India Monsoon: ಹಿಮಾಚಲ ಹಿಮಪ್ರವಾಹ, 5 ಸಾವು- ಉತ್ತರಖಂಡದಲ್ಲಿ ಭೂಕುಸಿತಗಳ ಭೀತಿ!
ಹಿಮಾಚಲ ಪ್ರದೇಶದ ಸೋಲಾನ್‌ನಲ್ಲಿ ಹಿಮಪ್ರವಾಹದಿಂದಾಗಿ ಐದು ಜನರು ಸಾವನ್ನಪ್ಪಿದ್ದು ಮೂವರು ನಾಪತ್ತೆಯಾದ ಘಟನೆ ಇಂದು ನಡೆದಿದೆ. ಈ ಘಟನೆ ಜೇಡಾನ್ ವಿಲೇಜ್‌ನಲ್ಲಿ ಸಂಭವಿಸಿದೆ. ಭಾರಿ ಹಿಮಪ್ರವಾಹಕ್ಕೆ ಎರಡು ಮನೆಗಳು ಹಾಗೂ ಜಾನುವಾರಗಳು ಕೊಚ್ಚಿಕೊಂಡು ಹೋಗಿವೆ. ಈ ಸಮಯದಲ್ಲಿ ಐದು ಜನರನ್ನು ರಕ್ಷಿಸಲಾಗಿದೆ.
ಕಳೆದ 24 ಗಂಟೆಗಳಿಂದ ವರುಣನ ಅರ್ಭಟ ಹಿಮಾಚಲ ಪ್ರದೇಶ ಮತ್ತು ನೆರೆಯ ಉತ್ತರಾಖಂಡದಲ್ಲಿ ಮುಂದುವರೆದಿದೆ. ಇದರಿಂದ ಭೂಕುಸಿತ, ಭೂಸವೆತದ ಭೀತಿ ಹೆಚ್ಚಾಗಿದೆ. ಹೀಗಾಗಿ ಅನೇಕ ಪ್ರಮುಖ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಮಾಂಡಿಯಲ್ಲಿ ಗರಿಷ್ಠ 236, ಶಿಮ್ಲಾದಲ್ಲಿ 59 ಮತ್ತು ಬಿಲಾಸ್ಪೂರ್ ಜಿಲ್ಲೆಯಲ್ಲಿ 40 ಸೇರಿದಂತೆ ಒಟ್ಟು 621 ರಸ್ತೆಗಳು ಪ್ರಸ್ತುತ ವಾಹನ ಸಂಚಾರಕ್ಕಾಗಿ ಮುಚ್ಚಲ್ಪಟ್ಟಿವೆ.

ಹಿಮಾಚಲ ಪ್ರದೇಶ ಶಾಲಾ-ಕಾಲೇಜುಗಳಿಗೆ ರಜೆ
ಜೊತೆಗೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ನಿರಂತರ ಮಳೆಯಿಂದಾಗಿ ರಾಜ್ಯದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ಆಗಸ್ಟ್ 14 ರವರೆಗೆ (ಸೋಮವಾರ) ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಘೋಷಿಸಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಶಾಲಾ-ಕಾಲೇಜುಗಳನ್ನು ತೆರೆಯಲು ಸೂಚಿಸಲಾಗಿದೆ. ಶಿಮ್ಲಾ ಮತ್ತು ಚಂಡೀಗಡದ ಸಂಪರ್ಕಿಸುವ ಶಿಮ್ಲಾ-ಕಲ್ಕಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತದ ಭೀತಿ ಹೆಚ್ಚಾಗಿದೆ.
ಇನ್ನೂ ಅಧಿಕ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ 48 ಗಂಟೆಗಳ ಕಾಲ ನಿರಂತರ ಮಳೆಯಿಂದಾಗಿ ಹಲವೆಡೆ ನದಿ ನೀರು ಉಕ್ಕಿ ಹರಿಯುತ್ತಿದೆ. ನದಿ ಪ್ರವಾಹಕ್ಕೆ ಹಮೀರ್‌ಪುರ ಜಿಲ್ಲೆಯ ಎಲ್ಲಾ ಭಾಗಗಳು ಹಾನಿಯನ್ನು ಅನುಭವಿಸುತ್ತಿವೆ. ಬೀಸ್ ನದಿ ಮತ್ತು ಅದರ ಉಪನದಿಗಳು ಸೇರಿದಂತೆ ಮಾನ್ ಮತ್ತು ಕುನಾ ನಾಲೆಗಳು ಇರುವ ಪ್ರದೇಶಗಳು ಹೆಚ್ಚು ನಾಶಕ್ಕೆ ಗುರಿಯಾಗಿವೆ.
