ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಔಷಧೀಯ ಉತ್ಪನ್ನಗಳ ರಫ್ತಿನಲ್ಲಿ ಹೆಚ್ಚಳ ಕಂಡ ಭಾರತ; ಬಿಜೆಪಿ

|
Google Oneindia Kannada News

ನವದೆಹಲಿ, ಸೆ.12: ಭಾರತವು ಔಷಧೀಯ ಉತ್ಪನ್ನಗಳ ರಫ್ತಿನಲ್ಲಿ ಹೆಚ್ಚಳ ಕಂಡಿದ್ದು, ಭಾರತವು ಜಗತ್ತಿಗೆ ಸಂಜೀವಿನಿ ಸ್ವರೂಪವಾಗಿ ಭಾಸವಾಗುತ್ತಿದೆ ಎಂದು ಬಿಜೆಪಿ ನಾಯಕರು ಮತ್ತು ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿದೆ.

ಜಗತ್ತಿನ ಸ್ವಾಸ್ಥ್ಯ ಕಾಪಾಡುತ್ತಿರುವ ಭಾರತೀಯ ಔಷಧಿಗಳ ರಫ್ತಿನಲ್ಲಿ ಶೇಕಡಾ 146 ರಷ್ಟು ವೃದ್ಧಿಯಾಗಿದೆ ಎಂದು ಹೇಳಿದೆ. ಈ ಬಗ್ಗೆ ಕರ್ನಾಟಕ ಬಿಜೆಪಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್ ಹಂಚಿಕೊಂಡಿದೆ. ಈ ವಿಚಾರದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ 'ಕೂ' ಮಾಡಿದ್ದು, ಜಗತ್ತಿಗೆ ಸಂಜೀವಿನಿಯಾದ ಭಾರತ ಎಂದಿದ್ದಾರೆ.

India has begun to export large quantity of medicine.

"ಪ್ರಧಾನಿ ನರೇಂದ್ರ ಮೋದಿಜೀ ಅವರ ಮಹತ್ವಾಕಾಂಕ್ಷೆಗೆ ಪೂರಕವಾಗಿ ಆತ್ಮನಿರ್ಭರ ಭಾರತ ನಿರ್ಮಾಣದ ನಿಟ್ಟಿನಲ್ಲಿ ಔಷಧಗಳ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಿದೆ" ಎಂದಿದ್ದಾರೆ.

"ಇದೀಗ ಔಷಧಗಳನ್ನು ರಫ್ತು ಮಾಡುವ ಮೂಲಕ ಇಡಿ ಜಗತ್ತಿಗೆ ಸಂಜೀವಿನಿಯಾಗುವತ್ತ ದಾಪುಗಾಲು ಇಡುತ್ತಿದೆ. 2013-14 ರಲ್ಲಿ ರಫ್ತು ಪ್ರಮಾಣ 20,596 ಕೋಟಿ ರೂಪಾಯಿ ಇತ್ತು. ಆದರೆ ಪ್ರಸ್ತತ ಆರ್ಥಿಕ ವರ್ಷದ ಏಪ್ರಿಲ್ - ಜುಲೈನಲ್ಲಿ ಇದು ಶೇಕಡಾ 146 ಹೆಚ್ಚಳ ಕಂಡು 50,714 ಕೋಟಿ ರೂಪಾಯಿ ತಲುಪಿದೆ. ಸಮರ್ಥ ನಾಯಕತ್ವ ಇದ್ದರೆ ಸದೃಢ ದೇಶ ನಿರ್ಮಾಣ ಸಾಧ್ಯ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
India has begun to export large quantity of medicine, it has grown by 146%. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X