ಉತ್ತರಪ್ರದೇಶದಲ್ಲಿ' ನಿಖಾ ಹಲಾಲ್' ಹೆಸರಲ್ಲಿ ಐವರಿಂದ ಅತ್ಯಾಚಾರ

ಸಂಭಾಲ್, ಸೆಪ್ಟೆಂಬರ್ 3: ಮಹಿಳೆಯೊಬ್ಬಳ ಮೇಲೆ ಪತಿ ಹಾಗೂ ಪತಿಯ ತಂದೆ ಸೇರಿದಂತೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿ ನಿಖಾ ಹಲಾಲ್ ಮಾಡಲು ಪ್ರಯತ್ನಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ.

ನಿಖಾ ಹಲಾಲ್ ಎಂದರೆ ವಿಚ್ಛೇದಿತ ಪತ್ನಿಯನ್ನು ಪತಿ ಮರು ವಿವಾಹವಾಗಬಯಸಿದರೆ ಆಕೆ ಇನ್ನೊಬ್ಬನ ಜೊತೆ ಸಂಸಾರ ನಡೆಸಿ ಬರಬೇಕು ಹಾಗಾಗಿ ತಾನು ಮದುವೆಯಾಗುವುದಲ್ಲದೆ ತನ್ನ ಕುಟುಂಬದ ಇತರೆ ಸದಸ್ಯರೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಪ್ರಚೋದಿಸಿದ್ದ.

ಈ ಅಮಾನವೀಯ ಪದ್ಧತಿ ಅನುಸಾರ ಮಹಿಳೆಯೊಬ್ಬಳ ಮೇಲೆ ಮಾಜಿ ಪತಿಯೊಬ್ಬ ಅತ್ಯಾಚಾರ ನಡೆಸಿ ಆಕೆಯ ಮಾವ ಹಾಗೂ ಇತರೆ ಐವರು ಕೂಡ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಎದುರಾಗಿದೆ.

Including husband, five raped a women: FIR registered

ಎರಡು ವರ್ಷಗಳ ಹಿಂದೆ ನಡೆದಿದ್ ಘಟನೆ ಕುರಿತಂತೆ ಸೆಪ್ಟೆಂಬರ್ ಒಂದರಂದು ಎಫ್‌ಐಆರ್ ದಾಖಲಾಗಿದೆ.ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಹಿಳೆಯ ಮಾವನ ವಿರುದ್ಧ 2016, ಜನವರಿ 3ರಂದು ಕಿರುಕುಳ ಪ್ರಕರಣವನ್ನು ದಾಖಲಿಸಲಾಗಿತ್ತು.

ಈ ಮಧ್ಯೆ 2016ರ ಡಿಸೆಂಬರ್ 24ರಂದು ಎರಡು ಕುಟುಂಬಗಳ ನಡುವೆ ರಾಜಿ ಸಂಧಾನ ನಡೆದು ಆಕೆಯನ್ನು ಮತ್ತೆ ಪತಿಯ ಮನೆಗೆ ಕಳುಹಿಸಲಾಗಿತ್ತು. ಮಹಿಳೆ ತಾನು ನೀಡಿರುವ ದೂರಿನಲ್ಲಿ ತನ್ನ ಮಾವ, ಪತಿ ಹಾಗೂ ಸಂಬಂಧಿಗಳ ವಿರುದ್ಧ ಗೃಹ ಬಂಧನ ಮಾಡಿ ಅತ್ಯಾಚಾರ ನಡೆಸಿರುವುದಾಗಿ ದೂರಿದ್ದಾರೆ.

ನೊಂದ ಮಹಿಳೆ ತನ್ನ ಪತಿ ತನ್ನ ಮೇಲೆ ನಿಕಾ ಹಲಾಲ್ ಮಾಡಿಕೊಳ್ಳುವ ಕುರಿತು ಒತ್ತಡ ಹೇರುತ್ತಿದ್ದು ಇದನ್ನು ವಿರೋಧಿಸದರೂ ಈ ರೀತಿ ಮಾಡಿದ್ದಾರೆ ಎಂದು ದರಿದ್ದಾರೆ. ಬಳಿಕ ಈ ಮಹಿಳೆಯನ್ನು ಕೋಣಯೊಂದರಲ್ಲಿ ಕೂಡಿ ಹಾಕಿ ಮಾವ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಲಾಗಿದೆ.ಈ ಘಟನೆ ಬಳಿಕ 2017 ಅಕ್ಟೋಬರ್ 6ರಂದು ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಪೊಲೀಸರು ದಾಖಲಿಸಿರುವ ಎಫ್‌ಐಆರ್ ನಲ್ಲಿ ತಿಳಿಸಲಾಗಿದೆ.

ಈ ಕುರಿತು ನೊಂದ ಮಹಿಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಪತ್ರವನ್ನು ಬರೆದಿದ್ದು, ತನ್ನ ಕುಟುಂಬದವರಿಂದಲೇ ತನಗೆ ಜೀವ ಬೆದರಿಕೆ ಇದೆ ಎಂದು ದೂರಿದ್ದಾಳೆ. ಈ ಕುರಿತು ಉತ್ತರ ಪ್ರದೇಶದ ಇಡಿಜಿಪಿ ಹೇಳಿಕೆ ನೀಡಿದ್ದು, ಸಾಮೂಹಿಕ ಅತ್ಯಾಚಾರ ನಡೆದಿರುವ ಕುರಿತಂತೆ ಎಫ್‌ಐಆರ್ ದಾಖಲಾಗಿದೆ.. ನೊಂದ ಮಹಿಳೆಯ ಪತಿ, ಮಾವ ಹಾಗೂ ಸಂಬಂಧಿಗಳ ವಿರುದ್ಧ ದೂರು ದಾಖಲಾಗಿದೆ. ಸೆಪ್ಟೆಂಬರ್ ಒಂದರಂದು ಎಫ್‌ಐಆರ್ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+