ಅಂಧಕಾರ ಮೆಟ್ಟುವ ಬೆಳಕಿನ ಕಿಡಿ ಹೊತ್ತಿಸಿದ ದೀಪಾವಳಿ
ಬೆಂಗಳೂರು, ನ.2 : ಭಾರತದ ಸಾಂಪ್ರದಾಯಿಕ ಬೆಳಕಿನ ಹಬ್ಬ ದೀಪಾವಳಿಗೆ ದೇಶ ಸಂಭ್ರಮದಿಂದ ಸಿದ್ಧಗೊಳ್ಳುತ್ತಿದೆ. ಉತ್ತರ ಮತ್ತು ದಕ್ಷಿಣದ ಭಾರತವೆನ್ನುವ ವಿಂಗಡಣೆಯಿಲ್ಲದೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಗುಜರಾತ್‌ನಿಂದ ಅರುಣಾಚಲದವರೆಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಸ್ವಾಗತಿಲಸು ಸಜ್ಜಾಗಿ ನಿಂತಿದ್ದಾರೆ.
ದೀಪಾವಳಿ ಹೆಸರಿಗೆ ತಕ್ಕಂತೆ ಬೆಳಕಿನ ಹಬ್ಬ. ದೇಶಕ್ಕೆ ಅಂಟಿರುವ ಕಳಂಕವನ್ನು ನಿವಾರಣೆ ಮಾಡಿ, ಹೊಸ ಬೆಳಕು ದೇಶದಲ್ಲಿ ಸಂಚರಿಸಿ ಎಲ್ಲಾ ದೇಶವಾಸಿಗಳು ಸುಖ, ಶಾಂತಿ, ನೆಮ್ಮದಿಯಿಂದ ಬಾಳುವಂತಾಗಬೇಕು ಎಂದು ಜನರು ದೇವರಲ್ಲಿ ಪ್ರಾರ್ಥಿಸುತ್ತಾರೆ. ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿ ಹೊಡೆಯುವಾಗ ಜಾಗೃತರಾಗಿರಿ ಎಂದು ಎಲ್ಲರಿಗೂ ಕರೆ ನೀಡಿ ಶುಭಾಶಯ ಸಲ್ಲಿಸಲಾಗುತ್ತಿದೆ.
ಹಿಂದೂ ಧರ್ಮದಜನರು ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ. ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ. ದೀಪಾವಳಿ ಎಂದರೆ ಆಯುಧಪೂಜೆ ಮತ್ತು ಗೋಪೂಜೆಗಳನ್ನು ನಾವು ಮರೆಯುವಂತಿಲ್ಲ. (ದೀಪಾವಳಿಯ ಚಿತ್ರಗಳು)

ದೀಪಾವಳಿಗೆ ಗುಜರಾತ್ ಸಜ್ಜು
ದೀಪಾವಳಿಗೆ ಗುಜರಾತ್ ಸಿದ್ಧಗೊಂಡಿದೆ ಇಲ್ಲಿರುವ ಪ್ರಸಿದ್ಧ ಅಕ್ಷರಧಾಮ ದೇವಾಲಯ ದೀಪಾವಳಿ ಸಮಯದಲ್ಲಿ ದೀಪಗಳಿಂದ ಕಂಗೊಳಿಸುತ್ತಿದೆ.

ದೀಪಾವಳಿಯಲ್ಲೂ ಸಚಿನ್
ಮುರಾದಾಬಾದ್ ನಲ್ಲಿ ಶಾಲಾ ವಿದ್ಯಾರ್ಥಿಗಳು ದೀಪಾವಳಿಗೆ ಸಜ್ಜಾಗಿ ನಿಂತಿರುವ ಜೊತೆಗೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂಬ ಸಂದೇಶ ಸಾರುತ್ತಿದ್ದಾರೆ.

