ಭಾರತದಲ್ಲಿ ಪಾನ್ ಮಸಾಲ, ಗುಟ್ಕಾ, ಬೀಡಿ, ಸಿಗರೇಟ್, ತಂಬಾಕು ವ್ಯಸನಿಗಳಿಗೆ ಬಿಗ್ ಶಾಕ್
ಧೂಮಪಾನ, ಮದ್ಯಪಾನ ಸೇರಿದಂತೆ ಕೆಲ ಪಾನೀಯಗಳ ಸೇವನೆ ಕೂಡ ಆರೋಗ್ಯಗಕ್ಕೆ ಹಾನಿಕಾರಕ ಅಂತಲೇ ಹೇಳಲಾಗತ್ತದೆ. ಆದರೂ ದೇಶದಲ್ಲಿ ಹೆಚ್ಚು ಮಂದಿ ಇವುಗಳ ಮೇಲೆ ಅವಲಂಬಿತರಾಗಿದ್ದು, ಇದೀಗ ಇವುಗಳ ಮೇಲೆ ಜಿಎಸ್‌ಟಿ ಏರಿಕೆ ಮಾಡುವ ಮೂಲಕ ಇಂತಹ ವ್ಯಸನಿಗಳಿಗೆ ಕೇಂದ್ರ ಬಿಗ್ ಶಾಕ್ ನೀಡಿದೆ. ಹಾಗಾದ್ರೆ ಯಾವೆಲ್ಲಾ ವಸ್ತುಗಳಿ ಈ ನಿಯಮ ಅನ್ವಯಿಸುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಜಿಎಸ್‌ಟಿ ಕೌನ್ಸಿಲ್‌ನ ಮೊದಲ ದಿನದ ಸಭೆಯಲ್ಲಿ ಕೆಲವು ಉತ್ಪನ್ನಗಳ ಮೇಲೆ ಗರಿಷ್ಠ 40% ಜಿಎಸ್‌ಟಿ ದರ ವಿಧಿಸಲು ಅನುಮೋದಿಸಲಾಗಿದೆ. ತಂಬಾಕು ಉತ್ನನ್ನಗಳಾದ ಪಾನ್ ಮಸಾಲ, ಗುಟ್ಕಾ, ಬೀಡಿ, ಸಿಗರೇಟ್, ಜರ್ದಾದಂತಹ ತಂಬಾಕು ಉತ್ಪನ್ನಗಳು, ಮೇಲಿನ ಜಿಎಸ್‌ಟಿ 28% ರಿಂದ 40% ಕ್ಕೆ ಏರಿಕೆ ಮಾಡಲಾಗಿದೆ. ದೈನಂದಿನ ಬಳಕೆಯ ವಸ್ತುಗಳನ್ನು ಈ 40% ತೆರಿಗೆ ಸ್ಲ್ಯಾಬ್‌ನಿಂದ ಹೊರಗಿಡಲಾಗಿದೆ.

ತಂಬಾಕು ಉತ್ಪನ್ನಗಳ ಮೇಲಿನ ಪ್ರಸ್ತುತ ಜಿಎಸ್‌ಟಿ ಮತ್ತು ಸೆಸ್, ಕಂಪೆನ್ಸೇಶನ್ ಸೆಸ್ ಲೋನ್ ಸಂಪೂರ್ಣವಾಗಿ ಮುಗಿಯುವವರೆಗೆ ಜಾರಿಯಲ್ಲಿ ಇರುತ್ತದೆ. ನಂತರ ಅವು 40% ಸ್ಲ್ಯಾಬ್‌ಗೆ ವರ್ಗಾವಣೆ ಆಗಲಿವೆ ಎಂದು ತಿಳಿಸಿದೆ.
ಯಾವೆಲ್ಲಾ ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಏರಿಕೆ: ಪಾನ್ ಮಸಾಲ, ಗುಟ್ಕಾ, ಸಿಗರೇಟ್, ಜರ್ದಾದಂತಹರ ಜಗಿಯುವ ತಂಬಾಕು, ಸಂಸ್ಕರಿಸದ ತಂಬಾಕು, ಬೀಡಿ, ಸುಗಂಧಭರಿತ ತಂಬಾಕುಗಳ ಮೇಲೆ ಈ 40% ಜಿಎಸ್‌ಟಿ ಅನ್ವಯ ಆಗಲಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಸಕ್ಕರೆ ಮಿಶ್ರಿತ ಪಾನೀಯಗಳಾದ, ಕಾರ್ಬೋನೇಟೆಡ್, ಕೆಫೀನ್ ಮಿಶ್ರಿತ ಮತ್ತು ಎನರ್ಜ ಡ್ರಿಂಕ್ಸ್‌ಗಳಿಗೂ ಇದು ಅನ್ವಯ ಅಗಲಿದೆ ಅಂತಲೂ ತಿಳಿಸಿದೆ.
ಪ್ರಸ್ತುತ, ಸಿಗರೇಟ್ ಮೇಲೆ 28% ಜಿಎಸ್‌ಟಿ ಮತ್ತು ಕಂಪೆನ್ಸೇಶನ್ ಸೆಸ್ ವಿಧಿಸಲಾಗುತ್ತಿದೆ. ಈ ಸೆಸ್ ನಿರ್ದಿಷ್ಟ ಮತ್ತು ಅಡ್ವಾಲೋರಂ ಕರ್ತವ್ಯಗಳ ಮಿಶ್ರಣ ಆಗಿದೆ. ನಿರ್ದಿಷ್ಟ ಸೆಸ್ ಸಿಗರೇಟ್ ಉದ್ದವನ್ನು ಅವಲಂಬಿಸಿ ಪ್ರತಿ ಸ್ಟಿಕ್‌ಗೆ 2.1 ರೂಪಾಯಿನಿಂದ 4.2 ರೂಪಾಯಿವರೆಗೆ ಬದಲಾಗುತ್ತದೆ. ಜೊತೆಗೆ ಶೇಕಡ 5ರಷ್ಟು ಅಂದರೆ, 74 ಮಿಲಿ ಮೀಟರ್‌ವರೆಗಿನ ಸ್ಟಿಕ್‌ಗಳಿಗೆ ಮತ್ತು ಶೇಕಡ 36ರಷ್ಟು ಅಂದರೆ, 84 ಮಿಲಿ ಮೀಟರ್‌ಗಾಗಿ ಹೆಚ್ಚುವರಿ ತೆರಿಗೆ ಅನ್ವಯ ಆಗಲಿದೆ ಅಂತಾ ತಿಳಿಸಲಾಗಿದೆ.
ಹಾನಿಕಾರಕ ವಸ್ತುಗಳ ಮೇಲಿನ ಹೆಚ್ಚಳ ಮಾಡಲಾದ 40% ಜಿಎಸ್‌ಜಿ 2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ. ಇದರಿಂದ ತಂಬಾಕುಯುಕ್ತ ವಸ್ತಗಳನ್ನು ಸೇವನೆ ಮಾಡುವವರಿಗೆ ದೊಡ್ಡ ಪೆಟ್ಟು ಬಿದ್ದಂತಾಗಿದ್ದು, ಬಾಯಿಗೆ ಬರೆ ಎಳೆದಂತಾಗಿದೆ.












Click it and Unblock the Notifications