ಕಲ್ಲಿದ್ದಲು ಬಳಕೆಯ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಭಾರತ ಸಮರ್ಥ: ಪ್ರಲ್ಹಾದ್ ಜೋಶಿ
ನವದೆಹಲಿ, ಅಕ್ಟೋಬರ್.17: ಜಾಗತಿಕ ಕಲ್ಲಿದ್ದಲು ಬೇಡಿಕೆಯನ್ನು ಹೆಚ್ಚಿಸುವ ಮತ್ತು ಬಳಕೆಯಲ್ಲಿನ ಬೇಡಿಕೆ ಪೂರೈಸಲು ಭಾರತ ಸಮರ್ಥವಾಗಿ ಸಜ್ಜಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಪ್ರಥಮ ಕಲ್ಲಿದ್ದಲು ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ್ ಜೋಶಿ, ಭಾರತದಲ್ಲಿ ಕಲ್ಲಿದ್ದಲು ಕ್ಷೇತ್ರದ ಭವಿಷ್ಯದ ಹಾದಿಯನ್ನು ನಿರ್ಧರಿಸಲು ಇಂತಹ ಸಮಾವೇಶಗಳು ಮುಖ್ಯಪಾತ್ರ ವಹಿಸಲಿವೆ ಎಂದರು.
ಜಾಗತಿಕ ಕಲ್ಲಿದ್ದಲು ಬೇಡಿಕೆಯನ್ನು ಹೆಚ್ಚಿಸುವ ಮತ್ತು ಬಳಕೆಯಲ್ಲಿನ ಬೇಡಿಕೆ ಪೂರೈಸಲು ಭಾರತ ಹೇಗೆ ಸಜ್ಜಾಗಿದೆ ಎಂಬುದರ ಕುರಿತು ಸ್ಪಷ್ಟತೆ ನೀಡಿದ ಪ್ರಲ್ಹಾದ್ ಜೋಶಿ, ನೀತಿ ನಿರೂಪಣೆ, ಉದ್ಯಮಿಗಳ ಒಗ್ಗೂಡವಿಕೆಗೆ ಸಮಾವೇಶಗಳು ಸಹಕಾರಿ ಎಂದು ಹೇಳಿದರು.

ಇನ್ನು ವಿಶೇಷವಾಗಿ ವಿದ್ಯುತ್ ವಲಯಕ್ಕೆ ಕಲ್ಲಿದ್ದಲು ರವಾನೆಯು ಕಳೆದ ವರ್ಷಕ್ಕಿಂತ (ಏಪ್ರಿಲ್-ಸೆಪ್ಟೆಂಬರ್) 16.7% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಲ್ಲಿದ್ದಲು ಉತ್ಪಾದನೆ 356 ಎಂ.ಟಿ ತಲುಪಿದ್ದನ್ನು ಗಮನಿಸಿದಾಗ ಸಂತೋಷವೆನಿಸುತ್ತದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಇಂದಿನ ರಾಷ್ಟ್ರೀಯ ಕಲ್ಲಿದ್ದಲು ಸಮಾವೇಶದಲ್ಲಿ ಕಲ್ಲಿದ್ದಲು ಬ್ಲಾಕ್‌ಗಳ ಅಭಿವೃದ್ಧಿ ಮತ್ತು ಉತ್ಪಾದನೆ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭ ನಡೆಯಿತು. ಹಿಂದಿನ ಅವಧಿಗಳಲ್ಲಿ ಹಾರಾಜಾಗಿದ್ದ ಒಟ್ಟು 10 ಕಲ್ಲಿದ್ದಲು ಗಣಿಗಳು, ಕಲ್ಲಿದ್ದಲು ಉತ್ಪಾದನೆ ಒಪ್ಪಂದಕ್ಕೆ ಸಹಿ ಹಾಕಿವೆ. ಶೀಘ್ರದಲ್ಲಿಯೇ ಈ ಗಣಿಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಆರಂಭವಾಗಲಿದೆ. ಇನ್ನು ಮೊದಲನೇ ಕಲ್ಲಿದ್ದಲು ರಾಷ್ಟ್ರೀಯ ಸಮಾವೇಶ ಇದಾಗಿದೆ. ಕಲ್ಲಿದ್ದಲು ಉತ್ಪಾದನಾ ಪ್ರದರ್ಶನ ಕೂಡ ಇದರೊಂದಿಗೆ ನಡೆದಿದ್ದು, ಎಲ್ಲರ ಗಮನ ಸೆಳೆದಿದೆ.












Click it and Unblock the Notifications