Heat Wave Death: ಸನ್‌ಸ್ಟೋಕ್‌ನಿಂದ ಭಾರತದಲ್ಲಿ ಸುಮಾರು 33 ಸಾವಿರ ಸಾವು: ಯಾವಾಗ? ವರದಿ ನೋಡಿ
ನವದೆಹಲಿ, ಏಪ್ರಿಲ್ 11: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ತಾಪಮಾನ ಪ್ರಮಾಣ ಇಳಿಕೆ ಆಗುತ್ತಿದೆ. ಮಳೆಯ ಪ್ರಮಾಣ ಕ್ರಮೇಣ ಕಡಿಮೆ ಆದ ಹಿನ್ನೆಲೆಯಲ್ಲಿ ಭೂಮಿಯ ಕಾಯುವಿಕೆ ಹೆಚ್ಚಾಗಿದೆ. ದಕ್ಷಿಣ ಏಷ್ಯಾದ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತದಲ್ಲಿ ತಾಪಮಾನಕ್ಕೆ (ಸನ್‌ಸ್ಟ್ರೋಕ್) ದಾಖಲೆ ಮಟ್ಟದಲ್ಲಿ ಸಾವಾಗಿದೆ ಎಂದು ವರದಿ ಆಗಿದೆ.
2019 ರಲ್ಲಿ ಶಾಖ-ಸಂಬಂಧಿತ ಸಾವುಗಳು ಮತ್ತು ಅಂಗವೈಕಲ್ಯಗಳ ಪಟ್ಟಿಯಲ್ಲಿ ಭಾರತವು ಅಗ್ರ ಸ್ಥಾನದಲ್ಲಿದೆ. ತೀವ್ರ ಬಿಸಲಿನ ತಾಪ, ಶಾಖದ ಹೊಡೆತದಿಂದ (ಸ್ಟ್ರೋಕ್) 33,000 ಸಾವು ಸಂಭವಿಸಿವೆ ಎಂದು ಅಧ್ಯಯನದ ವರದಿಯೊಂದು ತಿಳಿಸಿದೆ. ಇದು ಜಾಗತಿಕ ತಾಪಮಾನಕ್ಕೆ ಸಂಬಂಧಿಸಿದ ಸಾವುಗಳು, ತಾಪಮಾನ ತೀವ್ರತೆಗೆ ಕಾರಣವಾಗಿದೆ.

ಅಧ್ಯಯನದಿಂದ ಸಾವಿನ ವಿಶ್ಲೇಷಣೆ
ಭಾರತದಲ್ಲಿನ ಈ ಒಟ್ಟು 33,000 ಸಾವುಗಳು ಅನಾರೋಗ್ಯಕರ, ಅಸೂಕ್ತವಾದ ತಾಪಮಾನದ ಕಾರಣದಿಂದ ಸಂಭವಿಸಿವೆ. ಈ ಪೈಕಿ ಗರಿಷ್ಠ ತಾಪಮಾನದಿಂದಲೇ ಹೆಚ್ಚು ಸಾವು ಅಂದರೆ ಸುಮಾರು 18,000 (ಶೇ. 55%) ಸಾವಾಗಿದೆ. ಉಳಿದಂತೆ ಸುಮಾರು 15,000 (ಶೇಕಡಾ 45) ಕಡಿಮೆ ತಾಪಮಾನ ಸಾವುಗಳು ಎಂದು ಸಂಶೋಧಕರು ಶೋಧಿಸಿದ್ದಾರೆ ಎಂದು TNIE ವರದಿ ಮಾಡಿದೆ.
ಭಾರತದಲ್ಲಿ 2019 ರ ವರ್ಷದಲ್ಲಿ 5.2 ಲಕ್ಷಕ್ಕೂ ಹೆಚ್ಚು ಸಾವುಗಳು ಸ್ಟ್ರೋಕ್ ಸಂಬಂಧಿ ಸಾವುಗಳಾಗಿವೆ. ಈ ಬಗ್ಗೆ ನ್ಯೂರಾಲಜಿ ಜರ್ನಲ್‌ನಲ್ಲಿ ವರದಿ ಬಿತ್ತರವಾಗಿದೆ.
