ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ಲೈಂಗಿಕ ಅಪರಾಧಿಗಳ ಬಯೋಡೇಟಾ ಸಿಗಲಿದೆ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 20: ಹೆಚ್ಚುತ್ತಿರುವ ಲೈಂಗಿಕ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ, ರಾಷ್ಟ್ರೀಯ ಲೈಂಗಿಕ ಅಪರಾಧಿಗಳ ನೋಂದಣಿಯನ್ನು ಆರಂಭಿಸಿದೆ.

ಈ ಮೂಲಕ ಭಾರತ, ಲೈಂಗಿಕ ಅಪರಾಧಿಗಳ ನೋಂದಣಿಯನ್ನು ಹೊಂದಲಿರುವ ಜಗತ್ತಿನ ಒಂಬತ್ತನೆಯ ದೇಶವೆನಿಸಲಿದೆ.

ಪೊಲೀಸರ ಜತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಅತ್ಯಾಚಾರ ಆರೋಪಿ ಸ್ವಾಮೀಜಿ ಪೊಲೀಸರ ಜತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಅತ್ಯಾಚಾರ ಆರೋಪಿ ಸ್ವಾಮೀಜಿ

ಈ ನೋಂದಣಿಯಲ್ಲಿ ಶಿಕ್ಷೆಗೆ ಒಳಗಾಗಿರುವ ಆಪರಾಧಿಗಳ ಹೆಸರು, ಫೋಟೊ, ನಿವಾಸದ ವಿಳಾಸ, ಬೆರಳಚ್ಚು, ಡಿಎನ್‌ಎ ಮಾದರಿಗಳು, ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳು ಇರುತ್ತವೆ.

ದೇಶದಾದ್ಯಂತ ಜೈಲುಗಳಿಂದ ಪಡೆದುಕೊಂಡ ಮಾಹಿತಿಗಳ ಆಧಾರದಲ್ಲಿ ಮೊದಲ ಬಾರಿಗೆ ಮತ್ತು ಪದೇ ಪದೇ ಅಪರಾಧ ಎಸಗಿದ ವ್ಯಕ್ತಿಗಳ ವಿವರ ಸೇರಿದಂತೆ 4.5 ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಈ ಡೇಟಾಬೇಸ್ ಒಳಗೊಂಡಿರುತ್ತದೆ.

India national registry of sexual offenders

ಲೈಂಗಿಕ ಅಪರಾಧಿಗಳ ನೋಂದಣಿಯನ್ನು ನಿರ್ವಹಿಸುವ ನೋಡೆಲ್ ಸಂಸ್ಥೆಯಾಗಿ ರಾಷ್ಟ್ರೀಯ ಅಪರಾಧಗಳ ದಾಖಲೆ ಘಟಕ ಕಾರ್ಯನಿರ್ವಹಿಸಲಿದೆ.

ಇದು ಕಾನೂನು ಜಾರಿ ಸಂಸ್ಥೆಗಳಿಗೆ ಮತ್ತೆ ಮತ್ತೆ ಅಪರಾಧ ಎಸಗುವವರನ್ನು ಗುರುತಿಸಲು ನೆರವಾಗಲಿದೆ. ಅಲ್ಲದೆ, ಜನರು ಲೈಂಗಿಕ ಅಪರಾಧಗಳಲ್ಲಿ ಭಾಗಿಯಾದವರ ಬಗ್ಗೆ ಎಚ್ಚರಿಕೆಯಿಂದ ಇರಲು ಸಹಾಯ ಮಾಡಲಿದೆ.

ಮುಲಕ್ಕಲ್ ಪೊಲೀಸ್ ವಿಚಾರಣೆ, ಜವಾಬ್ದಾರಿಯಿಂದ ತಾತ್ಕಾಲಿಕ ಬಿಡುಗಡೆಮುಲಕ್ಕಲ್ ಪೊಲೀಸ್ ವಿಚಾರಣೆ, ಜವಾಬ್ದಾರಿಯಿಂದ ತಾತ್ಕಾಲಿಕ ಬಿಡುಗಡೆ

ಕೇಂದ್ರವು ಲೈಂಗಿಕ ಅಪರಾಧಿಗಳ ನೋಂದಣಿಯನ್ನು ನಿಭಾಯಿಸದ ಕಾರಣ ಅಪರಾಧಿಗಳು ಬಿಡುಗಡೆಯಾದ ಬಳಿಕವೂ ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಮುಂದುವರಿದ ಅನೇಕ ನಿದರ್ಶನಗಳಿವೆ.

