India Russia: ರಷ್ಯಾ ಜೊತೆಗಿನ ತೈಲ ಖರೀದಿ ಒಪ್ಪಂದಕ್ಕೆ ಗುಡ್‌ಬೈ ಹೇಳಿದ ಭಾರತ, ಇದರ ಪರಿಣಾಮ ಏನು ತಿಳಿಯಿರಿ

ಭಾರತ ಮತ್ತು ರಷ್ಯಾ ನಡುವೆ ಅತ್ಯಂತ ಗಟ್ಟಿಯಾದ ಸಂಬಂಧ ಇದ್ದು, ಎರಡೂ ದೇಶಗಳು ಭಾರಿ ದೊಡ್ಡ ಮಟ್ಟದಲ್ಲಿ ದ್ವಿಪಕ್ಷೀಯ ಸಂಬಂಧ ಬೆಳೆಸಿಕೊಂಡು ಬಂದಿವೆ. ಇದೇ ಕಾರಣಕ್ಕೆ ಭಾರತ & ರಷ್ಯಾ ಸ್ನೇಹ ಕಂಡು ಬೇಸರ ಹೊರ ಹಾಕುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇಷ್ಟೆಲ್ಲಾ ಇದ್ದರೂ ಎರಡೂ ದೇಶಗಳು ಅತ್ಯುತ್ತಮವಾಗಿ ಸಂಬಂಧ ಉಳಿಸಿಕೊಂಡು ಹೋಗುತ್ತಿವೆ, ಆದರೂ ದಿಢೀರ್ ಭಾರತ ಒಂದು ಗಟ್ಟಿಯಾದ ನಿರ್ಧಾರ ಪ್ರಕಟಿಸಿದೆ. ಅಮೆರಿಕ ಹಾಕುತ್ತಿದ್ದ ಒತ್ತಡ ಹಾಗೂ ನಮ್ಮ ದೇಶದ ಆರ್ಥಿಕ ಸ್ಥಿತಿ ಅಳೆದು ತೂಗಿ ಇದೀಗ ರಷ್ಯಾ ಜೊತೆಗಿನ ತೈಲ ಖರೀದಿ ಒಪ್ಪಂದಕ್ಕೆ ಗುಡ್‌ಬೈ ಹೇಳಿದೆ ಭಾರತ. ಹಾಗಾದರೆ ಇದರ ಪರಿಣಾಮಗಳು ಏನಾಗಬಹುದು?

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾದ ನಂತರ ಪಾಶ್ಚಿಮಾತ್ಯ ದೇಶಗಳು ಹಲವಾರು ನಿರ್ಬಂಧ ಹೇರಿಕೆ ಮಾಡಿದ್ದವು. ಪ್ರಮುಖವಾಗಿ ಯುರೋಪ್ ದೇಶಗಳು ನೇರವಾಗಿ ರಷ್ಯಾ ಮೂಲಕ ತೈಲ ಖರೀದಿ ನಿಲ್ಲಿಸಿದ್ದು ದೊಡ್ಡ ಆಘಾತ ನಿಡಿತ್ತು. ಹೀಗಾಗಿ ರಷ್ಯಾ ಪರದಾಡುವ ಸಮಯಕ್ಕೇ ಸರಿಯಾಗಿ ಭಾರತ ದೊಡ್ಡ ಒಪ್ಪಂದ ಮಾಡಿಕೊಂಡು, ಭಾರಿ ಪ್ರಮಾಣದಲ್ಲಿ ರಷ್ಯಾ ತೈಲವನ್ನು ಖರೀದಿ ಮಾಡುತ್ತಿತ್ತು. ರಷ್ಯಾ ಮೂಲಕ ಖರೀದಿ ಮಾಡಿದ ಕಚ್ಚಾತೈಲ ಸಂಸ್ಕರಣೆ ಮಾಡಿ ಹಲವು ದೇಶಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ ಈಗ ರಷ್ಯಾ ಮೂಲಕ ತೈಲ ಖರೀದಿ ಮಾಡದ ರೀತಿ ಅಮೆರಿಕ ಭಾರಿ ಒತ್ತಡ ಹೇರುತ್ತಾ ಬಂದಿತ್ತು. ಅಮೆರಿಕ ಈ ವಿಚಾರದಲ್ಲಿ ಇದೀಗ ಗೆದ್ದಿದ್ದು, ರಷ್ಯಾ ಮತ್ತು ಭಾರತ ನಡುವಿನ ತೈಲ ಖರೀದಿಗೆ ಬ್ರೇಕ್ ಬಿದ್ದಿದೆ.

