ಟೈಮ್ಸ್ ನೌ ವರದಿಗಾರ್ತಿಯನ್ನು 'ಸಾಲೀ' ಎಂದ ಟೀಕಿಸಿದ ಅಶೋಕ್ ಖೇಣಿ

Written By:
Subscribe to Oneindia Kannada

ಸುಮ್ಮನಿರಲಾರದೇ ಏನೋ ಬಿಡ್ಕೊಂಡ್ರು ಅಂತಾರಲ್ಲಾ, ಬಹುಷ: ಇದಕ್ಕೆ ಇರಬೇಕು. ಕಾಂಗ್ರೆಸ್ ಕೃಪಾಪೋಷಿತ ರೆಸಾರ್ಟ್ ರಾಜಕಾರಣದ ಭಾಗವಾಗಿ ಮುಂಬೈಗೆ ಆಗಮಿಸಿದ್ದಾರೆ ಎನ್ನಲಾಗುತ್ತಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಸಾಹೇಬ್ರು, ಟೈಮ್ಸ್ ನೌ ವರದಿಗಾರ್ತಿಯ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.

ಖೇಣಿ ಸೇರಿದಂತೆ ಹತ್ತಕ್ಕೂ ಹೆಚ್ಚು ಪಕ್ಷೇತರ ಶಾಸಕರು ಕಾಂಗ್ರೆಸ್ಸಿನ ಯಶವಂತಪುರದ ಶಾಸಕ ಎಸ್ ಟಿ ಸೋಮಶೇಖರ್ ನೇತೃತ್ವದಲ್ಲಿ ಮುಂಬೈಗೆ ಶನಿವಾರ ( ಜೂ 4) ಆಗಮಿಸಿದ್ದರು. (ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರುಗಳಲ್ಲ)

ಪಕ್ಷೇತರ ಶಾಸಕರ ಜೊತೆ ಮುಂಬೈನ ಐಷಾರಾಮಿ ಜೆಡಬ್ಲ್ಯೂ ಮ್ಯಾರಟ್ ಹೊಟೇಲಿನಲ್ಲಿ ತಂಗಿರುವ ಅಶೋಕ್ ಖೇಣಿಯವರನ್ನು ನೀವು ಮುಂಬೈಗೆ ಬಂದಿರುವ ಉದ್ದೇಶ ಏನು ಎಂದು ಟೈಮ್ಸ್ ನೌ ವರದಿಗಾರ್ತಿ ಪ್ರಶ್ನಿಸಿದಾಗ ಖೇಣಿ ಸಿಟ್ಟಾಗಿ, ಹೊಲಸು ಪದ ಬಳಸಿದ್ದಾರೆ.

ಮಹಿಳಾ ವರದಿಗಾರರ ಜೊತೆ ಖೇಣಿ ನಡೆದುಕೊಂಡ ರೀತಿ ಈಗ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಮುಂಬೈ ಪತ್ರಕರ್ತರ ಸಂಘ, ಖೇಣಿ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

ತಾನು ಬಳಸಿದ ಪದಕ್ಕೆ ಇಬ್ಬರು ವರದಿಗಾರ್ತಿಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರಿಂದ, ಖೇಣಿ ಏನೂ ಹೆಚ್ಚಿನ ಉತ್ತರ ನೀಡದೇ, ನಾನು ನನ್ನ ವ್ಯಾಪಾರ ಸಂಬಂಧ ಕೆಲಸಕ್ಕಾಗಿ ಮುಂಬೈಗೆ ಬಂದಿದ್ದೇನೆಂದು ಕಾರು ಹತ್ತಿ ಹೊರಟು ಹೋಗಿದ್ದಾರೆ. (ಜೆಡಿಎಸ್ ಅಭ್ಯರ್ಥಿಗೆ ಖೇಣಿ ಬೆಂಬಲ)

ಖೇಣಿ ಬಳಸಿದ ಪದವೇನು, ಟ್ವಿಟ್ಟರ್ ನಲ್ಲಿ ಖೇಣಿ ವಿರುದ್ದ ಖಂಡನೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ನೀವು ಬಂದ ಉದ್ದೇಶವೇನು

