ಭಾರತದ ಟಾಪ್ 10 ಮಾವು ಉತ್ಪಾದಿಸುವ ರಾಜ್ಯಗಳು ಯಾವುವು, ಇಲ್ಲಿದೆ ವಿವರ
ಭಾರತವು ಮಾವಿನ ಹಣ್ಣಿನ ಉತ್ಪಾದನೆಯಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ದೇಶದ ಒಟ್ಟು ಮಾವಿನ ಉತ್ಪಾದನೆಯಲ್ಲಿ ಕೇವಲ ಎರಡು ರಾಜ್ಯಗಳಿಂದಲೇ ಸೇರಿ ಸುಮಾರು 50% ಪಾಲು ಹೊಂದಿರುವುದು ಗಮನಾರ್ಹ ಸಂಗತಿಯಾಗಿದೆ. ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶ ಎಂದು ಹೇಳಲಾಗುತ್ತದೆ.
ಭಾರತದ ಟಾಪ್ 10 ಮಾವು ಉತ್ಪಾದಕ ರಾಜ್ಯಗಳ ಪಟ್ಟಿ ಇಲ್ಲಿದೆ
1. ಉತ್ತರ ಪ್ರದೇಶ - 26.56%
ಉತ್ತರ ಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಮಾವಿನ ಹಣ್ಣು ಉತ್ಪಾದಿಸುವ ರಾಜ್ಯವಾಗಿದೆ. ಒಟ್ಟು ಉತ್ಪಾದನೆಯಲ್ಲಿ ನಾಲ್ಕನೇ ಭಾಗಕ್ಕಿಂತ ಹೆಚ್ಚು ಪಾಲು ಈ ರಾಜ್ಯ ಹೊಂದಿದೆ.
2. ಆಂಧ್ರ ಪ್ರದೇಶ - 21.55%
ಆಂಧ್ರ ಪ್ರದೇಶವು ಎರಡನೇ ಅತಿ ದೊಡ್ಡ ಉತ್ಪಾದಕ ರಾಜ್ಯವಾಗಿದೆ. ಉತ್ತರ ಪ್ರದೇಶದೊಂದಿಗೆ ಸೇರಿಸಿದರೆ ದೇಶದ ಅರ್ಧಕ್ಕಿಂತ ಹೆಚ್ಚು ಮಾವಿನ ಉತ್ಪಾದನೆ ಈ ಎರಡು ರಾಜ್ಯಗಳು ನೀಡುತ್ತದೆ.

3. ಬಿಹಾರ - 6.85%
ಬಿಹಾರ ರಾಜ್ಯವು ಮಾವಿನ ಹಣ್ಣು ಉತ್ಪಾದಿಸುವಲ್ಲಿ ಮೂರನೇ ಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ಅನುಕೂಲಕರ ಹವಾಮಾನದಿಂದ ಉತ್ತಮ ಉತ್ಪಾದನೆ ಹೆಚ್ಚು ಆಗುತ್ತದೆ.
4. ಕರ್ನಾಟಕ - 6.81%
ಕರ್ನಾಟಕವು ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಮಾವಿನ ಹಣ್ಣು ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅನುಕೂಲಕರ ಹವಾಮಾನ, ಮಣ್ಣಿನ ಗುಣಮಟ್ಟ ಮತ್ತು ರೈತರ ಅನುಭವದಿಂದ ಇಲ್ಲಿ ಉತ್ತಮ ಗುಣಮಟ್ಟದ ಮಾವು ಉತ್ಪಾದನೆ ಸಾಧ್ಯವಾಗಿದೆ. ವಿದೇಶಗಳಿಗೆ ಕೂಡ ಮಾವು ರಪ್ತು ಮಾಡಲಾಗುತ್ತದೆ. ಆದ್ದರಿಂದ ಕರ್ನಾಟಕವು ಭಾರತದ ಮಾವಿನ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನವನ್ನು ಕಾಯ್ದುಕೊಂಡಿದೆ.
5. ಗುಜರಾತ್ - 5.50%
ಗುಜರಾತ್ ರಾಜ್ಯವು ನಿರಂತರವಾಗಿ ಮಾವಿನ ಹಣ್ಣು ಉತ್ಪಾದನೆಯ ಮೂಲಕ ದೇಶದ ಪ್ರಮುಖ ಉತ್ಪಾದಕರಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಅನುಕೂಲಕರ ಹವಾಮಾನ, ಸಮರ್ಪಕ ನೀರಾವರಿ ವ್ಯವಸ್ಥೆ ಮತ್ತು ಆಧುನಿಕ ಕೃಷಿ ತಂತ್ರಜ್ಞಾನಗಳ ಬಳಕೆಯಿಂದ ಇಲ್ಲಿ ಉತ್ತಮ ಗುಣಮಟ್ಟದ ಮಾವು ಬೆಳೆಯಲಾಗುತ್ತದೆ.