India Russia

ಸಂಕಷ್ಟಕ್ಕೆ ಸಿಲುಕಲಿದೆ ರಷ್ಯಾ ಆರ್ಥಿಕತೆ

ರಷ್ಯಾ ಈಗಾಗಲೇ ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಾ, ಮಾಡುತ್ತಾ ಬರೋಬ್ಬರಿ 4 ವರ್ಷವನ್ನೇ ಕಳೆದಿದೆ. ಹೀಗಿದ್ದಾಗ ಕೈಯಲ್ಲಿ ಹಣ ಇಲ್ಲದೆ ಒದ್ದಾಡುವ ಪರಿಸ್ಥಿತಿಗೆ ಕೂಡ ತಲುಪಿದ್ದು, ಹೀಗೆ ಇದ್ದರೆ ಭವಿಷ್ಯದಲ್ಲಿ ಆರ್ಥಿಕ ಚೇತರಿಕೆ ಕೂಡ ಅನುಮಾನ ಎನ್ನುವಂತೆ ಆಗಿದೆ. ಅದರಲ್ಲೂ ಈಗ ರಷ್ಯಾ ಕಚ್ಚಾತೈಲ ಖರೀದಿ ಮಾಡುತ್ತಿರುವ ಏಕೈಕ ದೊಡ್ಡ ದೇಶ ಎಂದರೆ ಅದು ಭಾರತ. ಇದು ರಷ್ಯಾಗೆ ದೊಡ್ಡ ಸಹಾಯ ಕೂಡ ಮಾಡುತ್ತಿತ್ತು, ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರವೂ ನಡೆಯುತ್ತಿತ್ತು. ಆದರೆ ದಿಢೀರ್ ರಷ್ಯಾ ಕಡೆಯಿಂದ ಕಚ್ಚಾತೈಲ ಖರೀದಿಯನ್ನು ಭಾರತ ನಿಲ್ಲಿಸಲು ಮುಂದಾಗಿರುವುದು ರಷ್ಯಾ ಆರ್ಥಿಕತೆಗೆ ಪೆಟ್ಟು ಕೊಡುವ ಆತಂಕ ಹುಟ್ಟಿಸಿದೆ.

4,00,000 ಬ್ಯಾರೆಲ್‌ ಕ್ರಮೇಣ ಕಡಿತ

ಭಾರತ ಮತ್ತು ರಷ್ಯಾ ನಡುವೆ ಕೆಲವು ತಿಂಗಳ ಹಿಂದಷ್ಟೇ ಪ್ರತಿದಿನ ಮಿಲಿಯನ್ ಬ್ಯಾರೆಲ್ ಲೆಕ್ಕದಲ್ಲಿ ಕಚ್ಚಾತೈಲ ಆಮದು ಆಗುತ್ತಿತ್ತು. ಆದರೆ ಆ ನಂತರ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಬಳಿಕ ರಷ್ಯಾ ತೈಲ ಖರೀದಿಯನ್ನು ಭಾರತ ಮೂಲದ ಸಂಸ್ಥೆಗಳು ಕಡಿಮೆ ಮಾಡಿದ್ದವು. ಇದೀಗ ಅದು ಲಕ್ಷದ ಲೆಕ್ಕದಲ್ಲಿ ಇದ್ದು, ಸುಮಾರು 400,000 ಬ್ಯಾರೆಲ್‌ ಕಚ್ಚಾತೈಲ ಪ್ರತಿದಿನ ಆಮದು ಆಗ್ತಾ ಇದೆ. ಅದನ್ನು ಕ್ರಮೇಣ ಕಡಿಮೆ ಮಾಡಿ ಸಂಪೂರ್ಣವಾಗಿ ರಷ್ಯಾ ತೈಲ ಖರೀದಿ ನಿಲ್ಲಿಸುವ ಪ್ಲಾನ್ ಇದೀಗ ಮಾಡಲಾಗಿದೆ. ಆದರೂ ಇದರಿಂದ ರಷ್ಯಾ ಮತ್ತು ಭಾರತದ ಸಂಬಂಧಕ್ಕೆ ಹಾನಿ ಆಗದೇ ಇರುವ ರೀತಿ ಕೂಡ ನಿಭಾಯಿಸಲು ಪ್ಲಾನ್ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+