ನೀವು ಬಂದ ಉದ್ದೇಶವೇನು

ಶನಿವಾರದಿಂದ ನೀವು ಕೆಲವು ಶಾಸಕರ ಜೊತೆ ಮುಂಬೈಗೆ ಬಂದ ಉದ್ದೇಶವೇನು, ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀವು ಬಂದಿದ್ದೀರಾ ಎಂದು ಇಬ್ಬರು ಟೈಮ್ಸ್ ನೌ ಪತ್ರಕರ್ತೆಯರು ಪದೇ ಪದೇ ಖೇಣಿಯವರನ್ನು ಪ್ರಶ್ನಿಸಿದ್ದಾರೆ.

ಅರೆಸ್ಟ್ ಕರೋ ಸಾಲೀಕೋ

ಅರೆಸ್ಟ್ ಕರೋ ಸಾಲೀಕೋ

ವರದಿಗಾರ್ತಿಯರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಅಶೋಕ್ ಖೇಣಿ, ಭದ್ರತಾ ಸಿಬ್ಬಂದಿಗಳನ್ನು ಉದ್ದೇಶಿಸಿ 'ಅರೆಸ್ಟ್ ಕರೋ ಇಸ್ ಸಾಲೀಕೋ'ಎನ್ನುವ ಹೊಲಸು ಪದವನ್ನು ಬಳಸಿದ್ದಾರೆ. ಖೇಣಿ ಬಳಸಿದ ಪದಕ್ಕೆ ಇಬ್ಬರು ವರದಿಗಾರ್ತಿಯರು ಅಲ್ಲೇ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಕುದುರೆ ವ್ಯಾಪಾರಕ್ಕೆ ಬಂದಿದ್ದಾ

ಕುದುರೆ ವ್ಯಾಪಾರಕ್ಕೆ ಬಂದಿದ್ದಾ

ಸಾಲೀ ಪದಪ್ರಯೋಗದಿಂದ ಅವಕ್ಕಾದ ವರದಿಗಾರ್ತಿಯರು, ನೀವು ಏನು ಹೇಳಿದ್ದು ಎಂದು ಪದೇ ಪದೇ ಖೇಣಿಯವರನ್ನು ಪ್ರಶ್ನಿಸಿದ್ದಾರೆ. ಇಲ್ಲಿಗೆ ಬಂದಿದ್ದು ನೀವು ಕುದುರೆ ವ್ಯಾಪರಕ್ಕಾ ಎಂದು ಪ್ರಶ್ನಿಸಿದ್ದಾರೆ. ನಾನೊಬ್ಬ ಉದ್ಯಮಿ, ಬ್ಯೂಸಿನೆಸ್ಸಿಗೆ ಸಂಬಂಧಿಸಿದಂತೆ ಇಲ್ಲಿಗೆ ಆಗಮಿಸಿದ್ದೇನೆಂದು ಹೇಳಿ ಖೇಣಿ ಕಾರು ಹತ್ತಿ ಹೋಗಿದ್ದಾರೆ.

ಖೇಣಿ ಒಬ್ಬರೇ ಅಲ್ಲ

ಖೇಣಿ ಒಬ್ಬರೇ ಅಲ್ಲ, ಕಾಂಗ್ರೆಸ್ಸಿನ ಹೆಚ್ಚಿನ ಶಾಸಕರಿಗೆ ಬುದ್ದಿಯೇ ಇಲ್ಲ

ಅರ್ನಬ್ ಗೋಸ್ವಾಮಿ

ತಮ್ಮ ಸಂಸ್ಥೆಯ ವರದಿಗಾರ್ತಿಯ ಬಗ್ಗೆ ಅಸಭ್ಯವಾಗಿ ಮಾತಾಡಿದ್ದಕ್ಕೆ ಟೈಮ್ಸ್ ನೌ ಪ್ರಮುಖ ಅರ್ನಬ್ ಗೋಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Independent MLA from Bidar South Ashok Kheny, has now landed in controversy. Kheny was caught on the camera abusing a reporter of television news channel Times Now.
Please Wait while comments are loading...