ಮುಂದಿನ ವರ್ಷ 5 ಬಿಲಿಯನ್ ಲಸಿಕೆ ಡೋಸ್‌ಗಳನ್ನು ಉತ್ಪಾದಿಸಲು ಚಿಂತನೆ: ಕೇಂದ್ರ ಸಚಿವ
ನವದೆಹಲಿ, ಡಿಸೆಂಬರ್ 13: "ಭಾರತವು ಮುಂದಿನ ವರ್ಷ 5 ಬಿಲಿಯನ್ ಡೋಸ್ ಕೋವಿಡ್ ಲಸಿಕೆಗಳನ್ನು ಉತ್ಪಾದಿಸಲು ಯೋಜಿಸಿದೆ. ಈ ಮೂಲಕ ಜಗತ್ತನ್ನು ವಾಸಿಸಲು ಸುರಕ್ಷಿತ ಸ್ಥಳವನ್ನಾಗಿಸಲು ಭಾರತ ಕೊಡುಗೆ ನೀಡುತ್ತಿದೆ," ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸೋಮವಾರ ಹೇಳಿದ್ದಾರೆ.
ವಿಶ್ವದಲ್ಲಿ ಅತೀ ಹೆಚ್ಚು ಕೋವಿಡ್ ಲಸಿಕೆಗಳನ್ನು ಉತ್ಪಾದಿಸುವ ದೇಶ ಭಾರತವಾಗಿದೆ. ಇತರ ದೇಶಗಳಿಗೆ ಕೋವಿಡ್ ಲಸಿಕೆಗಳ ಪೂರೈಕೆಯನ್ನು ಭಾರತವು ಪುನರಾರಂಭಿಸಿದೆ. ಕೊರೊನಾ ವೈರಸ್ ಸೋಂಕು ಒಮ್ಮೆಲೇ ಏರಿಕೆ ಆದ ಸಂದರ್ಭದಲ್ಲಿ ದೇಶದ ಜನರಿಗೆ ಕೋವಿಡ್ ಲಸಿಕೆ ನೀಡುವುದಕ್ಕೆ ಗಮನ ಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ವರ್ಷದ ಏಪ್ರಿಲ್‌ನಲ್ಲಿ ಕೋವಿಡ್ ಲಸಿಕೆಯ ರಫ್ತನ್ನು ಸ್ಥಗಿತ ಮಾಡಿದ್ದವು.
ಸಿಐಐ ಪಾಲುದಾರಿಕೆ ಶೃಂಗಸಭೆ 2021 ರಲ್ಲಿ ಮಾತನಾಡಿದ ಪಾಲುದಾರಿಕೆ ಶೃಂಗಸಭೆ 2021 ರಲ್ಲಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, "ಭಾರತವು ತನ್ನದೇ ಆದ ಜನಸಂಖ್ಯೆಗೆ ಲಸಿಕೆ ಹಾಕುವ ಮತ್ತು ಪ್ರಪಂಚದ ಇತರ ಭಾಗಗಳಿಗೆ ಲಸಿಕೆಗಳನ್ನು ಒದಗಿಸುವ ಉಜ್ವಲ ಉದಾಹರಣೆಗಳಲ್ಲಿ ಒಂದಾಗಿದೆ," ಎಂದಿದ್ದಾರೆ.

"ನಾವು ಈ ಹಿಂದೆ ರಫ್ತು ಮಾಡುತ್ತಿದ್ದೇವೆ, ಬಳಿಕ ಸ್ಥಗಿತ ಮಾಡಲಾಗಿದ್ದ ಕೋವಿಡ್ ಲಸಿಕೆ ರಫ್ತನ್ನು ನಾವು ಮತ್ತೆ ಮುಂದುವರಿಸುತ್ತೇವೆ. ಎಲ್ಲರಿಗೂ ಲಸಿಕೆಗಳಿಗೆ ಕೈಗೆಟುಕುವ ಬೆಲೆಯಲ್ಲಿ ಸಮಾನವಾಗಿ ಲಭಿಸುತ್ತಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಇತರ ದೇಶಗಳು ಅಗತ್ಯವಿರುವಷ್ಟು ಲಸಿಕೆಗಳನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ನಾವು ಪ್ರಪಂಚದ ಎಲ್ಲಾ ದೇಶಗಳಿಗೆ ಭರವಸೆ ನೀಡಿದ್ದೇವೆ," ಎಂದು ಕೂಡಾ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.