ಮಳೆ ಮತ್ತು ಭೂಕುಸಿತದಿಂದಾಗಿ ವ್ಯಾಪಕ ಹಾನಿ
ಮಳೆ ಮತ್ತು ಭೂಕುಸಿತದಿಂದಾಗಿ ಹಮೀರ್‌ಪುರದ ಎಲ್ಲಾ ಭಾಗಗಳಲ್ಲಿ ಬೆಳೆಗಳು, ಫಲವತ್ತಾದ ಭೂಮಿ, ಖಾಸಗಿ ಕಟ್ಟಡಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ. ಜಿಲ್ಲಾ ಆಡಳಿತವು ಜನರಿಗೆ ಹೊರಹೋಗದಂತೆ, ಜೊತೆಗೆ ನದಿ ನಾಲೆಗಳ ಬಳಿ ಹೋಗುವುದನ್ನು ತಪ್ಪಿಸಲು ಎಚ್ಚರಿಸಿದೆ.

ಜೂನ್ 24 ರಂದು ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಪ್ರಾರಂಭವಾಗಿದೆ. ಅಂದಿನಿಮದ ಬೆಟ್ಟದ ರಾಜ್ಯ ಇಲ್ಲಿಯವರೆಗೆ 7,020 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ. ಮಳೆ ಸಂಬಂಧಿತ ಘಟನೆಗಳು ಮತ್ತು ರಸ್ತೆ ಅಪಘಾತಗಳಲ್ಲಿ 257 ಜನರು ಸಾವನ್ನಪ್ಪಿದ್ದಾರೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ಈ ನಡುವೆ ಹವಾಮಾನ ಕಚೇರಿ ಆಗಸ್ಟ್ 14 ರಿಂದ 17 ರವರೆಗೆ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು ಮಿಂಚಿನ ಸಮೇತ ಭಾರಿ ಮಳೆಯಾಗುವ ಎಚ್ಚರಿಕೆ ನೀಡಿದೆ.
ಉತ್ತರಾಖಂಡದಲ್ಲಿ ವರುಣಾರ್ಭಟ
ಉತ್ತರಾಖಂಡದಲ್ಲಿ ನಿರಂತರ ಮಳೆಯಿಂದ ಪ್ರಚೋದಿಸಲ್ಪಟ್ಟ ಭೂಕುಸಿತಗಳು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಿವೆ. ಇದು ಜನರ ಸಂಚಾರದ ಮೇಲೆ ಭಾರೀ ಪರಿಣಾಮ ಬೀರಿದೆ.
ಟೆಹ್ರಿಯ ಕುಂಜಾಪುರಿ ಬಾಗಾರ್‌ಹಾರ್ ಬಳಿ ಭೂಕುಸಿತದಿಂದಾಗಿ ರಿಶಿಕೇಶ್-ಚಂಬಾ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಆದರೆ ಸಖ್ನಿಧಾರ್‌ನಲ್ಲಿರುವ ರಿಶಿಕೇಶ್-ದೆವ್‌ಪ್ರಯಾಗ್-ಸ್ರಿನಗರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಧಿಕ ವಾಹನಗಳು ಸಂಚಾರ ಸಾಧ್ಯವಾಗದೆ ಸಾಲುಗಟ್ಟಿ ನಿಂತಿವೆ.
ಭಾನುವಾರ ಸಂಜೆ ಚಮೋಲಿ ಜಿಲ್ಲೆಯಲ್ಲಿ ನಿರಂತರ ಮಳೆಯು ತಾರಾಲಿ ಮತ್ತು ನಂದಾ ನಗರ ಘತ್ ಪ್ರದೇಶಗಳಲ್ಲಿ ಅಧಿಕ ಹಾನಿಯನ್ನುಂಟುಮಾಡಿದೆ. ಚಮೋಲಿಯ ಪಿಂಡಾರ್ ಮತ್ತು ನಂದಕಿನಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳನ್ನು ಅಪಾಯಕ್ಕೆ ದೂಡಿದೆ. ಆದರೆ ಈವರೆಗೂ ಯಾವುದೇ ಮಾನವ ಸಾವುನೋವುಗಳು ವರದಿಯಾಗಿಲ್ಲವಾದರೂ, ವ್ಯಾಪಕವಾಗಿ ಆಸ್ತಿ ಹಾನಿ ಸಂಭವಿಸಿದೆ.