ನೋಡಿ ನಮ್ಮ ಸಂಭ್ರಮ
ಮಹಾರಾಷ್ಟ್ರದ ವಿದರ್ಭದಲ್ಲಿ ವಿಧವೆಯರಿಗಾಗಿ ಸ್ವಯಂಸೇವಾ ಸಂಸ್ಥೆಯೊಂದು ಏರ್ಪಡಿಸಿದ್ದ ದೀಪಾವಳಿ ಆಚರಣೆಯಲ್ಲಿ ಅವರು ದೀಪ ಬೆಳಗಿ ಸಂಭ್ರಮಿಸಿದರು.

ಸಿಹಿ ಇಲ್ಲದೆ ಎಂತಹ ಹಬ್ಬ
ಮಿರ್ಜಾಪುರದಲ್ಲಿ ಮಹಿಳೆಯರು ದೀಪಾವಳಿಗಾಗಿ ಲಾಡು ತಯಾರಿಸುತ್ತಿದ್ದಾರೆ. ದೀಪಾವಳಿ ಅಂದ ಮೇಲೆ ಸಿಹಿ ತಿಂಡಿ ಇಲ್ಲದಿದ್ದರೆ ಹೇಗೆ ಹೇಳಿ

ಬನ್ನಿ ಪಟಾಕಿ ಹಚ್ಚೋಣ
ವಿದರ್ಭದಲ್ಲಿ ವಿಧವೆಯರಿಗಾಗಿ ಆಯೋಜಿಸಿದ್ದ ದೀಪಾವಳಿ ಆಚರಣೆಯಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಿದರು.

ತಾರೆಯರ ದೀಪಾವಳಿ
ನಟಿ ತನಿಷಾ ಸಿಂಗ್ ದೀಪಾವಳಿಗೆ ಪಟಾಕಿ ಹಿಡಿದು ಸಂಭ್ರಮಿಸಿದರು.

ನಮ್ಮ ಸಂಭ್ರಮ ನೋಡಿ
ಮುಂಬೈ ಕಮಲ ಮೆಹ್ತಾ ಶಾಲೆಯಲ್ಲಿನ ಅಂಧ ವಿದ್ಯಾರ್ಥಿಗಳು ಪಟಾಕಿ ಹಚ್ಚಿ ಸಂಭ್ರಮಿಸಿದರು.

ಅಹಾ ಅಲಹಾಬಾದ್
ಅಲಹಾಬಾದ್ ನ ಮದನ್ ಮೋಹನದ ಮಾಲ್ ವಿಯಾ ಕ್ರೀಡಾಂಗಣದಲ್ಲಿ ದೀಪ ಬೆಳಗಿ ಪಟಾಕಿ ಹಚ್ಚಿದಾಗ ಕಂಡು ಬಂದ ದೃಶ್ಯವಿದು.

ಬಾಳನ್ನು ಬೆಳಗಲಿ ದೀಪ
ಮಥುರಾದ ದೇವಾಲಯವೊಂದರಲ್ಲಿ ದೀಪಾವಳಿ ಪ್ರಯುಕ್ತ ದೀಪ ಬೆಳಗಿ ಭಕ್ತಾದಿಗಳು ಪ್ರಾರ್ಥನೆ ಸಲ್ಲಿಸುತ್ತಿರುವುದು.

ದೀಪಾವಳಿ ಶುಭಾಶಯಗಳು
ಗಡಿಭದ್ರತಾ ಪಡೆಯ ಯೋಧರು ಅಗರ್ತಾಲದ ಇಂಡಿಯಾ-ಬಾಂಗ್ಲಾ ಗಡಿಯಲ್ಲಿ ಪಟಾಕಿ ಹಚ್ಚಿ ದೀಪಾವಳಿ ಆಚರಿಸಿದರು. ಹಬ್ಬದ ಸಂಭ್ರಮದಲ್ಲೂ ಗಡಿ ಕಾಯುತ್ತಿರುವ ಯೋಧರಿಗೆ ನಮ್ಮ ಶುಭಾಶಯ ಹೇಳೋಣ.












Click it and Unblock the Notifications