ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ ತಿಂಗಳ ಲಸಿಕಾ ಗುರಿ ತಲುಪಿದ ಭಾರತ; ಇನ್ನಷ್ಟು ವೇಗಗತಿ ಸಾಧಿಸುವ ನಿರೀಕ್ಷೆ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 1: ದೇಶದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಆಗಸ್ಟ್‌ ತಿಂಗಳಿನಲ್ಲಿ 15 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ಗುರಿ ಹಾಕಿಕೊಂಡಿದ್ದು, ಈ ತಿಂಗಳು 18,38,14,912 ಮಂದಿಗೆ ಲಸಿಕೆ ನೀಡಲಾಗಿದೆ.

ಜೂನ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ 11.95 ಕೋಟಿ ಕೊರೊನಾ ಲಸಿಕೆ ಪ್ರಮಾಣ ಪೂರೈಸುವ ಭರವಸೆ ನೀಡಿತ್ತು. ಆದರೆ ಜೂನ್ ಅಂತ್ಯದಲ್ಲಿ ಈ ಗುರಿ ಸಾಧಿಸಲು ಸುಮಾರು 50 ಲಕ್ಷ ಅಂತರ ಉಂಟಾಗಿತ್ತು.

India Beats Vaccination Expectation in August

ಜುಲೈ ತಿಂಗಳಿನಲ್ಲಿ 13.50 ಕೋಟಿ ಲಸಿಕಾ ಗುರಿ ಹೊಂದಿತ್ತು. ಆದರೆ ಕೊನೆಗೆ 13,45,82,577 ಮಂದಿಗೆ ಕೊರೊನಾ ಲಸಿಕೆ ನೀಡಿ ಬಹುತೇಕ ಗುರಿ ಸಾಧಿಸಿತು. ಇದಾಗ್ಯೂ ಜುಲೈ ತಿಂಗಳಿನಲ್ಲಿ ಲಸಿಕಾ ವೇಗ 12.5% ಏರಿಕೆ ಕಂಡಿತ್ತು.

ಆಗಸ್ಟ್‌ ತಿಂಗಳಿನಲ್ಲಿ ಸುಮಾರು 15 ಕೋಟಿ ಲಸಿಕೆಗಳನ್ನು ನೀಡುವ ಗುರಿ ಹೊಂದಲಾಗಿತ್ತು. ಇದೀಗ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಲಸಿಕೆ ನೀಡಲಾಗಿದೆ. ಈ ತಿಂಗಳಿನಲ್ಲಿ 18,38,14,912 ಮಂದಿಗೆ ಲಸಿಕೆ ನೀಡಿ ಗುರಿಯನ್ನು ತಲುಪಿದೆ. ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ತಿಳಿಸಿದೆ.

ಹೊಸ ಕೊರೊನಾ ರೂಪಾಂತರಿ 'Mu' ಮೇಲೆ ವಿಶ್ವ ಆರೋಗ್ಯ ಸಂಸ್ಥೆ ನಿಗಾಹೊಸ ಕೊರೊನಾ ರೂಪಾಂತರಿ 'Mu' ಮೇಲೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ

ಭಾರತದಲ್ಲಿ ಕೊರೊನಾ ಲಸಿಕೆಯನ್ನು ಇಡೀ ಜನಸಂಖ್ಯೆಗೆ ನೀಡಲು ಆಗಸ್ಟ್‌ ತಿರುವು ನೀಡುವ ತಿಂಗಳಾಗಬಹುದಾದ ಭರವಸೆಯನ್ನೂ ಮೂಡಿಸಿದೆ.

ಆಗಸ್ಟ್‌ ತಿಂಗಳಿನಲ್ಲಿ ದೇಶದಲ್ಲಿ ಲಸಿಕಾ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಎರಡನೇ ಕೊರೊನಾ ಅಲೆ ಉತ್ತುಂಗದಲ್ಲಿದ್ದ ಸಂದರ್ಭ ಲಸಿಕೆಗಳ ಕೊರತೆ ಅತೀವವಾಗಿ ಕಂಡುಬಂದಿತ್ತು. ಇದೀಗ ಲಸಿಕೆ ವಿಷಯದಲ್ಲಿ ಭಾರತ ಉನ್ನತಿ ಸಾಧಿಸುತ್ತಿದೆ ಎಂದು ತಿಳಿಸಿದೆ.

ಭಾರತ ಸರ್ಕಾರದ ಆರೋಗ್ಯ ಸಚಿವಾಲಯದ ಅಂತಿಮ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಜುಲೈ ತಿಂಗಳಿಗಿಂತ ಆಗಸ್ಟ್‌ನಲ್ಲಿ 36.6% ಹೆಚ್ಚು ಲಸಿಕೆಗಳನ್ನು ನೀಡಿದೆ.

India Beats Vaccination Expectation in August

ಆಗಸ್ಟ್‌ ಲಸಿಕಾ ವೇಗ ಭಾರತೀಯರಿಗೆ ಭರವಸೆ ನೀಡಿದೆ. ಡಿಸೆಂಬರ್ ವೇಳೆಗೆ ಭಾರತ ತನ್ನ ಸಂಪೂರ್ಣ ಅಥವಾ ಹೆಚ್ಚಿನ ಜನಸಂಖ್ಯೆಯ, 94 ಕೋಟಿ ಭಾರತೀಯರಿಗೆ ಲಸಿಕೆ ಹಾಕುವ ಹಂತವನ್ನು ತಲುಪುವ ಭರವಸೆಯನ್ನು ಆರೋಗ್ಯ ಸಚಿವಾಲಯ ವ್ಯಕ್ತಪಡಿಸಿದೆ.

ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಿ 228ನೇ ದಿನ ಹೊಸ ದಾಖಲೆಯಾಗಿದೆ. ಮಂಗಳವಾರ ರಾತ್ರಿ 7 ಗಂಟೆ ವೇಳೆಗೆ 1,04,42,184 ಫಲಾನುಭವಿಗಳಿಗೆ ಕೊರೊನಾ ಲಸಿಕೆ ನೀಡಲಾಗಿದೆ.

ದೇಶದಲ್ಲಿ ಈವರೆಗೂ 65,12,14,767 ಫಲಾನುಭವಿಗಳಿಗೆ ಕೊರೊನಾ ಲಸಿಕೆ ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 64,36,13,160 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕೆ 'ಸ್ಮಾರ್ಟ್ ಲಾಕ್‌ಡೌನ್' ಅಗತ್ಯವಿದೆ; ಕೇಂದ್ರಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕೆ 'ಸ್ಮಾರ್ಟ್ ಲಾಕ್‌ಡೌನ್' ಅಗತ್ಯವಿದೆ; ಕೇಂದ್ರ

ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ.

English summary
India Beats Vaccination Expectation in Aug, But Needs to Rapidly Build on Feat for December Deadline
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X