Rain Update 2025: ರೈತರಿಗೆ ಭರ್ಜರಿ ಗುಡ್ ನ್ಯೂಸ್; ಈ ವರ್ಷ ಭಾರತದಲ್ಲಿ ಮಳೆಯೋ ಮಳೆ!
ಬೆಂಗಳೂರು,ಏಪ್ರಿಲ್ 15: ಕರ್ನಾಟಕದಲ್ಲಿ ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ಕೆಲ ಜಿಲ್ಲೆಗಳನ್ನ ಹೊರತು ಪಡಿಸಿದರೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗಿತ್ತು. ಈ ವರ್ಷ ಮುಂಗಾರು ಆಗಮನಕ್ಕೂ ಮುನ್ನವೆ ಕಳೆದೊಂದು ತಿಂಗಳಿನಿಂದ ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಆಗಮನಕ್ಕೂ ಮುನ್ನವೇ ವಾರದಲ್ಲಿ ಕನಿಷ್ಟ ಅಂದರೂ ಎರಡು ಮೂರು ಬಾರಿ ಮಳೆಯಾಗುತ್ತಿದೆ. ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ ಶಾಕಿಂಗ್ ವರದಿಯೊಂದನ್ನ ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಈ ವರ್ಷ ಭಾರತದಲ್ಲಿ ಅತೀ ಹೆಚ್ಚು ಮಳೆಯಾಗಲಿದೆ ಎಂದು ರೈತರಿಗೆ ಶುಭಸುದ್ದಿಯನ್ನ ನೀಡಿದೆ.
ಭಾರತ ಹವಾಮಾನ ಇಲಾಖೆ ಕೊಟ್ಟ ಮಾಹಿತಿ ಪ್ರಕಾರ, ಈ ವರ್ಷ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಈ ವರ್ಷದ ಮಾನ್ಸೂನ್ ಋತುವಿನಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ದೀರ್ಘಾವಧಿಯ ಸರಾಸರಿಯ 105% ಕಾಲೋಚಿತ ಮಳೆಯಾಗುವ ಮುನ್ಸೂಚನೆ ನೀಡಿದೆ.

ಇನ್ನೂ ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳಕ್ಕೆ ಪ್ರವೇಶಿಸಲು ಆರಂಭಿಸುತ್ತದೆ, ಸೆಪ್ಟೆಂಬರ್ ಮಧ್ಯದ ವೇಳೆಗೆ ಹಿಂದೆ ಸರಿಯುತ್ತದೆ. ಅಂದಾಜು ಸರಾಸರಿಗಿಂತ ಹೆಚ್ಚಿನ ಮಳೆಯು ಕೃಷಿ ವಲಯಕ್ಕೆ ಅನುಕೂಲಕರ ವಾತಾವರಣವನ್ನು ಒದಗಿಸಬಹುದು ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ. ಈ ವರ್ಷ ಭರ್ಜರಿ ಮಳೆಯಾಗುವ ಮೂಲಕ ರೈತರ ಖುಷಿಯನ್ನ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಈಗಾಗಲೇ ದೇಶದ ನಾನಾ ಭಾಗಗಳಲ್ಲಿ ವಾರಕ್ಕೆ 2-3 ಬಾರಿ ಮಳೆಯಾಗುತ್ತಿದೆ. ಈ ಬಾರಿ ಪ್ರತಿ ವರ್ಷಕ್ಕಿಂತ ಮೊದಲೇ ಮಳೆಗಾಲ ಶುರುವಾಗುವ ನಿರೀಕ್ಷೆಯಿದೆ.
ಭಾರತ ಹವಾಮಾನ ಇಲಾಖೆ ಪ್ರಕಾರ, ಈ ವರ್ಷದ ಮುನ್ಸೂಚನೆಯು ಕೆಲವು ಪ್ರದೇಶಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಅನುಕೂಲಕರ ಮಳೆಯ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸೂಚಿಸಿದೆ. ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಈ ವರ್ಷ ಜೂನ್ ತಿಂಗಳು ಶುರುವಾಗುತ್ತಿದ್ದಂತೆ ಭಾರತದಲ್ಲಿ ಮಾನ್ಸೂನ್ ಆರಂಭವಾಗುವ ಲಕ್ಷಣಗಳು ಹೆಚ್ಚಾಗಿವೆ. 4 ತಿಂಗಳ ಮಾನ್ಸೂನ್ ಋತುವಿನಲ್ಲಿ ಲಡಾಖ್, ಈಶಾನ್ಯ ಭಾರತ ಮತ್ತು ತಮಿಳುನಾಡಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ದೇಶದ ಹಲವು ಭಾಗಗಳು ಈಗಾಗಲೇ ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದೆ. ಈ ಮಧ್ಯೆ ಇದೀಗ ಹವಾಮಾನ ಇಲಾಖೆ ಮಹತ್ವ ಮಾಹಿತಿಯನ್ನ ಹೊರಡಿಸಿದೆ. ಈ ವರ್ಷದ ಮಳೆಯ ಪ್ರಮಾಣವು ದೀರ್ಘಾವಧಿಯ ಸರಾಸರಿ 87 ಸೆಂ.ಮೀ.ನಷ್ಟು ಶೇ. 105 ರಷ್ಟು ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಲಡಾಖ್, ಬಿಹಾರ, ತಮಿಳುನಾಡು ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳನ್ನು ಹೊರತುಪಡಿಸಿ, ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ. ಎಂ. ರವಿಚಂದ್ರನ್ ಮಂಗಳವಾರ ಹೇಳಿದ್ದಾರೆ.
ಈ ವರ್ಷ ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೆ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ದೀರ್ಘಾವಧಿಯ ಸರಾಸರಿ 87 ಸೆಂ.ಮೀ.ನಷ್ಟು ಸಂಚಿತ ಮಳೆಯಾಗುವ ಅಂದಾಜು ಮಾಡಲಾಗಿದೆ. ಎಂದು ಭಾರತ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಸಾಮಾನ್ಯವಾಗಿ ದಕ್ಷಿಣ-ಪಶ್ಚಿಮ ಮಾನ್ಸೂನ್‌ನಲ್ಲಿ ಕಡಿಮೆ ಮಳೆಯಾಗುತ್ತದೆ ಎಂದು ತಿಳಿದು ಬಂದಿದೆ.












Click it and Unblock the Notifications