India national registry of sexual offenders

ಇದಕ್ಕೆ ದೆಹಲಿ ಮೂಲದ ದರ್ಜಿ ಸುನಿಲ್ ರಸ್ತೋಗಿ ಸೂಕ್ತ ಉದಾಹರಣೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದರೂ ಸುಮಾರೂ 100 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಆತನ ಮೇಲಿದೆ. ಇಂತಹ ಪ್ರಕರಣಗಳಲ್ಲಿ ನೋಂದಣಿ ಮಾಹಿತಿ ನೆರವಾಗಲಿದೆ.

ಅಮೆರಿಕದಲ್ಲಿ ಲೈಂಗಿಕ ಅಪರಾಧಿಗಳ ನೋಂದಣಿಯು ಸಾರ್ವಜನಿಕರಿಗೂ ಲಭ್ಯವಿದೆ. ಭಾರತ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೊ ದೇಶಗಳಲ್ಲಿ ಕಾನೂನು ಜಾರಿ ಸಂಸ್ಥೆಗಳಿಗೆ ಮಾತ್ರ ಇದು ಲಭ್ಯವಿದೆ.

'ಕಡಿಮೆ ಅಪಾಯಕಾರಿ' ಎಂದು ನಮೂದಾಗಿರುವ ಪ್ರಕರಣಗಳ ವ್ಯಕ್ತಿಗಳ ಮಾಹಿತಿಯನ್ನು 15 ವರ್ಷದವರೆಗೆ ಇದರಲ್ಲಿ ಸಂಗ್ರಹಿಸಿ ಇರಿಸಲಾಗುವುದು.

ಸಾವಂತವಾಡದಲ್ಲಿ ಹೋಂ ನರ್ಸ್ ಮೇಲೆ ವೃದ್ಧನಿಂದ ಅತ್ಯಾಚಾರ ಸಾವಂತವಾಡದಲ್ಲಿ ಹೋಂ ನರ್ಸ್ ಮೇಲೆ ವೃದ್ಧನಿಂದ ಅತ್ಯಾಚಾರ

'ಬಹುತೇಕ ಅಪಾಯಕಾರಿ' ಎಂಬಂತಹ ವ್ಯಕ್ತಿಗಳ ಮಾಹಿತಿಯನ್ನು 25 ವರ್ಷ ಹಾಗೂ ನಿರಂತರ ಅಪರಾಧ ಎಸಗುವವರು, ಹಿಂಸಾತ್ಮಕ ಅಪರಾಧಗಳಲ್ಲಿ ತೊಡಗುವವರು, ಸಾಮೂಹಿಕ ಅತ್ಯಾಚಾರ ಹಾಗೂ ಬಂಧನದಲ್ಲಿರಿಸಿಕೊಂಡು ಅತ್ಯಾಚಾರ ಎಸಗುವವರ ಮಾಹಿತಿಯನ್ನು ಅವರ ಜೀವಿತಾವಧಿಯವರೆಗೂ ಸಂಗ್ರಹಿಸಿ ಇರಿಸಲಾಗುವುದು.

ಈ ನೋಂದಣಿಯಲ್ಲಿ ಬಂಧಿತರು ಮತ್ತು ದೋಷಾರೋಪಪಟ್ಟಿ ದಾಖಲಾದವರ ಮಾಹತಿಯನ್ನೂ ಒಳಗೊಂಡಿರಲಿದೆ. ಆದರೆ, ಇದು ಎಲ್ಲ ಅಧಿಕಾರಿಗಳೂ ಲಭ್ಯವಾಗುವುದಿಲ್ಲ. ಬಾಲಾಪರಾಧಿಗಳ ಮಾಹಿತಿಯನ್ನು ಸಹ ಮುಂದಿನ ದಿನಗಳಲ್ಲಿ ಅಳವಡಿಸುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರದ ಕತುವಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಸೇರಿದಂತೆ ದೇಶದಾದ್ಯಂತ ನಡೆಯುತ್ತಿರುವ ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿರುದ್ಧ ಏಪ್ರಿಲ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅದರ ಬಳಿಕ ಕೇಂದ್ರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

English summary
India is set to have its National registry of sexual offenders. It will be available to law enforcement agencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X