ಹಿಮಾಲಯದಲ್ಲಿ ವಿಶ್ವದ ಅತೀ ಎತ್ತರದ ರೈಲ್ವೇ ಸೇತುವೆ
ಕೌರಿ, ಜು.11: ಭಾರತೀಯ ರೈಲ್ವೇ ವಿಶ್ವದಲ್ಲೇ ಎತ್ತರದ ಬೃಹತ್ ರೈಲ್ವೇ ಸೇತುವೆಯನ್ನು ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಹರಿಯುವ ಚಿನಾಬ್ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿದ್ದು, 2016ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಉದ್ದೇಶಿತ ಸೇತುವೆ ನದಿ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ನಿರ್ಮಾಣಗೊಳ್ಳಲಿದ್ದು, ಐಫಲ್ ಟವರ್‌ಗಿಂತಲೂ(324 ಮೀ.) 35 ಮೀ. ಎತ್ತರದಲ್ಲಿ ಸೇತುವೆ ತಲೆ ಎತ್ತಲಿದೆ.
ಪ್ರಸ್ತುತ ವಿಶ್ವದ ಎತ್ತರದ ರೈಲ್ವೇ ಸೇತುವೆ ಚೀನಾದ ಬಿಪಾನ್‌ಜಿಯಾಂಗ್(Beipanjiang ) ನದಿಗೆ ಕಟ್ಟಲಾಗಿದ್ದು 275 ಮೀಟರ್ ಎತ್ತರವಿದೆ.[ಗೌಡ್ರು ಬಿಡಲಿರುವ ಬುಲೆಟ್ ರೈಲಿನ ವಿಶೇಷತೆಗಳು!]

1,315 ಮೀ.ಗಳಷ್ಟು ಉದ್ದದ ರೈಲ್ವೇ ಸೇತುವೆ ಸ್ಫೋಟ ಅಥವಾ ಭೂಕಂಪ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಬಲ್ಲ ತಂತ್ರಜ್ಞಾನವನ್ನು ಹೊಂದಿರುವುದು ವಿಶೇಷ. 92 ದಶಲಕ್ಷ ಡಾಲರ್ ವೆಚ್ಚದ ಸೇತುವೆ ಸೇತುವೆಯ ನಿರ್ಮಾಣ ಕೆಲಸವನ್ನು ಕೊಂಕಣ ರೈಲ್ವೇ ವಹಿಸಿಕೊಂಡಿದೆ.
ಈ ಸೇತುವೆಯ ಕಾಮಗಾರಿ ಪೂರ್ಣಗೊಂಡಲ್ಲಿ ಬಾರಾಮುಲ್ಲಾ ಮತ್ತು ಶ್ರೀನಗರ, ಜಮ್ಮುವಿಗೆ ಸಂಪರ್ಕ ಸುಲಭ ಸಾಧ್ಯವಾಗಲಿದೆ. ಸೇತುವೆ ನಿರ್ಮಾಣದಿಂದ ಪ್ರಯಾಣ ಅವಧಿಯ ಆರುವರೆ ಗಂಟೆ ಕಡಿಮೆಯಾಗಲಿದೆ ಎಂದು ರೈಲ್ವೇ ಎಂಜಿನಿಯರೊಬ್ಬರು ಹೇಳಿದ್ದಾರೆ.













Click it and Unblock the Notifications