ಕೊರೊನಾ ವೈರಾಣು ಬಗ್ಗೆ ಭಯವಿದ್ದರೆ ಈ ಸಂಖ್ಯೆಗೆ ಕರೆ ಮಾಡಿ!

Recommended Video

      Corona Virus : Indian Government sets up helpline for Emergency | Corona | Helpline | virus

      ನವದೆಹಲಿ, ಜನವರಿ 30: ಚೀನಾದಿಂದ ಹರಡುತ್ತಿರುವ ಕೊರಾನಾ ವೈರಾಣು ಕುರಿತಂತೆ ಅನೇಕ ಗೊಂದಲಗಳಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆ ಪ್ರತ್ಯೇಕ ಸಹಾಯವಾಣಿ ಕೇಂದ್ರ ಸ್ಥಾಪಿಸಿದೆ. ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಈ ಕೇಂದ್ರದ ಮೂಲಕ ಕೊರಾನಾ ಕುರಿತ ಮಾಹಿತಿ ಪಡೆದುಕೊಳ್ಳಬಹುದು.

      ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಕೊರೊನಾ ವೈರಸ್ ಎನ್ನುವುದು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಸೋಂಕಾಗಿದೆ. ಈಗ ಪ್ರಾಣಿಗಳಿಂದ ಮನುಷ್ಯನಿಗೂ ಈ ಸೋಂಕು ತಗುಲುತ್ತಿದೆ.

      ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.

      India Govt sets up helpline number for Coronavirus

      ಕೊರೊನಾ ವೈರಸ್‌ನಿಂದ ಈಗಾಗಲೇ ಚೀನಾದಲ್ಲಿ 160ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭಾರತದ ಬಹುತೇಕ ಎಲ್ಲಾ ಏರ್‌ಪೋರ್ಟ್‌ಗಳಲ್ಲಿ ಕೂಡ ತೀವ್ರ ನಿಗಾ ವಹಿಸಲಾಗುತ್ತಿದೆ. ಒಂದೆರಡು ಸೋಂಕು ತಗುಲಿರುವ ಪ್ರಕರಣಗಳು ಕಂಡು ಬಂದರೂ ಭಾರತದಲ್ಲಿ ಇನ್ನೂ ಯಾರಿಗೂ ಪಾಸಿಟಿವ್ ಎಂದು ದೃಢಪಟ್ಟಿಲ್ಲ.

      ಇದು ಸಾಮಾನ್ಯ ಶೀತದಂತಹ ಲಘು ಪ್ರಮಾಣದಿಂದ ಮಧ್ಯಮ ಪ್ರಮಾಣದ ಮೇಲ್ಭಾಗದ ಶ್ವಾಸಕೋಶದ ಸೋಂಕನ್ನು ಉಂಟು ಮಾಡುವುದು. ಆದರೆ ಇದು ಕೆಲವೊಂದು ಸಲ ತೀವ್ರ ರೀತಿಯ ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್ ಉಂಟು ಮಾಡುವುದು. ಮನುಷ್ಯರನ್ನು ಕಾಡುವಂತಹ ಕೊರೊನಾ ವೈರಸ್ ನಲ್ಲಿ ಹಲವು ವಿಧಗಳು ಇವೆ. ಇದರಲ್ಲಿ ಮೆರ್ಸ್ ಮತ್ತು ಸಾರ್ಸ್ ವೈರಸ್ ಸೇರಿದೆ.

      ರೋಗವಿರುವವರು ಕೆಮ್ಮಿದರೆ, ಕೈಕುಲುಕುವಿಕೆ, ಯಾವುದೋ ವಸ್ತುವನ್ನು ಮುಟ್ಟಿ ಅಥವಾ ಪ್ರಾಣಿಗಳನ್ನು ಮುಟ್ಟಿ ಕೈತೊಳೆದುಕೊಳ್ಳದೆ ನಿಮ್ಮ ಮುಖ್ಯ, ಬಾಯಿಗಳನ್ನು ಮುಟ್ಟಿದಾಗಲೂ ಈ ರೋಗ ಹರಡುವ ಸಾಧ್ಯತೆ ಇರುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+