ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಸಿನ್ ಮಲಿಕ್ ಪರ ನಿಂತ ಇಸ್ಲಾಮೀ ರಾಷ್ಟ್ರಗಳಿಗೆ ಭಾರತ ತಿರುಗೇಟು

|
Google Oneindia Kannada News

ನವದೆಹಲಿ, ಮೇ 28: ಉಗ್ರ ಚಟುವಟಿಕೆಗಳಲ್ಲಿ ನಿರತರಾದ ಕಾರಣಕ್ಕೆ ಭಾರತೀಯ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಯಾಸಿನ್ ಮಲಿಕ್ ಪರ ವಹಿಸಿಕೊಂಡ ಇಸ್ಲಾಮಿಕ್ ರಾಷ್ಟ್ರಗಳ ಗುಂಪೊಂದನ್ನು ಭಾರತ ಕಟುವಾಗಿ ಟೀಕಿಸಿದೆ. ಯಾಸಿನ್ ಮಲಿಕ್‌ಗೆ ಶಿಕ್ಷೆ ನೀಡಿದ ಭಾರತೀಯ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವ ಮೂಲಕ ಈ ಸಂಘಟನೆಯು ಭಯೋತ್ಪಾದಕ ಚಟುವಟಿಕೆಗಳಿಗೆ ಸ್ಪಷ್ಟವಾಗಿ ಬೆಂಬಲ ನೀಡಿದೆ ಎಂದು ಭಾರತ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.

ಇಸ್ಲಾಮಿಕ್ ಸಹಕಾರ ಸಂಘಟನೆಯ ಸ್ವತಂತ್ರ ಖಾಯಂ ಮಾನವ ಹಕ್ಕು ಆಯೋಗ (OIC-IPHRC) ಭಾರತೀಯ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುತ್ತಾ ಯಾಸಿನ್ ಮಲಿಕ್‌ಗೆ ಸಹಾನುಭೂತಿ ವ್ಯಕ್ತಪಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ, "ಯಾಸಿನ್ ಮಲಿಕ್‌ನ ಉಗ್ರ ಚಟುವಟಿಕೆಗಳ ದಾಖಲೆಗಳನ್ನು ಅಮೂಲಾಗ್ರವಾಗಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಕೊಡಲಾಗಿತ್ತು. ಇಸ್ಲಾಮೀ ರಾಷ್ಟ್ರಗಳ ಈ ಮಾನವ ಹಕ್ಕು ಆಯೋಗದ ಅಭಿಪ್ರಾಯ ಭಾರತಕ್ಕೆ ಅಸಮ್ಮತ" ಎಂದು ಹೇಳಿದ್ದಾರೆ.

"ಯಾಸಿನ್ ಮಲಿಕ್ ಪ್ರಕರಣದಲ್ಲಿ ನೀಡಲಾದ ನ್ಯಾಯತೀರ್ಪಿನ ವಿಚಾರದಲ್ಲಿ ಒಐಸಿ-ಐಪಿಎಚ್‌ಆರ್‌ಸಿ ಮಾಡಿರುವ ಟೀಕೆಯನ್ನು ಭಾರತ ಒಪ್ಪುವುದಿಲ್ಲ. ಇಂಥ ಪ್ರತಿಕ್ರಿಯೆ ಮೂಲಕ ಈ ಸಂಸ್ಥೆಯು ಯಾಸಿನ್ ಮಲಿಕ್‌ನ ಉಗ್ರ ಚಟುವಟಿಕೆಗಳಿಗೆ ಸ್ಪಷ್ಟ ಬೆಂಬಲ ವ್ಯಕ್ತಪಡಿಸಿದೆ. ಭಯೋತ್ಪಾದನೆಯನ್ನು ಒಂದಿಷ್ಟೂ ಸಹಿಸಬಾರದು ಎಂದು ಇಡೀ ವಿಶ್ವವೇ ಹೇಳುತ್ತಿದೆ. ಹೀಗಿರುವಾಗ ಭಯೋತ್ಪಾದಕ ಚಟುವಟಿಕೆಯನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳಬಾರದು ಎಂದು ಓಐಸಿಗೆ ಒತ್ತಾಯಿಸುತ್ತೇವೆ" ಎಂದು ಅರಿಂದಮ್ ಬಾಗಚಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

India Objects to Islamic Nations Groups Remark On Yasin Malik

ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸಿದ ಪ್ರಕರಣದಲ್ಲಿ ಎನ್‌ಐಎ ಕೋರ್ಟ್ ಮೂರು ದಿನಗಳ ಹಿಂದೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 10 ಲಕ್ಷ ರೂ ದಂಡ ಹಾಕಿದೆ. ಇದೇ ಪ್ರಕರಣದಲ್ಲಿ ವಿವಿಧ ಹತ್ತು ಅಪರಾಧಗಳಿಗೆ ಎರಡು ಜೀವಾವಧಿ ಶಿಕ್ಷೆ ಹಾಗು ಐದು ಸಾವಿರದಿಂದ ಹತ್ತು ಲಕ್ಷ ರು ವರೆಗೆ ದಂಡ ವಿಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮುಕ್ತಿ ರಂಗ (JKLF- Jammu and Kashmir Liberation Front) ಎಂಬ ಪ್ರತ್ಯೇಕತಾವಾದಿ ಸಂಘಟನೆಯ ಮುಖ್ಯಸ್ಥರಾದ ಯಾಸಿನ್ ಮಲಿಕ್ ಅವರ ಎರಡು ಜೀವಾವಧಿ ಶಿಕ್ಷೆ ಏಕಕಾಲದಲ್ಲಿ ಜಾರಿಗೆ ಬರಲಿವೆ. ಅಂದರೆ ಅವರು 15 ವರ್ಷ ಜೈಲುಶಿಕ್ಷೆ ಅನುಭವಿಸಲಿದ್ದಾರೆ.

India Objects to Islamic Nations Groups Remark On Yasin Malik

ಅತ್ತ, ಯಾಸಿನ್ ಮಲಿಕ್ ತಮ್ಮ ಮೇಲಿನ ಆರೋಪಗಳನ್ನು ಸುಳ್ಳು ಎಂದು ಕೋರ್ಟ್ ಮುಂದೆ ಹೇಳಿಲ್ಲ. ತಮ್ಮ ಕೃತ್ಯಗಳನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡ ಅವರು ಕೋರ್ಟ್ ಏನೇ ತೀರ್ಪು ಕೊಟ್ಟರೂ ಒಪ್ಪಿಕೊಳ್ಳುತ್ತೇನೆ ಎಂದಿದ್ದರು. ಹಲವು ಹಿಂದೂ ಸಂಘಟನೆಗಳು ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಕೊಟ್ಟ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಡಿಸಿವೆ. ಯಾಸಿನ್‌ಗೆ ಮರಣದಂಡನೆ ಶಿಕ್ಷೆ ವಿಧಿಸಬೇಕಿತ್ತು ಎಂಬುದು ಈ ಸಂಘಟನೆಗಳ ಆಗ್ರಹವಾಗಿದೆ.

(ಒನ್ಇಂಡಿಯಾ ಸುದ್ದಿ)

English summary
India slammed OIC-IPHRC for its criticism of judgment in the terror funding case involving terrorist Yasin Malik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X