ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ನನ್ನ ಮನೆ, ಇಲ್ಲಿಯೇ ಸಾಯುತ್ತೇನೆ : ಸೋನಿಯಾ

By Prasad
|
Google Oneindia Kannada News

ತಿರುವನಂತಪುರಂ, ಮೇ 09 : "ಭಾರತ ನನ್ನ ಮನೆ. ನಾನು ಇಲ್ಲಿಯೇ ಕೊನೆಯುಸಿರೆಳೆಯುತ್ತೇನೆ. ನನ್ನ ಸಾವಿನ ನಂತರ ನನ್ನ ಬೂದಿ ಇಲ್ಲಿಯೇ ಲೀನವಾಗಲಿದೆ" ಹೀಗೆಂದು ನರೇಂದ್ರ ಮೋದಿ ವಿರುದ್ಧ ಆಕ್ರೋಶಭರಿತ ಭಾವುಕ ಮಾತುಗಳನ್ನಾಡಿದವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ.

ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರ ಇಟಲಿ ಸಂಪರ್ಕಗಳ ವಿರುದ್ಧ ಮೋದಿ ನಡೆಸಿದ್ದ ವಾಗ್ದಾಳಿಗೆ ಪ್ರತಿಯಾಗಿ ಸೋನಿಯಾ, ನನ್ನ ಪ್ರಾಮಾಣಿಕತೆಯ ಮೇಲೆ ಎಷ್ಟೇ ಪ್ರಹಾರ ಮಾಡಿದರೂ ಭಾರತದ ಬಗ್ಗೆ ನನಗಿರುವ ಬದ್ಧತೆ, ಪ್ರೀತಿಯನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲ ಎಂದು ಸೋಮವಾರ ನುಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕೆಂದು ನಿರೀಕ್ಷಿಸುವುದು ಸಾಧ್ಯವೇ ಇಲ್ಲ. ಆದರೆ, ಈ ದೇಶದ ಜನತೆ ನನ್ನ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತಾರೆಂದು ನನಗೆ ನಂಬಿಕೆ ಇದೆ ಎಂದು ಕೇರಳದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರ ಭಾಷಣದಲ್ಲಿ ಅವರು ಹೇಳಿದರು. [ಸೋನಿಯಾರನ್ನು ಬಂಧಿಸಲು ಮೋದಿಗೆ ಧೈರ್ಯವಿಲ್ಲ : ಕೇಜ್ರಿ]

India is my home, will die here : Sonia Gandhi

"ಹೌದು, ನಾನು ಇಟಲಿಯಲ್ಲಿ ಜನಿಸಿದೆ. ಇಂದಿರಾ ಗಾಂಧಿಯ ಸೊಸೆಯಾಗಿ 1968ರಲ್ಲಿ ಬಂದೆ. ಆದರೆ, ಬಿಜೆಪಿ ಮತ್ತು ಆರೆಸ್ಸೆಸ್ ನನ್ನ ವಿದೇಶಿ ಹಿನ್ನೆಲೆಯ ಬಗ್ಗೆ ಅವಮಾನ ಮಾಡುತ್ತಲೇ ಬಂದಿವೆ. ಪ್ರಾಮಾಣಿಕ ಪೋಷಕರಿಗೆ ನಾನು ಹುಟ್ಟಿದ್ದೇನೆ, ನನಗೆ ಇಟಲಿಯಲ್ಲಿ ಬಂಧುಗಳಿದ್ದಾರೆ. ಇದನ್ನು ಹೇಳಲು ನನಗೇನು ಮುಜುಗರವಿಲ್ಲ" ಎಂದು ಸೋನಿಯಾ ಗದ್ಗಿತರಾದರು.

ಇದೇ ಭಾರತದಲ್ಲಿ ನನ್ನ ಪ್ರೀತಿಪಾತ್ರರ ರಕ್ತ ಮಿಳಿತವಾಗಿದೆ. ಭಾರತಕ್ಕಾಗಿ ನನ್ನ ಬಂಧುಗಳು ರಕ್ತ ಹರಿಸಿದ್ದಾರೆ. ಇದೇ ಭೂಮಿಯಲ್ಲಿ ನಾನು ಕೊನೆಯುಸಿರೆಳೆಯುತ್ತೇನೆ ಎಂದು ಸೋನಿಯಾ ಭಾವುಕ ಮಾತುಗಳಿಂದ ಮತದಾರರನ್ನು ಸೆಳೆಯಲು ಯತ್ನಿಸಿದರು.

English summary
A day after Prime Minister Narendra Modi's blistering attack over her Italian connections, Congress president Sonia Gandhi has hit back saying 'India is my home, I will breathe my last here.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X