ನಿರಂತರ ಮಳೆಯಿಂದಾಗಿ ನಂದಾ ನಗರ ಘತ್ ಪ್ರದೇಶದಲ್ಲಿನ ಮಂಡಕಿನಿ ನದಿಯ ನೀರಿನ ಮಟ್ಟವನ್ನು ಹೆಚ್ಚಿಸಿದೆ. ಪರಿಣಾಮವಾಗಿ ಸ್ಥಳೀಯ ನಿವಾಸಿಗಳಿಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಹಾಗೂ ಅವರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಕೋಟ್ವಾರ್ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹೋ ನದಿ ಮತ್ತು ಮಲನ್ ಸುಖ್ರೌ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಈ ನದಿಗಳ ದಡದಲ್ಲಿ ಇರುವ ಹಲವಾರು ಮನೆಗಳಿಗೆ ಇದರಿಂದಾಗಿ ಅಪಾರ ಹಾನಿಯಾಗಿದೆ. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷತೆಗಾಗಿ ಸ್ಥಳಾಂತರಿಸಲು ಪೊಲೀಸ್ ಪಡೆಗಳು ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್ಎಫ್) ತಂಡವನ್ನು ನಿಯೋಜಿಸಲಾಗಿದೆ.
ಡೆಹ್ರಾಡೂನ್ ರೆಡ್ ಅಲರ್ಟ್
ಡೆಹ್ರಾಡೂನ್ ಮತ್ತು ನೈನಿತಾಲ್ ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಗುಡ್ಡಗಾಡು ರಾಜ್ಯ ನಿರಂತರ ಮಾನ್ಸೂನ್ ಮಳೆಯಿಂದ ತತ್ತರಿಸಿ ಹೋಗಿದೆ. ಇದರಿಂದಾಗಿ 60 ಜನರು ಸಾವನ್ನಪ್ಪಿದ್ದಾರೆ ಮತ್ತು 17 ಮಂದಿ ಕಾಣೆಯಾಗಿದ್ದಾರೆ ಮತ್ತು ಸಾಮಾನ್ಯ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.
ತೆಹ್ರಿ, ಡೆಹ್ರಾಡೂನ್, ಪೌರಿ, ಚಂಪಾವತ್, ನೈನಿತಾಲ್ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಹರಿದ್ವಾರ ಜಿಲ್ಲೆಯಲ್ಲೂ ಎಚ್ಚರಿಕೆ ನೀಡಲಾಗಿದೆ.
ಯಾವುದೇ ತುರ್ತು ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ಜಾಗರೂಕರಾಗಿರಲು ಸರ್ಕಾರವು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಗೆ ನಿರ್ದೇಶನ ನೀಡಿದೆ. ಹೀಗಾಗಿ ಡೆಹ್ರಾಡೂನ್ ಮತ್ತು ಚಂಪಾವತ್‌ನ ಅಧಿಕಾರಿಗಳು ಸೋಮವಾರ ಎರಡು ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದಾರೆ.
ಬೇರೆಡೆ ಹವಾಮಾನ
ಆಗಸ್ಟ್ 14 ರಂದು, ದೆಹಲಿ, ಪಂಜಾಬ್, ಚಂಡೀಗಢ, ಹರಿಯಾಣ, ಹಿಮಾಚಲ ಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ.
ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಒಡಿಶಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಆಗಸ್ಟ್ 15, 16 ಮತ್ತು 17 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗಂಗಾನದಿ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ಕೆಲವು ಭಾಗಗಳು ಆಗಸ್ಟ್ 16 ಮತ್ತು ಆಗಸ್ಟ್ 17 ರಂದು ಅಧಿಕ ಮಳೆಯಾಗುವ ಸೂಚನೆ ನೀಡಲಾಗಿದೆ.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?












Click it and Unblock the Notifications