ಮುಂದಿನ ವರ್ಷ ಭಾರತವು 5 ಬಿಲಿಯನ್ ಡೋಸ್ ಲಸಿಕೆ
ಮುಂದಿನ ವರ್ಷ ಭಾರತವು 5 ಬಿಲಿಯನ್ ಡೋಸ್ ಲಸಿಕೆಗಳನ್ನು ಉತ್ಪಾದಿಸಲು ಯೋಜಿಸಿದೆ. ನಾವು ಈಗ ಕೊರೊನಾ ವೈರಸ್ ಸೋಂಕಿನ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದೇವೆ. ಜಗತ್ತನ್ನು ವಾಸಿಸಲು ಸುರಕ್ಷಿತ ಸ್ಥಳವನ್ನಾಗಿ ಮಾಡಲು ನಾವು ಕೊಡುಗೆ ನೀಡುತ್ತೇವೆ ಎಂದು ನಾವು ಭಾವಿಸುತ್ತೇವೆ," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.
ವೈದ್ಯಕೀಯ ಸಾಮಗ್ರಿಗಳು ಮತ್ತು ಸಲಕರಣೆಗಳೊಂದಿಗೆ ಸಹಾಯ ಮಾಡಲು ದೇಶವು ಇತರ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ ಪಿಯೂಷ್ ಗೋಯಲ್ ಇದೇ ಸಂದರ್ಭದಲ್ಲಿ ಭಾರತವೂ ಸಹ ಅನೇಕ ರಾಷ್ಟ್ರಗಳಿಂದ ಬೆಂಬಲವನ್ನು ಸ್ವೀಕರಿಸಿದೆ ಎಂದು ಒಪ್ಪಿಕೊಂಡಿದ್ದಾರೆ.
ಭಾರತವು 75 ವರ್ಷಗಳ ಸ್ವಾತಂತ್ರ್ಯದ "ಆಜಾದಿ ಕಾ ಅಮೃತ್ ಮಹೋತ್ಸವ"ವನ್ನು ಆಚರಿಸುತ್ತಿದೆ ಮತ್ತು 2023 ರಲ್ಲಿ G20 ಅಧ್ಯಕ್ಷ ಸ್ಥಾನವನ್ನು ಸಹ ತೆಗೆದುಕೊಳ್ಳಲಿದೆ. ಈ ಎರಡೂ ಪ್ರಮುಖ ಅಂಶಗಳಲ್ಲಿ, ಪಾಲುದಾರಿಕೆಗಳು, ರಾಷ್ಟ್ರಗಳ ನಡುವೆ ಸೌಹಾರ್ದತೆ, ನ್ಯಾಯಯುತ ವ್ಯಾಪಾರ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಉತ್ತೇಜಿಸಲು ನಾವು ಆಶಿಸುತ್ತೇವೆ. ಇಂದು ವಿಶ್ವವು ಭಾರತವನ್ನು ವಿಶ್ವಾಸಾರ್ಹ ಪಾಲುದಾರನಾಗಿ ನೋಡುತ್ತದೆ ಎಂದು ಹೇಳಿದರು.
ಲಸಿಕೆ ಪೂರೈಕೆಯಲ್ಲಿ ಭಾರತ ಟಾಪ್
ಐಎಎನ್‌ಎಸ್ -ಸಿ ವೋಟರ್ (IANS-C-VOTER) ಕೊರೋನಾ ಲಸಿಕೆ (vaccination) ಟ್ರ್ಯಾಕರ್ ಸಂಶೋಧನೆ ನಡೆಸಿದ ಪ್ರಕಾರ ದೇಶದಲ್ಲಿ ಕೊರೊನಾ ವೈರಸ್ ವಿರುದ್ಧ ಲಸಿಕೆಯನ್ನು ಪಡೆದುಕೊಳ್ಳಲು ಜನರು ಅಧಿಕ ಇಚ್ಛೆ ಪಡುತ್ತಿದ್ದಾರೆ. ಅರ್ಹ ಜನಸಂಖ್ಯೆಯ ಶೇಕಡ 98 ಕ್ಕಿಂತ ಹೆಚ್ಚು ಭಾರತೀಯರು ಲಸಿಕೆಗೆ ಹೆಚ್ಚು ಪರವಾಗಿದ್ದಾರೆ ಎಂದು ಈ ಐಎಎನ್‌ಎಸ್ -ಸಿ ವೋಟರ್ (IANS-C-VOTER) ಕೊರೋನಾ ಲಸಿಕೆ (vaccination) ಟ್ರ್ಯಾಕರ್ ಸಂಶೋಧನೆ ಹೇಳಿದೆ.












Click it and Unblock the Notifications