ಸನ್‌ಸ್ಟ್ರೋಕ್ ಸಾವಿನ ಪ್ರಮಾಣ ಏರಿಕೆ
ಅಧ್ಯಯನಗಳ ಪ್ರಕಾರ ವಿಶ್ವದ '204 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ತೀವ್ರ ತಾಪಮಾನ ಕಾರಣದಿಂದ ಜನರಲ್ಲಿ ಅನಾರೋಗ್ಯ ಕಂಡು ಬಂದಿದೆ. ಇದರಲ್ಲಿ ಹೆಚ್ಚಿನ ಉಷ್ಣಾಂಶ, ಶಾಖದ ಅಲೆ ಕಾರಣದಿಂದ ಸ್ಟ್ರೋಕ್ ಆಗಿ ಸಾವನ್ನಪ್ಪಿದ್ದಾರೆ. 1990 ಕ್ಕೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ ಸಾವಿನ ಪ್ರಮಾಣ ಏರಿಕೆ ಆಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಅಧಿಕ ತಾಪಮಾನ ಸ್ಟ್ರೋಕ್ ವಿಶೇಷವಾಗಿ 10 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಹೆಚ್ಚು ಪ್ರಭಾವ ಬೀರುತ್ತದೆ. ಇದು ಕಡಿಮೆ ಸಾಮಾಜಿಕ ಜನಸಂಖ್ಯಾ ಸೂಚ್ಯಂಕದ ಆಫ್ರಿಕಾದಂತಹ ಪ್ರದೇಶಗಳಲ್ಲಿ ಹೆಚ್ಚು ಎಂದು ಸಂಶೋಧಕರು ದೃಢಪಡಿಸಿದ್ದಾರೆ.
ಪುರುಷ-ಮಹಿಳೆ ಸಾವಿನ ಪ್ರಮಾಣ ಎಷ್ಟಿದೆ?
ವಿಪರೀತ ತಾಪಮಾನದಿಂದ (ಸ್ಕ್ರೋಕ್) ಸಾವಿನ ಸಂಖ್ಯೆ ವಿಭಾಗಿಸಿದ್ದು, ಒಂದು ಲಕ್ಷ ಪುರುಷರಲ್ಲಿ 7.7 ರಷ್ಟು ಪುರುಷರು ಮತ್ತು ಒಂದು ಒಕ್ಷ ಮಹಿಳೆಯರಲ್ಲಿ 5.9 ರಷ್ಟು ಜನ ಉಸಿರು ಚೆಲ್ಲಬಹುದು. ಮಧ್ಯ ಏಷ್ಯಾದಲ್ಲಿ ಒಂದು ಲಕ್ಷ ಜನರಲ್ಲಿ 18 ಮಂದಿ ಸೂಕ್ತವಲ್ಲದ ತಾಪಮಾನಕ್ಕೆ ಸಂಬಂಧಿ ಸ್ಟ್ರೋಕ್ ನಿಂದ ಸಾಯುತ್ತಾರೆ ಎಂದು ತಿಳಿದು ಬಂದಿದೆ.
ಮನುಷ್ಯರಲ್ಲಿ ಆರೋಗ್ಯ ಅಸಮಾನತೆ ಉಂಟು ಮಾಡುವ ಜೀವಕ್ಕೆ ಕುತ್ತು ತರುವ ಗಳನ್ನು ಪರಿಹರಿಸಲು ಗುರಿ ಪರಿಹಾರಗಳನ್ನು ನಿರ್ಧರಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ತಂಡವು ಹೇಳಿದೆ. ಹವಾಮಾನ ಬದಲಾವಣೆಯ ಸಂಭಾವ್ಯ ಕಾರಣ, ಸಮಸ್ಯೆಗಲನ್ನು ಪರಿಹರಿಸಬೇಕಿದೆ. ಜೊತೆಗೆ ಪರಿಣಾಮಕಾರಿ ಆರೋಗ್ಯ ನೀತಿಗಳನ್ನು ಶೋಧಿಸಬೇಕಿದೆ ಎಂಬುದ ಅಧ್ಯಯನಕಾರರ ಆಶಯವಾಗಿದೆ.












Click it and Unblock the Notifications