ ತೀವ್ರವಾಗಿ ಏರಿಕೆ ಕಂಡು ಬೇಸರವಾಯಿತು ಮತ್ತು ಸುವಿಧಾ ರೈಲುಗಳಲ್ಲಿಯೂ ಸಹ ಕೆಲವೊಮ್ಮೆ ವಿಮಾನ ದರಗಳಿಗಿಂತ ಹೆಚ್ಚಿನ ದರಗಳು ಕಂಡು ಬಂದಿವೆ. ಹೀಗಾದರೆ ತುರ್ತು ಸಂದರ್ಭಗಳಲ್ಲಿ ಸಾಮಾನ್ಯ ಜನರು ಎಲ್ಲಿಗೆ ಹೋಗುತ್ತಾರೆ ಎಂದು ಅವರು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅತೀ ಕಡಿಮೆ ಬೆಲೆಯ ಪ್ರಯಾಣ ಎಂಬ ಖ್ಯಾತಿಯಲ್ಲಿದ್ದ ರೈಲ್ವೆ ಪ್ರಯಾಣವೇ ದುಬಾರಿ ಆಗಿದೆ. ಹೀಗಾಗಿ ಶೀಘ್ರವೇ ಶುಲ್ಕ ಏರಿಕೆಗೆ ಕಡಿವಾಣ ಹಾಕಬೇಕು, ಸಾಧ್ಯವಾದಷ್ಟು ಜನರಿಗೆ ಅನುಕೂಲಾಗುವಂತೆ ಇಳಿಕೆ ಮಾಡಬೇಕು. ಜೊತೆಗೆ ರೈಲ್ವೆ ಸುರಕ್ಷತೆ ಮತ್ತು ಭದ್ರತಾ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಹಳೆಯ ವಿಧಾನ ಬಳಕೆಗೆ ಆಗ್ರಹಿಸಿದ ದಿದಿ
ದೇಶದಲ್ಲಿ ಹೆಚ್ಚುತ್ತಿರುವ ರೈಲ್ವೇ ಅಪಘಾತಗಳ ಸಂಖ್ಯೆಯ ಕುರಿತು ಪ್ರಸ್ತಾಪಿಸಿದ ದಿದಿ, ನಾನು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ಪರಿಚಯಿಸಿದ ಅಪಘಾತದ ವಿರುದ್ಧದ ಕ್ರಮಗಳನ್ನು ಇಂದಿನ ದಿನಮಾನಗಳಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಏಕೆ ಬಳಕೆ ಆಗುತ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿದರು.
ನಮ್ಮ ಅವಧಿಯಲ್ಲಿ ರೈಲು ಅಪಘಾತವಾಗದಂತೆ ತಡೆಯಲಾಗಿತ್ತು. ಸದ್ಯ ಹೆಚ್ಚುತ್ತಿರುವ ರೈಲು ಅಪಘಾತಗಳನ್ನು ತಪ್ಪಿಸಲು ಹಳೆಯ ವಿಧಾನಗಳನ್ನು ಏಕೆ ಬಳಸದೇ ಜನ ವಿರೋಧಿ ಸರ್ಕಾರವು ಅಧಿಕ ಶುಲ್ಕ ಹೇರಿಕೆ ಆಡಳಿತವನ್ನು ಮುಂದುವರೆಸಿದೆ ಎಂದು ಅವರು ವಾಗ್ದಾಳಿ ನಡೆಸಿದರು.












Click it and Unblock the Notifications