
ರಸ್ತೆ ಅಪಘಾತ ಹೆಚ್ಚಳ: ನ.1ರಿಂದ ಹಿಂಬದಿ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ
ಮುಂಬೈ ಅಕ್ಟೋಬರ್ 31: ಭಾರತದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಘಟನೆಗಳಿಂದಾಗಿ ನಾಗರಿಕ ಅಧಿಕಾರಿಗಳು ರಸ್ತೆ ಸುರಕ್ಷತೆ ಕ್ರಮಗಳು ಮತ್ತು ನಿಯಮಗಳನ್ನು ಹೆಚ್ಚಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಮುಂಬೈ ಪೊಲೀಸರು ವಾಹನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಅನ್ನು ಕಡ್ಡಾಯಗೊಳಿಸಿದ್ದಾರೆ. ಇತ್ತೀಚಿನ ಮುಂಬೈ ಪೊಲೀಸ್ ಮಾರ್ಗಸೂಚಿಗಳ ಪ್ರಕಾರ, ನವೆಂಬರ್ 1, 2022 ರಿಂದ ಹಿಂಭಾಗದ ಸೀಟ್ ಬೆಲ್ಟ್‌ಗಳನ್ನು ಸಹ ಕಡ್ಡಾಯಗೊಳಿಸಲಾಗುತ್ತದೆ.
ಮುಂಬೈನಲ್ಲಿ ಸೀಟ್‌ಬೆಲ್ಟ್ ನಿಯಮ ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಸೀಟ್ ಬೆಲ್ಟ್ ಧರಿಸದೆ ಮೋಟಾರು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಸಹ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮಕ್ಕೆ ಜವಾಬ್ದಾರರಾಗಿರುತ್ತಾರೆ.
ರಸ್ತೆ ಅಪಘಾತದಲ್ಲಿ ಸಾಕು ನಾಯಿ ಗಾಯಗೊಳಿಸಿದರೆ ಅಪರಾಧವಲ್ಲ- ಹೈಕೋರ್ಟ್
ಸುರಕ್ಷತಾ ಬೆಲ್ಟ್ ಸೌಲಭ್ಯವಿಲ್ಲದ ವಾಹನಗಳಿಗೆ ಅದನ್ನು ಸ್ಥಾಪಿಸಲು ನವೆಂಬರ್ 1, 2022 ರವರೆಗೆ ಗಡುವು ನೀಡಲಾಗಿದೆ. ನವೆಂಬರ್ 1, 2022 ರಿಂದ ಮುಂಬೈನಲ್ಲಿ ಪ್ರಯಾಣಿಸುವಾಗ ಎಲ್ಲಾ ಚಾಲಕರು ಮತ್ತು ಮತ್ತು ಸಹ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಬೇಕು.
ಇಲ್ಲವಾದಲ್ಲಿ ಮೋಟಾರು ವಾಹನಗಳ (ತಿದ್ದುಪಡಿ) ಕಾಯಿದೆ, 2019 ರ ಸೆಕ್ಷನ್ 194 (ಬಿ) (1) ಅಡಿಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪತ್ರಿಕಾ ಟಿಪ್ಪಣಿಯಲ್ಲಿ ಸೇರಿಸಲಾಗಿದೆ. ಸೈರಸ್ ಮಿಸ್ತ್ರಿ ಅವರ ಮಾರಣಾಂತಿಕ ರಸ್ತೆ ಅಪಘಾತದ ನಂತರ ಸೀಟ್ಬೆಲ್ಟ್ ಬಗ್ಗೆ ಜಾಗೃತಿ ಹೆಚ್ಚಾಗಿದೆ.