India And Russia: ರಷ್ಯಾ ತೈಲ ಖರೀದಿ ವಿಚಾರದಲ್ಲಿ ದೊಡ್ಡ ಚರ್ಚೆ, ಭಾರತದ ನಡೆ ಬಗ್ಗೆ ಮೂಡಿದೆ ಕುತೂಹಲ
ಭಾರತ ಮತ್ತು ರಷ್ಯಾ ನಡುವೆ ತೈಲ ಖರೀದಿ ವಿಚಾರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಒಪ್ಪಂದಗಳು ನಡೆದು ಹೋಗಿವೆ. ಆದರೆ ಇದನ್ನ ಕೆಡಿಸಲು ಸುತ್ತಮುತ್ತ ಸಾಕಷ್ಟು ಶತ್ರು ದೇಶಗಳು ಪ್ರಯತ್ನ ಮಾಡುತ್ತಾ ಕಾಯುತ್ತಿದ್ದಾರೆ. ಅದರಲ್ಲೂ ಮಿತ್ರರ ವೇಷ ಹಾಕಿರುವ ಶತ್ರುಗಳ ಕಾಟ ಕೂಡ ಭಾರತಕ್ಕೆ ಹೆಚ್ಚಾಗಿದೆ, ಈ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಕೂಡ ಇದೇ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಭಾರತ ಭವಿಷ್ಯದಲ್ಲಿ ರಷ್ಯಾ ತೈಲ ಖರೀದಿ ಮುಂದುವರಿಸುತ್ತಾ? ಎಂಬ ಚರ್ಚೆ ಜೋರಾಗಿದೆ. ಹಾಗಾದರೆ ಭಾರತದ ಮುಂದಿನ ನಡೆ ಏನು? ಯುರೋಪ್ ಜೊತೆಗಿನ ಒಪ್ಪಂದದ ನಂತರ ಅಮೆರಿಕ ಭಾರತದ ಬಳಿ ಬಂದಿದ್ದು ಏಕೆ? ಬನ್ನಿ ತಿಳಿಯೋಣ.
ಜಾಗತಿಕ ಮಟ್ಟದಲ್ಲಿ ಅಮೆರಿಕ ದೊಡ್ಡ ಹೆಸರು ಸಂಪಾದನೆ ಮಾಡಿದ್ದು, ಅಮೆರಿಕ ಎಂದರೆ ಬಹುತೇಕ ಎಲ್ಲರು ಗೌರವ ಕೊಡುವ ಹಂತಕ್ಕೆ ತನ್ನ ಸ್ಥಾನಮಾನ ಗುರುತಿಸಿಕೊಂಡಿದೆ ಜಗತ್ತಿನ ದೊಡ್ಡಣ್ಣ ಅಮೆರಿಕ. ಅಮೆರಿಕ ಸುಖಾಸುಮ್ಮನೆ ಇಷ್ಟು ಹೆಸರು ಮಾಡಿಲ್ಲ ಅಥವಾ ದೊಡ್ಡಣ್ಣ ಎಂಬ ಬಿರುದು ಪಡೆದಿಲ್ಲ. ನಿಜವಾಗಿಯೂ ಅಮೆರಿಕದ ಬಳಿ ಅಷ್ಟು ಶಕ್ತಿ ಹಾಗೂ ಸಾಮರ್ಥ್ಯ ಇದ್ದು, ಆರ್ಥಿಕವಾಗಿ ಕೂಡ ಈ ದೇಶವು ಬಲಶಾಲಿ. ಆದರೆ ಭಾರತ ಮತ್ತು ರಷ್ಯಾ ವಿಚಾರದಲ್ಲಿ ಅಮೆರಿಕ ತೋರಿಸುತ್ತಿರುವ ವರ್ತನೆ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಭಾರತ ಮತ್ತು ರಷ್ಯಾ ಸಂಬಂಧಕ್ಕೆ ಕುತ್ತು?
ಉಕ್ರೇನ್ ವಿರುದ್ಧ ಯಾವಾಗ ರಷ್ಯಾ ಯುದ್ಧ ಶುರು ಮಾಡಿತ್ತೋ ಅಲ್ಲಿಂದ ಮುಂದೆ ಸಾಲು ಸಾಲಾಗಿ ಸಂಕಷ್ಟ ರಷ್ಯಾಗೆ ಎದುರಾಗಿತ್ತು. ಆಗ ಭಾರತವೇ ಬೆಂಬಲ ನೀಡಿ, ರಷ್ಯಾಗೆ ಆರ್ಥಿಕವಾಗಿ ಸಹಾಯ ಕೂಡ ಮಾಡಿದೆ. ಅದರಲ್ಲೂ ರಷ್ಯಾ ಈಗಲೂ ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿದೆ ಎಂದರೆ ಆ ಎಲ್ಲಾ ಸಂಪತ್ತು ಬಹುತೇಕ ಇಲ್ಲಿಂದಲೇ ಬಂದಿದೆ. ಏಕೆಂದರೆ ರಷ್ಯಾ ಸರಬರಾಜು ಮಾಡುವ ಕಚ್ಚಾತೈಲ ಖರೀದಿಯನ್ನ ಯುರೋಪ್ ದೇಶಗಳು ನಿಲ್ಲಿಸಿದ ಸಮಯದಲ್ಲಿ ಭಾರತ ಸಹಾಯಕ್ಕೆ ಬಂದು ತೈಲ ಖರೀದಿ ಮಾಡಿತ್ತು.
ಅಲ್ಲದೆ ಅದೇ ರಷ್ಯಾ ತೈಲವನ್ನು ಪಾಶ್ಚಿಮಾತ್ಯ ದೇಶಗಳಿಗೆ ರಫ್ತು ಮಾಡಿ, ಪರೋಕ್ಷವಾಗಿ ರಷ್ಯಾ ದೇಶದ ತೈಲವನ್ನ ಪಾಶ್ಚಿಮಾತ್ಯರು ಖರೀದಿ ಮಾಡುವಂತೆ ಮಾಡಿತ್ತು. ಆದರೆ ಇದೀಗ ನೇರವಾಗಿ ರಷ್ಯಾ ಮತ್ತು ಭಾರತದ ವ್ಯಾಪಾರ ಸಂಬಂಧ ಕೆಡಿಸಲು ವಿರೋಧಿಗಳು ಮುಂದಾಗಿದ್ದಾರಾ? ಎಂಬ ಅನುಮಾನ ಕೂಡ ಮೂಡಿದೆ. ಅದರಲ್ಲೂ ಅಮೆರಿಕ ಮಾಡಿಕೊಂಡ ವ್ಯಾಪಾರ ಒಪ್ಪಂದ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.












Click it and Unblock the Notifications