ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಕ್ಕೆ ಪ್ರತ್ಯುತ್ತರ: ಪರ್ವತ ಪ್ರದೇಶ ಆಕ್ರಮಿಸಿದ ಭಾರತ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 10: ಭಾರತೀಯ ಸೇನೆಯು ಪೂರ್ವ ಲಡಾಖ್‌ನ ಪ್ಯಾಂಗೊಂಗ್ ಸರೋವರದಲ್ಲಿನ ಫಿಂಗರ್ 4 ಪರ್ವತ ಪ್ರದೇಶದಲ್ಲಿನ ಚೀನಾ ಸೇನೆಯ ಚಟುವಟಿಕೆಗಳನ್ನು ಗಮನಿಸಲು ಪರ್ವತ ಶ್ರೇಣಿಯನ್ನು ಆಕ್ರಮಿಸಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಮೇ ತಿಂಗಳಿನಿಂದ ಆರಂಭವಾದ ನಾಲ್ಕುತಿಂಗಳ ಭಾರತ-ಚೀನಾ ಸೇನಾ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಈ ಬೆಳವಣಿಗೆ ನಡೆದಿದೆ.

ಆಗಸ್ಟ್ ಅಂತ್ಯದ ವೇಳೆಗೆ ಪ್ಯಾಂಗೊಂಗ್ ತ್ಸೊ ಸರೋವರದ ದಕ್ಷಿಣ ತೀರದ ಪರ್ವತ ಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ಭಾರತೀಯ ಸೇನೆಯು ಕಾರ್ಯಾಚರಣೆ ಹಾಗೂ ಪ್ರತಿಬಂಧಕ ಕ್ರಮಗಳನ್ನು ನಡೆಸಿತ್ತು.

ಪ್ಯಾಂಗಾಂಗ್‌ನ ಉತ್ತರ ಭಾಗದಲ್ಲಿ ಚೀನಾ ಸೇನೆಯ ಹೊಸ ಚಟುವಟಿಕೆಪ್ಯಾಂಗಾಂಗ್‌ನ ಉತ್ತರ ಭಾಗದಲ್ಲಿ ಚೀನಾ ಸೇನೆಯ ಹೊಸ ಚಟುವಟಿಕೆ

ಚೀನಾದ ಪಿಎಲ್‌ಎಯ ಪ್ಯಾಂಗೊಂಗ್ ತ್ಸೊ ಪ್ರದೇಶದಲ್ಲಿ ನಡೆಸುತ್ತಿರುವ ಚಟುವಟಿಕೆಗಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಪೂರ್ವಭಾವಿ ಕ್ರಿಯೆಗಳನ್ನು ನಡೆಸುತ್ತಿದೆ. ಈ ಮೂಲಕ ಎಲ್‌ಎಸಿಯ ಭಾರತದ ಭಾಗದಲ್ಲಿನ ಇನ್ನಷ್ಟು ಪ್ರದೇಶಗಳನ್ನು ಚೀನಾ ಪಡೆಗಳು ಆಕ್ರಮಿಸದಂತೆ ತಡೆಯಲಾಗುತ್ತಿದೆ.

 India-China Standoff: Indian Army Occupies Heights Along Pangong Tso

ಚೀನಾ ಸೇನೆಯ ಚಟುವಟಿಕೆಗಳನ್ನು ತಡೆಯಲು ಆರೇಳು ದಿನಗಳ ಹಿಂದೆ ಭಾರತವು ರೆಜಾಂಗ್ ಲಾ, ರೆಸೆಹೆನ್ ಲಾ, ಬ್ಲಾಕ್ ಟಾಪ್, ಗೋಸ್ವಾಮಿ ಹಿಲ್ ಮತ್ತು ಚುಶುಲ್ ಸಮೀಪದ ಇತರೆ ಪರ್ವತ ಪ್ರದೇಶಗಳನ್ನು ಆಕ್ರಮಿಸಿತ್ತು.

English summary
Indian army has occupies heights overlooking Chinese camps near finger 4 in Pangong Tso.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X