ಇಸ್ರೋದಿಂದ ಏಕಕಾಲಕ್ಕೆ 8 ಉಪಗ್ರಹ ಉಡಾವಣೆ
ಶ್ರೀಹರಿಕೋಟಾ, ಸೆ. 26: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರದಂದು ಮತ್ತೊಂದು ವಿಕ್ರಮ ಸಾಧಿಸಿದೆ. ಏಕಕಾಲಕ್ಕೆ 8 ಉಪಗ್ರಹಗಳನ್ನು ಪಿಎಸ್ ಎಲ್ ವಿ ರಾಕೆಟ್ ಮೂಲಕ ಉಡಾವಣೆ ಮಾಡಲಾಗಿದೆ. 8 ಉಪಗ್ರಹಗಳ ಪೈಕಿ ಭಾರತದ ಮೂರು ಉಪಗ್ರಹ ಹಾಗೂ ವಿದೇಶದ ಐದು ಉಪಗ್ರಹಗಳಿವೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿ ಸೋಮವಾರ ಬೆಳಗ್ಗೆ 9.12ಕ್ಕೆ ಆರಂಭವಾದ ಉಡಾವಣಾ ಕಾರ್ಯ ಸಫಲವಾಗಿದೆ ಎಂದು ಇಸ್ರೋ ಘೋಷಿಸಿದೆ.

8 ಉಪಗ್ರಹಗಳನ್ನು ಹೊತ್ತ ವಾಹಕ ಪಿಎಸ್ಎಲ್ವಿ ಸಿ- 35 ರಾಕೆಟ್ ನಿಗದಿತ ಕಕ್ಷೆಗೆ ಉಪಗ್ರಹಗಳನ್ನು ಸೇರಿಸಿದೆ.
#WATCH ISRO successfully launches PSLV'S longest flight with SCATSAT-1 & other 7 satellites on board pic.twitter.com/8Kp1eazSr2
— ANI (@ANI_news) September 26, 2016
ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಮೆಚ್ಚಿ ಪ್ರಧಾನಿ ಮೋದಿ ಅವರು ಅಭಿನಂದನಾ ಪೂರ್ವಕ ಟ್ವೀಟ್ ಮಾಡಿ ಇದು ಹೆಮ್ಮೆಯ ಕ್ಷಣ ಎಂದಿದ್ದಾರೆ.












Click it and Unblock the Notifications