6 ತಿಂಗಳಲ್ಲಿ 400 ಎನ್ಕೌಂಟರ್, ಯೋಗಿ ಸರ್ಕಾರದ ಹೊಸ ಸಾಧನೆ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಲಕ್ನೋ, ಸೆಪ್ಟೆಂಬರ್ 17: ಉತ್ತರ ಪ್ರದೇಶ ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಗಳನ್ನು ಮಟ್ಟಹಾಕಲು ಉಗ್ರ ಕ್ರಮಗಳನ್ನು ಯೋಗಿ ಆದಿತ್ಯನಾಥ್ ಸರಕಾರ ತೆಗೆದುಕೊಂಡಿದೆ. ಪರಿಣಾಮ ಯೋಗಿ ಅಧಿಕಾರಕ್ಕೆ ಬಂದ ನಂತರ ಕಳೆದ 6 ತಿಂಗಳಲ್ಲಿ 400 ಎನ್ಕೌಂಟರ್ ಗಳಿಗೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ.

ಈ ಎನ್ಕೌಂಟರ್ ಗಳಲ್ಲಿ 15 ಕ್ರಿಮಿನಲ್ ಗಳು ಕೊಲೆಯಾಗಿದ್ದರೆ, 54 ಜನರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಉತ್ತರ ಪ್ರದೇಶ ಡಕಾಯಿತಿ ಮತ್ತು ಸಮಾಜ ವಿರೋಧಿ ಚಟುವಟಿಕೆ ತಡೆ ಕಾಯ್ದೆಯಡಿಯಲ್ಲಿ 69 ಡಕಾಯಿತರ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ.

In Yogi's UP, 400 encounters to bring down crime rate

ಈ ಎನ್ಕೌಂಟರ್ ಗಳಲ್ಲಿ 1,106 ಜನರನ್ನು ಬಂಧಿಸಲಾಗಿದ್ದರೆ, ಕಾರ್ಯಾಚರಣೆ ವೇಳೆ 84 ಜನರು ಗಾಯಗೊಂಡಿದ್ದಾರೆ. ಈ ಎಲ್ಲಾ ಎನ್ಕೌಂಟರ್ ಗಳ ಬಗ್ಗೆ ಜಿಲ್ಲಾಧಿಕಾರಿ ಮಟ್ಟದಲ್ಲಿ ತನಿಖೆಗಳಾಗಿವೆ. ಮತ್ತು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Taking an aggressive approach against crime control, the Yogi Adityanath administration in Uttar Pradesh has carried out over 400 encounters in the past 6 months.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