6. ಪಶ್ಚಿಮ ಬಂಗಾಳ - 4.67%
ಪೂರ್ವ ಭಾರತದ ಪ್ರಮುಖ ರಾಜ್ಯವಾಗಿರುವ ಪಶ್ಚಿಮ ಬಂಗಾಳವು ಮಾವಿನ ಹಣ್ಣು ಉತ್ಪಾದನೆಯಲ್ಲಿ ಗಮನಾರ್ಹ ಸ್ಥಾನವನ್ನು ಹೊಂದಿದೆ. ಒಟ್ಟು ಉತ್ಪಾದನೆಯಲ್ಲಿ ಗಮನಾರ್ಹ ಪಾಲು ಹೊಂದಿದೆ. ಸಮೃದ್ಧ ಮಣ್ಣಿನ ಕಾರಣದಿಂದ ಉತ್ತಮ ಗುಣಮಟ್ಟದ ಉತ್ಪಾದನೆ ಸಾಧ್ಯವಾಗುತ್ತಿದೆ. ರಾಜ್ಯದ ಮಾವುಗಳು ದೇಶೀಯ ಮಾರುಕಟ್ಟೆಯಷ್ಟೇ ಅಲ್ಲದೆ ಇತರ ರಾಜ್ಯಗಳಿಗೂ ಸರಬರಾಜಾಗುತ್ತವೆ.
7. ತೆಲಂಗಾಣ - 4.55%
ತೆಲಂಗಾಣವು ಮಾವಿನ ಹಣ್ಣು ಉತ್ಪಾದನೆಯಲ್ಲಿ ತನ್ನ ಸ್ಥಾನವನ್ನು ನಿರಂತರವಾಗಿ ಬಲಪಡಿಸುತ್ತಿದೆ. ರಾಜ್ಯದ ಅನುಕೂಲಕರ ಹವಾಮಾನ ಮತ್ತು ಕೃಷಿ ಬೆಂಬಲದಿಂದ ಮಾವು ಬೆಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಉತ್ಪಾದನೆಯಲ್ಲಿ ಹೆಚ್ಚಿಸುತ್ತಿದೆ.
8. ತಮಿಳುನಾಡು - 4.39%
ದಕ್ಷಿಣ ಭಾರತದ ತಮಿಳುನಾಡು ಮಾವಿನ ಹಣ್ಣು ಬೆಳೆಯುವಲ್ಲಿ ಅತ್ಯಂತ ಮಹತ್ವದ ರಾಜ್ಯವಾಗಿದೆ. ಇಲ್ಲಿ ಬಂಗನಪಲ್ಲಿ, ನೀಲಂ, ಆಲ್ಫಾನ್ಸೋ ಸೇರಿದಂತೆ ಹಲವು ಜನಪ್ರಿಯ ಜಾತಿಯ ಮಾವುಗಳು ಉತ್ತಮ ಗುಣಮಟ್ಟದಲ್ಲಿ ಉತ್ಪಾದನೆಯಾಗುತ್ತವೆ. ಅನುಕೂಲಕರ ಹವಾಮಾನ, ನೀರಾವರಿ ಸೌಲಭ್ಯಗಳು ಮತ್ತು ರೈತರ ಅನುಭವದಿಂದ ಉತ್ಪಾದನೆ ಸ್ಥಿರವಾಗಿದ್ದು, ತಮಿಳುನಾಡು ದೇಶೀಯ ಮಾರುಕಟ್ಟೆಯಲ್ಲಿ ತನ್ನ ವಿಶೇಷ ಸ್ಥಾನವನ್ನು ಹೊಂದಿದೆ.
9. ಮಧ್ಯಪ್ರದೇಶ - 4.11%
ಮಧ್ಯ ಭಾರತದ ಅಂದರೆ ಮಧ್ಯಪ್ರದೇಶ ಮಾವಿನ ಹಣ್ಣು ಉತ್ಪಾದನೆಯಲ್ಲಿ ಪ್ರಮುಖ ಕೊಡುಗೆಯನ್ನು ಕೊಡುತ್ತಾ ಬರುತ್ತಿದೆ. ಫಲವತ್ತಾದ ಮಣ್ಣು ಮತ್ತು ಕೃಷಿ ಅಭಿವೃದ್ಧಿ ಯೋಜನೆಗಳ ಬೆಂಬಲದಿಂದ ಉತ್ತಮ ಗುಣಮಟ್ಟದ ಮಾವು ಉತ್ಪಾದನೆ ಸಾಧ್ಯವಾಗುತ್ತಿದೆ.
10. ಒಡಿಶಾ - 4.02%
ಟಾಪ್ 10 ಪಟ್ಟಿಯಲ್ಲಿ ಒಡಿಶಾ ನಿಂತಿದೆ. ಇಲ್ಲಿ ಸ್ಥಳೀಯವಾಗಿ ಬೆಳೆಸುವ ಹಲವಾರು ಮಾವಿನ ಜಾತಿಗಳು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿವೆ. ದೇಶದ ಒಟ್ಟು ಉತ್ಪಾದನೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ.












Click it and Unblock the Notifications