• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

34 ಲಕ್ಷದ ಗಡಿ ದಾಟಿದ ದೇಶದ ಕೊರೊನಾ ವೈರಸ್ ಪ್ರಕರಣ

|

ನವದೆಹಲಿ, ಆಗಸ್ಟ್ 29: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 34 ಲಕ್ಷದ ಗಡಿ ದಾಟಿದೆ. 24 ಗಂಟೆಗಳಲ್ಲಿ 76,472 ಹೊಸ ಪ್ರಕರಣಗಳು ಪತ್ತೆಯಾಗಿವೆ. 1021 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರಿಂದ ಕೊರೊನಾದಿಂದ ದೇಶದಲ್ಲಿ ಮೃತಪಟ್ಟವರ ಸಂಖ್ಯೆ 62,550ಕ್ಕೆ ಏರಿಕೆಯಾಗಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ದೇಶದಲ್ಲಿ ಪ್ರಸ್ತುತ 7,52,424 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 34,63,973ಕ್ಕೆ ಏರಿಕೆಯಾಗಿದೆ. ಇದುವರೆಗೂ 26,48,999 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ಸತತ ನಾಲ್ಕನೆಯ ದಿನ ಭಾರತದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 1,000 ಕ್ಕೂ ಹೆಚ್ಚಿದೆ.

ಸಂಸತ್ ಅಧಿವೇಶನಕ್ಕೂ 72 ಗಂಟೆ ಮುನ್ನ ಸಂಸದರಿಗೆ ಕೋವಿಡ್ ಪರೀಕ್ಷೆ

ಜಾಗತಿಕ ಕೊರೊನಾ ವೈರಸ್ ಸಂಖ್ಯೆಯು 2,49,11,716ಕ್ಕೆ ತಲುಪಿದೆ. ಇದರಲ್ಲಿ 8,41,331 ಮಂದಿ ಮೃತಪಟ್ಟಿದ್ದಾರೆ. ಜಗತ್ತಿನಾದ್ಯಂತ 67,70,496 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಅತ್ಯಧಿಕ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಆದರೆ ಭಾರತದಲ್ಲಿ ಮರಣ ಪ್ರಮಾಣ ಕಡಿಮೆ ಎನ್ನುವುದು ಗಮನಾರ್ಹ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ (60,96,235) ಮರಣ ಪ್ರಮಾಣ ಶೇ 3.05ರಷ್ಟಿದೆ. ಇದುವರೆಗೂ 1,85,901 ಮಂದಿ ಮೃತಪಟ್ಟಿದ್ದಾರೆ. ಎರಡನೆಯ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ (38,12,605 ಪ್ರಕರಣ) ಮರಣ ಪ್ರಮಾಣ 3.14ರಷ್ಟಿದೆ. ಅಲ್ಲಿ 1,19,605 ಮಂದಿ ಬಲಿಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಮರಣ ಪ್ರಮಾಣ ಶೇ 3.38ರಷ್ಟಿದೆ. ಆದರೆ ಭಾರತದಲ್ಲಿ ಇದು 1.81ರಷ್ಟಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಇಟಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದರೂ ಸಾವಿನ ಪ್ರಮಾಣ ಶೇ 13.37ರಷ್ಟಿದೆ. ಬ್ರಿಟನ್‌ನಲ್ಲಿ 3,31,644 ಪ್ರಕರಣಗಳಿದ್ದು, 41,486 ಮಂದಿ (ಶೇ 12.51) ಬಲಿಯಾಗಿದ್ದಾರೆ. ಮರಣ ಪ್ರಮಾಣದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಮೆಕ್ಸಿಕೋ ಭಾರತಕ್ಕಿಂತ ಕೊಂಚ ಮುಂದೆ ಇದೆ. ಇಲ್ಲಿ 63,146 ಮಂದಿ ಮೃತಪಟ್ಟಿದ್ದು, ಮರಣ ಪ್ರಮಾಣ ಶೇ 10.78ರಷ್ಟಿದೆ.

English summary
India's Covid case tally has crossed 34 lakh mark with spike of 76,472 new cases in 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X